ಭಾರತೀಯರಿಗಾಗಿ ಆಹಾರ ಮಾರ್ಗಸೂಚಿ ಬಿಡುಗಡೆ ! ಎಷ್ಟು ಸಕ್ಕರೆ, ಪ್ರೋಟೀನ್ ತೆಗೆದುಕೊಳ್ಳಬೇಕು ಎನ್ನುವುದರ ಸ್ಪಷ್ಟ ಉಲ್ಲೇಖ

Dietary Guidelines for Indians:ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್ ಅಥವಾ NIN, ಹೈದರಾಬಾದ್ ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಗಳನ್ನು  ಬಿಡುಗಡೆ ಮಾಡಿದೆ.

Written by - Ranjitha R K | Last Updated : May 9, 2024, 04:33 PM IST
  • ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
  • ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
  • ಹೈದರಾಬಾದ್ ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ
ಭಾರತೀಯರಿಗಾಗಿ  ಆಹಾರ ಮಾರ್ಗಸೂಚಿ ಬಿಡುಗಡೆ ! ಎಷ್ಟು ಸಕ್ಕರೆ,  ಪ್ರೋಟೀನ್ ತೆಗೆದುಕೊಳ್ಳಬೇಕು ಎನ್ನುವುದರ ಸ್ಪಷ್ಟ ಉಲ್ಲೇಖ  title=

Dietary Guidelines for Indians : ಕಳೆದ ಕೆಲವು ದಶಕಗಳಲ್ಲಿ, ಭಾರತೀಯರ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.   ಯುವಜನರಲ್ಲಿ ಅನೇಕ ಗಂಭೀರ ಕಾಯಿಲೆಗಳು ಕಂಡುಬರುತ್ತವೆ.ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್ ಅಥವಾ NIN, ಹೈದರಾಬಾದ್ ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಗಳನ್ನು  ಬಿಡುಗಡೆ ಮಾಡಿದೆ. 

ಭಾರತೀಯರು ಏನು ತಿನ್ನಬೇಕು? :
ICMR ಡೈರೆಕ್ಟರ್ ಜನರಲ್ ಡಾ.ರಾಜೀವ್ ಬಹ್ಲ್ ಬುಧವಾರ,ಮೇ 8, 2024 ರಂದು ಈ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.ಪ್ರಮುಖ ಸಲಹೆಯೆಂದರೆ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಅಗತ್ಯ ಕೊಬ್ಬಿನಾಮ್ಲಗಳನ್ನು ಬೀಜಗಳು,ಎಣ್ಣೆ ಬೀಜಗಳು ಮತ್ತು ಸಮುದ್ರಾಹಾರದ ಮೂಲಕ ಸಾಧಿಸುವುದು.NIN ಏರ್ ಫ್ರೈಯಿಂಗ್ ಮತ್ತು ಗ್ರಾನೈಟ್ ಲೇಪಿತ ಕುಕ್‌ವೇರ್ ಅನ್ನು ಸಹ ಅನುಮೋದಿಸಿದೆ.ಮೊದಲ ಬಾರಿಗೆ ಸಂಸ್ಥೆಯು ಪ್ಯಾಕೇಜ್ ಮಾಡಿದ ಆಹಾರದ ಲೇಬಲ್‌ಗಳನ್ನು ಅರ್ಥೈಸಲು ಮಾರ್ಗಸೂಚಿಗಳನ್ನು ನೀಡಿದೆ. 

ಇದನ್ನೂ ಓದಿ : ಚಳಿಗಾಲದಲ್ಲಿ ಹಲಸಿನ ಬೀಜಗಳನ್ನು ಹೀಗೆ ಸೇವಿಸಿ, ಮಲಬದ್ಧತೆ ಸೇರಿದಂತೆ ಈ ರೋಗಗಳು ದೂರ ಉಳಿಯುತ್ತವೆ!

