IPL 2021, RR vs MI: ರಾಜಸ್ಥಾನ್‌– ಮುಂಬೈಗೆ ಇನ್ನೂ ಇದೆ ಪ್ಲೇ ಆಫ್‌ ಚಾನ್ಸ್..!

ಇಂದು ಸೋಲುವ ತಂಡವು ಟೂರ್ನಿಯಿಂದಲೇ ಹೊರಬೀಳಲಿದ್ದು, ಗೆದ್ದ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.

Written by - Puttaraj K Alur | Last Updated : Oct 5, 2021, 04:43 PM IST
  • ಶಾರ್ಜಾದಲ್ಲಿ ಗೆಲುವಿಗಾಗಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಟ
  • ಸೋತವರು ಟೂರ್ನಿಯಿಂದ ಔಟ್, ಗೆದ್ದ ತಂಡಕ್ಕೆ ಇದೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ
  • ಹಾಲಿ ಚಾಂಪಿಯನ್ ಗಳ ನಡುವಿನ ಮುಖಾಮುಖಿಯಲ್ಲಿ ಯಾರಿಗೆ ಸಿಗುತ್ತೆ ಗೆಲುವು..?
IPL 2021, RR vs MI: ರಾಜಸ್ಥಾನ್‌– ಮುಂಬೈಗೆ ಇನ್ನೂ ಇದೆ ಪ್ಲೇ ಆಫ್‌ ಚಾನ್ಸ್..!  title=
ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಟ

ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2021)ಯ ಇಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್(RR vs MI)ಮುಖಾಮುಖಿಯಾಗುತ್ತಿವೆ. ಶಾರ್ಜಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ನಡೆಯಲಿರುವ ಈ ಪಂದ್ಯವು ತುಂಬಾ ಮಹತ್ವ ಪಡೆದುಕೊಂಡಿದೆ. ಉಭಯ ತಂಡಗಳಿಗೂ ಇನ್ನೂ ಕೂಡ ಪ್ಲೇ ಆಫ್ ಪ್ರವೇಶಿಸುವ ಚಾನ್ಸ್ ಇದೆ.

ಇಂದು ಸೋಲುವ ತಂಡವು ಟೂರ್ನಿಯಿಂದಲೇ ಹೊರಬೀಳಲಿದ್ದು, ಗೆದ್ದ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಹೀಗಾಗಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷೆ ಇದೆ. ಪ್ರಸಕ್ತ ಟೂರ್ನಿಯ ಮೊದಲನೇ ಹಂತದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್(Rajasthan Royals) ತಂಡ 2ನೇ ಹಂತದಲ್ಲಿ ಮಂಕಾಗಿದೆ. ಬ್ಯಾಟಿಂಗ್ ವೈಫಲ್ಯದಿಂದಾಗಿ ಮುಂಬೈ ಸೋಲುಗಳ ಮೇಲೆ ಸೋಲು ಕಂಡಿದೆ. 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಮುಂಬೈ ತಂಡ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಅವಕಾಶವಿತ್ತು. ಆದರೆ ರೋಹಿತ್ ಪಡೆ ಅದನ್ನು ಹಾಳು ಮಾಡುಕೊಂಡಿದೆ.  

ಇದನ್ನೂ ಓದಿ: T20 World Cup: ಪಾಕಿಸ್ತಾನ ಅಲ್ಲ, ಆಸ್ಟ್ರೇಲಿಯಾವು ಅಲ್ಲ, ಟಿ 20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಬೆದರಿಕೆಯಾಗಲಿದೆ ಈ ತಂಡ

ಉಭಯ ತಂಡಗಳು ತಲಾ 12 ಪಂದ್ಯಗಳನ್ನು ಆಡಿದ್ದು, ತಲಾ 5ರಲ್ಲಿ ಗೆಲುವು ಹಾಗೂ ತಲಾ 7 ಸೋಲು ಕಂಡಿವೆ. ರನ್ ರೇಟ್ ಆಧಾರದ ಮೇಲೆ ಪಾಯಿಂಟ್ಸ್ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಮುಂಬೈ(Mumbai Indians)ಗಿಂತಲೂ ಮೇಲಿದೆ. ಹೀಗಾಗಿ ಇಂದಿನ ಪಂದ್ಯವು ಉಭಯ ತಂಡಗಳಿಗೂ ತುಂಬಾ ಮಹತ್ವದ್ದಾಗಿದೆ. ಗೆದ್ದ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಹೀಗಾಗಿ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಬಗ್ಗೆ ಅಜೇಯ್ ಜಡೇಜಾ ನೀಡಿದ ಶಾಕಿಂಗ್ ಹೇಳಿಕೆ ಏನು ಗೊತ್ತಾ?

ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಎವಿನ್ ಲೂಯಿಸ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಓಶಾನೆ ಥಾಮಸ್, ಮುಸ್ತಫಿಜುರ್ ರಹಮಾನ್, ತಬ್ರೇಜ್ ಶಮ್ಸಿ, ಗ್ಲೆನ್ ಫಿಲಿಪ್ಸ್, ಚೇತನ್ ಸಕಾರಿಯಾ, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಆಕಾಶ್ ಸಿಂಗ್, ಅನುಜ್ ರಾವತ್, ಕೆಸಿ ಕರಿಯಾ, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಮಯಾಂಕ್ ಮಾರ್ಕಂಡೆ, ಜಯದೇವ್ ಉನದ್ಕಟ್, ಕುಲದೀಪ್ ಯಾದವ್, ಮಹಿಪಾಲ್ ಲೊಮರ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಭ್ ತಿವಾರಿ, ಅನುಕುಲ್ ರಾಯ್, ಸಿಮಾರ್ಜೀತ್ ಸಿಂಗ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಜೇಮ್ಸ್ ನೀಶಮ್, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಮಾರ್ಕೊ ಜಾನ್ಸೆನ್, ಯುಧ್ವೀರ್ ಸಿಂಗ್, ಆಡಮ್ ಮಿಲ್ನೆ, ಧವಳ್ ಕುಲಕರ್ಣಿ, ಜಸ್ಪ್ರೀತ್ ಬುಮ್ರಾ, ಮೊಹ್ಸಿನ್ ಖಾನ್, ನಾಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್.

ಐಪಿಎಲ್‌ ಪಂದ್ಯ: 51

ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್

ದಿನಾಂಕ: ಅಕ್ಟೋಬರ್ 05, ಮಂಗಳವಾರ

ಸ್ಥಳ: ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

ಸಮಯ: ಸಂಜೆ 7.30ಕ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News