ರಾಹುಲ್ ದ್ರಾವಿಡ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿರಬಹುದು, ಆದರೆ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿಯೊಬ್ಬರು ರಾಹುಲ್ ದ್ರಾವಿಡ್ ಅವರ ಮೊದಲ ಪ್ರೀತಿ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
AB de Villiers: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದು, ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈಗ ಅವರು ಐಪಿಎಲ್ ಮತ್ತು ವಿಶ್ವದ ಯಾವುದೇ ಟಿ20 ಕ್ರಿಕೆಟ್ ಲೀಗ್ನಲ್ಲಿ ಆಡುವುದಿಲ್ಲ. ಡಿವಿಲಿಯರ್ಸ್ ಐಪಿಎಲ್ನ 184 ಪಂದ್ಯಗಳಲ್ಲಿ 40 ಅರ್ಧ ಶತಕ ಮತ್ತು 3 ಶತಕಗಳನ್ನು ಒಳಗೊಂಡಂತೆ ಒಟ್ಟು 5162 ರನ್ ಗಳಿಸಿದ್ದಾರೆ.
T-20 World Cup 2021: ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ವಿಶೇಷ ವಿಜಯವನ್ನು ತಂಡವು ವಿಶೇಷ ರೀತಿಯಲ್ಲಿ ಆಚರಿಸಿದೆ. ಈ ಸಂಭ್ರಮದ ವಿಡಿಯೋ ವೈರಲ್ ಆಗುತ್ತಿದೆ.
ಕಳೆದ ಐಪಿಎಲ್ ಋತುವಿನಲ್ಲಿ ಆ್ಯಂಕರಿಂಗ್ ಮೂಲಕ ಗಮನ ಸೆಳೆದಿದ್ದ ತಮ್ಮ ನೆಚ್ಚಿನ ಆ್ಯಂಕರ್ ಕಿರಾ ನಾರಾಯಣನ್ ಅವರನ್ನು ಕಣ್ತುಂಬಿಕೊಳ್ಳಬೇಕೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಅದು ಸಾಧ್ಯವಾಗಿಲ್ಲ.
Inside Pictures: ಕ್ರಿಕೆಟ್ ದೇವರು (God Of Cricket) ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ (Sachin Tendulkar), ಪ್ರತಿಯೊಂದು ಬ್ಯಾಟಿಂಗ್ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಇದಲ್ಲದೇ, ಅವರು ಕ್ರಿಕೆಟ್ (Cricket)ನಿಂದ ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಸಹ ಗಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.