ಪ್ರೋಟೀನ್ ಸಪ್ಲಿಮೆಂಟ್ಸ್ ತಪ್ಪಿಸಿ :
NIN ಪ್ರಕಾರ,"ಅಪಾಯಗಳ ಕಾರಣದಿಂದಾಗಿ ಪ್ರೋಟೀನ್  ಸಪ್ಲಿಮೆಂಟ್ಸ್ ಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಿದೆ. ಪ್ರೋಟೀನ್ ಪುಡಿಗಳಲ್ಲಿ ಮೊಟ್ಟೆ, ಹಾಲು ಜೊತೆಗೆ ಸೋಯಾಬೀನ್, ಬಟಾಣಿ ಮತ್ತು ಅಕ್ಕಿಯನ್ನು ಬೆರೆಸಲಾಗುತ್ತದೆ.ಈ ಪುಡಿಗಳಲ್ಲಿ ಸೇರಿಸಲಾದ ಸಕ್ಕರೆ,ನಾನ್ ಕ್ಯಾಲೋರಿಕ್ ಸ್ವೀಟ್ನರ್, ಕೃತಕ ಫ್ಲೇವರ್ ಗಳನ್ನೂ ಹೊಂದಿರುತ್ತದೆ.ಆದ್ದರಿಂದ ಇದನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗಿದೆ. 

ಸಕ್ಕರೆ ಮತ್ತು ಪ್ರೋಟೀನ್ ಪ್ರಮಾಣ ಹೇಗಿರಬೇಕು? :
NIN ಪ್ರಕಾರ, ಒಬ್ಬ ಭಾರತೀಯನು ದಿನಕ್ಕೆ 20 ರಿಂದ 25 ಗ್ರಾಂ ಸಕ್ಕರೆಯನ್ನು ಮಾತ್ರ ಸೇವಿಸಬೇಕು. ಇದಕ್ಕಿಂತ ಹೆಚ್ಚಿನ ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ. ಇನ್ನು ಪ್ರೋಟೀನ್ ಬಗ್ಗೆ ಹೇಳುವುದಾದರೆ ಪ್ರತಿ ಕಿಲೋಗ್ರಾಂ ತೂಕದ ಈ ಪೋಷಕಾಂಶದ 1.6 ಗ್ರಾಂಗಿಂತ ಹೆಚ್ಚಿನ ಸೇವನೆಯು ಯಾವುದೇ ವಿಶೇಷ ಪ್ರಯೋಜನವನ್ನು ನೀಡುವುದಿಲ್ಲ.

ಇದನ್ನೂ ಓದಿ : ಚಳಿಗಾಲದಲ್ಲಿ ಹಲಸಿನ ಬೀಜಗಳನ್ನು ಹೀಗೆ ಸೇವಿಸಿ, ಮಲಬದ್ಧತೆ ಸೇರಿದಂತೆ ಈ ರೋಗಗಳು ದೂರ ಉಳಿಯುತ್ತವೆ!

ಯಾವ ಪಾತ್ರೆಯಲ್ಲಿ ಆಹಾರವನ್ನು ಬೇಯಿಸಬೇಕು? :
ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದು ಸುರಕ್ಷಿತ ಮಾರ್ಗವಾಗಿದೆ.  ಅವು ಪರಿಸರ ಸ್ನೇಹಿ ಮಾತ್ರವಲ್ಲ. ಇದರಲ್ಲಿ ಕಡಿಮೆ ಎಣ್ಣೆ ಬಳಸಿ ಅಡುಗೆ ಮಾಡಬಹುದು. ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳನ್ನು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.170 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ನಾನ್-ಸ್ಟಿಕ್ ಕುಕ್‌ವೇರ್‌ನಲ್ಲಿ ಆಹಾರವನ್ನು ಬೇಯಿಸಬಾರದು, ಏಕೆಂದರೆ ಇದು ಲೇಪನವನ್ನು ಹಾನಿಗೊಳಿಸುತ್ತದೆ ಮತ್ತು ಆಹಾರದೊಂದಿಗೆ ಮಿಶ್ರಣವಾಗುವ ಅಪಾಯವಿದೆ.ಗ್ರಾನೈಟ್ ಕಲ್ಲಿನ ಪಾತ್ರೆಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News