Vishnuvardhan Birthday: ಸಾಹಸ ಸಿಂಹ ಡಾ.ವಿಷ್ಣುವರ್ಧನ್ 72ನೇ ಹುಟ್ಟುಹಬ್ಬ

ಕನ್ನಡ ಚಿತ್ರರಂಗದ ಹೃದಯವಂತ ಇಂದು ನಮ್ಮೊಂದಿಗಿದ್ದಿದ್ದರೆ ತಮ್ಮ 72ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಆಚರಿಸಿಕೊಳ್ಳುತ್ತಿದ್ದರು.

Written by - YASHODHA POOJARI | Edited by - Puttaraj K Alur | Last Updated : Sep 18, 2022, 10:06 AM IST
  • ಇಂದು ವಿಷ್ಣುದಾದಾ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ 72ನೇ ಹುಟ್ಟುಹಬ್ಬ
  • ಡಿಸೆಂಬರ್ 29ಕ್ಕೆ ವಿಷ್ಣು ದಾದಾ ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ
  • ರಾರಾಜಿಸುತ್ತಿವೆ ಸಾಹಸ ಸಿಂಹನ ಪ್ರಮುಖ ಸಿನಿಮಾಗಳ 40 ಅಡಿ ಎತ್ತರದ 50 ಕಟೌಟ್​ಗಳು
Vishnuvardhan Birthday: ಸಾಹಸ ಸಿಂಹ ಡಾ.ವಿಷ್ಣುವರ್ಧನ್ 72ನೇ ಹುಟ್ಟುಹಬ್ಬ title=
Dr Vishnuvardhan Birthday

 ಬೆಂಗಳೂರು: ವಿಷ್ಣುದಾದಾ, ಸಾಹಸ ಸಿಂಹ, ಅಭಿನಯ ಭಾರ್ಗವ ಹೀಗೆ ಹಲವಾರು ಹೆಸರುಗಳು ಡಾ.ವಿಷ್ಣುವರ್ಧನ್ ಅವರಿಗಿದೆ. 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಎದೆಯಲ್ಲಿ ಸದಾ ನೆಲೆಸಿರೋ ವಿಷ್ಣು ಸರ್ ನಿಜಕ್ಕೂ ಅಮರ..

ಕನ್ನಡ ಚಿತ್ರರಂಗದ ಹೃದಯವಂತ ಇಂದು ನಮ್ಮೊಂದಿಗಿದ್ದಿದ್ದರೆ ತಮ್ಮ 72ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಅವರು ನಮ್ಮನಗಲಿ 13 ವರ್ಷಗಳಾಗಿವೆ. ಕನ್ನಡದ ಕೋಟಿಗೊಬ್ಬನ ಹುಟ್ಟುಹಬ್ಬವನ್ನು ಅಭಿಮಾನಿಗಳು ಇಂದು ವಿಭಿನ್ನವಾಗಿ ತುಂಬಾ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ವಿಷ್ಣು ದಾದ ನಟಿಸಿದ ನಾಗರಹಾವು, ಯಜಮಾನ, ಆಪ್ತ ಮಿತ್ರ, ಆಪ್ತ ರಕ್ಷಕ, ಸೂರ್ಯವಂಶ ಹೀಗೆ ಹಲವಾರು ಸಿನಿಮಾಗಳನ್ನು ಎಷ್ಟು ಬಾರಿ ನೋಡಿದ್ರೂ ಮತ್ತೇ ಮತ್ತೇ ನೋಡಬೇಕೆನಿಸುತ್ತದೆ. 1950 ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ ಜನನವಾಯಿತು. ಸಂಪತ್ ಕುಮಾರ್ ಸಾಹಸ ಸಿಂಹನ ಮೂಲ ಹೆಸರು.

