ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸ್ಮಾರಕ ರಕ್ಷಿಸಿ ಎಂದು ಬೀದಿಗಿಳಿದ ವಿಷ್ಣು ಫ್ಯಾನ್ಸ್..!

ಯಾವುದೇ ಕಾರಣಕ್ಕೂ ಸ್ಮಾರಕ ತೆರವು ಮಾಡಬಾರದು ಎಂದು ವಾಣಿಜ್ಯ ಮಂಡಳಿ ಮೊರೆ ಹೋಗಿರುವ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಅಭಿಮಾನಿಗಳು, ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿ ವತಿಯಿಂದ ಫಿಲ್ಮ್ ಚೇಂಬರ್ ಗೆ ಮನವಿಯನ್ನ ಸಲ್ಲಿಸಿದ್ದಾರೆ. ಮಾತ್ರವಲ್ಲ, ವಿಷ್ಣು ಸ್ಮಾರಕವನ್ನ ನೀವು ರಕ್ಷಿಸಲೇಬೇಕು ಅಂತ ಕೇಳಿಕೊಳ್ಳುತ್ತಿದ್ದಾರೆ.

Written by - YASHODHA POOJARI | Edited by - Yashaswini V | Last Updated : Feb 27, 2023, 02:42 PM IST
  • ಸಾಹಸಸಿಂಹ ವಿಷ್ಣು ವರ್ಧನ್ ಅವರು ನಮ್ಮನಗಲಿ 13 ವರ್ಷಗಳು ಕಳೆದಿವೆ.
  • ಆದರೂ ಯಾಕೋ ಏನೋ ಸಮಾಧಿ ವಿಚಾರ ಬಗೆಹರಿಯೋ ಲಕ್ಷಣವೇ ಕಾಣುತ್ತಿಲ್ಲ.
  • ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸ್ಮಾರಕದ ಜೊತೆ ಅಭಿಮಾನಿಗಳಿಗೆ ಭಾವನಾತ್ಮಕ ಸಂಬಂಧವಿದೆ.
ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸ್ಮಾರಕ ರಕ್ಷಿಸಿ ಎಂದು ಬೀದಿಗಿಳಿದ ವಿಷ್ಣು ಫ್ಯಾನ್ಸ್..! title=
Vishnu Fans Protest

ಬೆಂಗಳೂರು: ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸ್ಮಾರಕ ರಕ್ಷಿಸಿ ಎಂದು ಬೀದಿಗಿಳಿದಿದ್ದಾರೆ ವಿಷ್ಣು ಫ್ಯಾನ್ಸ್..! ಮೈಸೂರಿನಲ್ಲಿ ಸಾಹಸಸಿಂಹವಿಷ್ಣುವರ್ಧನ್ ಸ್ಮಾರಕದ ಬೆನ್ನಲ್ಲೆ ಇದೀಗ ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸಮಾಧಿ ಸ್ಥಳಾಂತರದ ವದಂತಿ ಹಿನ್ನೆಲೆ ಅವರ ಅಭಿಮಾನಿಗಳು ಈಗ ಆತಂಕಕ್ಕೆ ಒಳಗಾಗಿದ್ದಾರೆ.

ಯಾವುದೇ ಕಾರಣಕ್ಕೂ ಸ್ಮಾರಕ ತೆರವು ಮಾಡಬಾರದು ಎಂದು ವಾಣಿಜ್ಯ ಮಂಡಳಿ ಮೊರೆ ಹೋಗಿರುವ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಅಭಿಮಾನಿಗಳು, ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿ ವತಿಯಿಂದ ಫಿಲ್ಮ್ ಚೇಂಬರ್ ಗೆ ಮನವಿಯನ್ನ ಸಲ್ಲಿಸಿದ್ದಾರೆ. ಮಾತ್ರವಲ್ಲ, ವಿಷ್ಣು ಸ್ಮಾರಕವನ್ನ ನೀವು ರಕ್ಷಿಸಲೇಬೇಕು ಅಂತ ಕೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ- ಕಬ್ಜ ಚಿತ್ರದ ಮಾಸ್ ಸಾಂಗ್ ರೀಲೀಸ್

ಸಾಹಸಸಿಂಹ ವಿಷ್ಣು ವರ್ಧನ್  ಅವರು ನಮ್ಮನಗಲಿ 13  ವರ್ಷಗಳು ಕಳೆದಿವೆ. ಆದರೂ ಯಾಕೋ ಏನೋ ಸಮಾಧಿ ವಿಚಾರ ಬಗೆಹರಿಯೋ ಲಕ್ಷಣವೇ ಕಾಣುತ್ತಿಲ್ಲ. ಅಭಿಮಾನ್ ಸ್ಟೂಡಿಯೋದಲ್ಲಿರುವ ವಿಷ್ಣು ಸ್ಮಾರಕದ ಜೊತೆ ಅಭಿಮಾನಿಗಳಿಗೆ ಭಾವನಾತ್ಮಕ ಸಂಬಂಧವಿದೆ.

ಇದನ್ನೂ ಓದಿ- ಅಪ್ಪು ಅಭಿಮಾನಿಗಳಿಂದ "13" ಟೀಸರ್ ಬಿಡುಗಡೆ....!

ಕಾಣದ ಕೈಗಳು ಈಗ ಸ್ಮಾರಕ ಎತ್ತಂಗಡಿ ಮಾಡಿಸೋಕೆ ಮುಂದಾಗಿವೆ ಎಂದು ಆತಂಕದಲ್ಲಿರುವ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳು, ವಿಷ್ಣು ಸ್ಮಾರಕ  ಸ್ಥಳಾಂತರ ಬೇಡ ಎಂದು ಮನವಿ ಸಲ್ಲಿಸಿದ್ದಾರೆ. ನಮ್ಮ ಇಂಡಸ್ಟ್ರಿಗೆ ಅದ್ಭುತ ಸಿನಿಮಾಗಳನ್ನ ಕೊಟ್ಟ ಕಲಾವಿದ ವಿಷ್ಣುವರ್ಧನ್ ಅವರ ಆತ್ಮಕ್ಕೆ ನಿಜಕ್ಕೂ ಶಾಂತಿ ಸಿಕ್ಕಿದ್ದೀಯಾ ಅನ್ನೋ ಪ್ರಶ್ನೆ ಅಭಿಮಾನಿಗಳದ್ದಾಗಿದೆ. ಯಾಕಂದ್ರೆ ಸ್ಮಾರಕ ವಿಚಾರ ಎಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು ಇದೀಗ ಮತ್ತೇ ಮುನ್ನಲೆಗೆ ಬಂದಿದೆ. ಸೋ ಮತ್ತೇ ಈ ವಿಚಾರ ಎಲ್ಲಿ ನಿಲ್ಲುತ್ತೋ ಅನ್ನೋ ಚರ್ಚೆ ಕೂಡ ಜೋರಾಗಿದೆ.

http://englishadmin.zeenews.india.com/election/userstatus.php?fbclid=IwA...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News