Ravindra Mahajani: ಕೊಳೆತ ಸ್ಥಿತಿಯಲ್ಲಿ ಹಿರಿಯ ನಟ ರವೀಂದ್ರ ಮಹಾಜನಿ ಮೃತದೇಹ ಪತ್ತೆ

Marathi Actor Ravindra Mahajani found dead: ಪುಣೆಯ ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ವಾಸವಾಗಿದ್ದರು. ಅವರು ವಾಸಿಸುತ್ತಿದ್ದ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Written by - Puttaraj K Alur | Last Updated : Jul 15, 2023, 10:21 PM IST
  • ಕೊಳೆತ ಸ್ಥಿತಿಯಲ್ಲಿ ಮರಾಠಿ ಚಿತ್ರರಂಗದ ಖ್ಯಾತ ನಟ ರವೀಂದ್ರ ಮಹಾಜನಿ ಮೃತದೇಹ ಪತ್ತೆ
  • 3 ದಿನಗಳ ಹಿಂದೆಯೇ 77 ವರ್ಷದ ಹಿರಿಯ ನಟನ ಸಾವು, ಆತ್ಮಹತ್ಯೆ ಶಂಕೆ
  • ಫ್ಲ್ಯಾಟ್‍ನಲ್ಲಿ ದುರ್ವಾಸನೆ ಬಂದ ಹಿನ್ನೆಲೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದ ಪೊಲೀಸರು
Ravindra Mahajani: ಕೊಳೆತ ಸ್ಥಿತಿಯಲ್ಲಿ ಹಿರಿಯ ನಟ ರವೀಂದ್ರ ಮಹಾಜನಿ ಮೃತದೇಹ ಪತ್ತೆ title=
ಖ್ಯಾತ ನಟ ರವೀಂದ್ರ ಮಹಾಜನಿ ಮೃತದೇಹ ಪತ್ತೆ

ಪುಣೆ: ಕೊಳೆತ ಸ್ಥಿತಿಯಲ್ಲಿ ಮರಾಠಿ ಚಿತ್ರರಂಗದ ಖ್ಯಾತ ನಟ ರವೀಂದ್ರ ಮಹಾಜನಿ ಮೃತದೇಹ ಪತ್ತೆಯಾಗಿದೆ. ಪುಣೆ ಸಮೀಪದ ತಾಲೇಗಾಂವ್ ನಿವಾಸದಲ್ಲಿ ಶುಕ್ರವಾರ ಅವರು ಶವವಾಗಿ ಪತ್ತೆಯಾಗಿದ್ದು, 3 ದಿನಗಳ ಹಿಂದೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

77 ವರ್ಷದ ಹಿರಿಯ ನಟನ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಫ್ಲ್ಯಾಟ್‍ನಲ್ಲಿ ರವೀಂದ್ರ ಮಹಾಜನಿ ಮೃತದೇಹ ಪತ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: 3 ದಶಕಗಳ ನಂತರ ಆ ಸೀನ್‌ಗೆ ಒಪ್ಪಿದ ಕಾಜೋಲ್‌..! ರಿಹರ್ಸಲ್ ಕೂಡ ಮಾಡಿದ್ರು

ಪುಣೆಯ ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ವಾಸವಾಗಿದ್ದರು. ಅವರು ವಾಸಿಸುತ್ತಿದ್ದ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಫ್ಲ್ಯಾಟ್‍ನ ಬಾಗಿಲು ಒಡೆದು ನೋಡಿದಾಗ ನಟನ ಮೃತದೇಹ ಪತ್ತೆಯಾಗಿದೆ ಎಂದು ತಾಳೆಗಾಂವ್ ಎಂಐಡಿಸಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಂಜಿತ್ ಸಾವಂತ್ ಹೇಳಿದ್ದಾರೆ.

3 ದಿನಗಳ ಹಿಂದೆ ಮಹಾಜನಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಅಂದಾಜಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ. ‘ನಾವು ಮುಂಬೈನಲ್ಲಿರುವ ಅವರ ಪುತ್ರನನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ’ ಎಂದು ಸಾವಂತ್ ಹೇಳಿದ್ದಾರೆ. ಮುಂಬೈ ಚಾ ಫೌಜ್ದರ್, ಝೂಂಜ್, ಕಲಾತ್ ನಕಲತ್ ಮುಂತಾದ ಹಲವಾರು ಮರಾಠಿ ಚಿತ್ರಗಳಲ್ಲಿ ಮಹಾಜನಿ ನಟಿಸಿದ್ದಾರೆ. ಆಶುತೋಷ್ ಗೌರಿಕರ್ ಅವರ 2019ರಲ್ಲಿ ಬಿಡುಗಡೆಯಾದ ಪಾಣಿಪತ್ ಚಿತ್ರದಲ್ಲಿ ಕೂಡ ನಟಿಸಿದ್ದರು.

ಇದನ್ನೂ ಓದಿ: ಯಶ್‌ ʼಮೊದಲಾಸಲʼ ನಟಿ ಭಾಮಾ ಫೋಟೋಸ್‌ ವೈರಲ್‌..! ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News