ಇದನ್ನೂ ಓದಿ: Kabza Teaser Released : ಹೇಗಿದೆ ನೋಡಿ ಕಬ್ಜ ಟೀಸರ್! ಉಪ್ಪಿ - ಕಿಚ್ಚನ ಲುಕ್‌ಗೆ ಫ್ಯಾನ್ಸ್‌ ಫಿದಾ

ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿದ್ದ ಹೆಮ್ಮೆಯ ಕನ್ನಡಿಗ, ಕನ್ನಡದ ಕೋಟಿಗೊಬ್ಬ ನಮ್ಮ ಮೈಸೂರಿನ ವಿಷ್ಣು ದಾದ. ತಮ್ಮ 59ನೇ ವಯಸ್ಸಿನಲ್ಲಿ ಅಂದ್ರೆ ಡಿಸಂಬರ್ 30, 2009ರಲ್ಲಿ ಸಹಸ್ರಾರು ಅಭಿಮಾನಿಗಳನ್ನು ಅಗಲಿ ಸ್ವರ್ಗಸ್ತರಾದರು. ಆದರೆ ಇವತ್ತಿಗೂ ಅಭಿಮಾನಿಗಳು ಅವರನ್ನು ದೇವರಂತೆ ಆರಾಧಿಸುತ್ತಾರೆ.

ಇಂದು ಅಂದರೆ ಸೆಪ್ಟೆಂಬರ್ 18 ಡಾ.ವಿಷ್ಣುವರ್ಧನ್ ಜನ್ಮದಿ‌ನ. ಡಿಸೆಂಬರ್ 29ಕ್ಕೆ ವಿಷ್ಣು ದಾದಾ ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆ ಅಭಿಮಾನ್ ಸ್ಟುಡಿಯೋದಲ್ಲಿರುವ ಸಾಹಸ ಸಿಂಹನ ಸಮಾಧಿ ಬಳಿ ಅವರ ಪ್ರಮುಖ ಸಿನಿಮಾಗಳ 40 ಅಡಿ ಎತ್ತರದ 50 ಕಟೌಟ್​ಗಳು ರಾರಾಜಿಸುತ್ತಿವೆ. ಒಂದೇ ಜಾಗದಲ್ಲಿ 40 ಅಡಿಯ ಕಟೌಟ್​ಗಳನ್ನು ಹಾಕುತ್ತಿರುವುದು ಇದೇ ಪ್ರಥಮ ಪ್ರಯತ್ನ. ಭಾರತೀಯ ಚಿತ್ರರಂಗದಲ್ಲಿ ಹುಟ್ಟು ಹಬ್ಬಕ್ಕೆ 50 ಕಟೌಟ್​ ಹಾಕಿಸಿಕೊಳ್ಳುತ್ತಿರುವ ಮೊದಲ ನಟ ಅನ್ನೋ ಹೆಗ್ಗಳಿಕೆಗೆ ವಿಷ್ಣುದಾದಾಗೆ ಸಲ್ಲುತ್ತಿದೆ.

ಇದನ್ನೂ ಓದಿ: ಇಡೀ ವಿಶ್ವವೇ ತಿರುಗಿ ನೋಡುವಂತಿದೆ "ಕಬ್ಜ" ಸಿನಿಮಾ ಟೀಸರ್..!

ವಿಷ್ಣು ಬಾಸ್ ನಟನೆಯ ಅಷ್ಟೂ ಸಿನಿಮಾಗಳು, ಅವರ ನಟನೆ, ಹಾಡು, ಸ್ಟೈಲ್, ಸ್ಮೈಲ್, ಡೈಲಾಗ್ ಇವೆಲ್ಲವೂ ಇವತ್ತಿಗೂ ಪ್ರತಿಯೊಬ್ಬರನ್ನು ಕಾಡುತ್ತಿರುತ್ತವೆ. ಆದರೆ ವಿಧಿಯಾಟಕ್ಕೆ ಬಹಳ ಬೇಗ ನಾವೆಲ್ಲರೂ ವಿಷ್ಣುವರ್ಧನ್ ಸರ್‍ನ ಕಳೆದುಕೊಳ್ಳಬೇಕಾಯಿತು. ಆದರೂ ವಿಷ್ಣುವರ್ಧನ್ ಸರ್ ಸದಾ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಇಂದಿಗೂ ವಿಷ್ಣು ದಾದಾರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News