Amruthadhaare Serial: ಜಮೀನು ವಿಚಾರಕ್ಕೆ ತಕರಾರು ತೆಗೆದ ಕೆಂಚ: ಅಪಾಯದ ಸುಳಿವಿನಲ್ಲಿ ಗೌತಮ್-ಭೂಮಿಕಾ!!

Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಶಕುಂತಲಾ ಗೌತಮ್‌ ಮತ್ತು ಭೂಮಿಕಾಳನ್ನು ಚಿಕ್ಕಮಗಳೂರಿನಲ್ಲಿರುವ ಕಾಫಿ ಎಸ್ಟೇಟ್‌ನ ವಿಚಾರದ ಅಪಾಯದ ಸುಳಿವಿನಲ್ಲಿ ಸಿಲುಕಿಸಲು ಪ್ಲಾನ್‌ ಮಾಡಿದ್ದಾಳೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.  

Written by - Zee Kannada News Desk | Last Updated : May 11, 2024, 11:04 AM IST
  • ಗೌತಮ್ ಆಫೀಸಿಗೆ ಹೊರಡುವ ವೇಳೆಗೆ ಆನಂದ್ ಮನೆಗೆ ಬಂದು, ಒಂದು ದೊಡ್ಡ ಸಮಸ್ಯೆ ಆಗಿದೆ ಎಂದು ಹೇಳುತ್ತಾನೆ.
  • ಅಜ್ಜಿ ಕೆಂಚನನ್ನು ವಿಚಾರಿಸಿ, ನೀನು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಾಳೆ. ಅಜ್ಜಿಯ ಮಾತನ್ನು ಕೇಳದೆಯೇ ಕೆಂಚ ಸ್ವಲ್ಪ ಜೋರು ಮಾಡುತ್ತಾನೆ.
  • ಕೆಂಚ ಭೂಮಿಕಾಳನ್ನು ಕೂಡ ಹೆದರಿಸಿ, 60 ಎಕರೆಯನ್ನು ಮರೆತುಬಿಡಿ ಎಂದು ಹೇಳಿ ಹೋಗುತ್ತಾನೆ.
Amruthadhaare Serial: ಜಮೀನು ವಿಚಾರಕ್ಕೆ ತಕರಾರು ತೆಗೆದ ಕೆಂಚ: ಅಪಾಯದ ಸುಳಿವಿನಲ್ಲಿ ಗೌತಮ್-ಭೂಮಿಕಾ!! title=

Gautham And Bhumika Is In Danger: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ಶಕುಂತಲಾ ಗೌತಮ್‌ ಮತ್ತು ಭೂಮಿಕಾಳನ್ನು ಅಪಾಯದ ಸುಳಿವಿನಲ್ಲಿ ಸಿಲುಕಿಸುವ ಪ್ಲಾನ್‌ ಮಾಡಿದ್ದಾಳೆ. ಗೌತಮ್ ಆಫೀಸಿಗೆ ಹೊರಡುವ ವೇಳೆಗೆ ಆನಂದ್ ಮನೆಗೆ ಬಂದು, ಒಂದು ದೊಡ್ಡ ಸಮಸ್ಯೆ ಆಗಿದೆ  ಎಂದು ಹೇಳುತ್ತಾನೆ. ಚಿಕ್ಕಮಗಳೂರಿನಲ್ಲಿರುವ ಕಾಫಿ ಎಸ್ಟೇಟ್‌ನಲ್ಲಿ 60 ಎಕರೆಯನ್ನು ಮ್ಯಾನೇಜರ್ ಕೆಂಚ ತನ್ನ ಹೆಸರಿಗೆ ಮಾಡಿಕೊಳ್ಳಲು ಈ ಹಿಂದೆ ಗೋಲ್ ಮಾಲ್ ಮಾಡಿದ್ದರ ಬಗ್ಗೆ ಹೇಳುತ್ತಾನೆ.

ಕಾಫಿ ಎಸ್ಟೇಟ್‌ನ ಮ್ಯಾನೇಜರ್‌ ಮಾಡಿದ್ದ ಸಮಸ್ಯೆ ಅನ್ನು ನಾನೇ ಬಗೆಹರಿಸಿದ್ದೆ ಈ ಹಿಂದೆ ಬಗೆಹರಿಸಿದ್ದೆ. ಆದರೆ, ಈಗ ಮತ್ತೆ ತಕರಾರು ತೆಗೆದಿದ್ದಾನೆ. ನಾವೇನಾದರೂ ಮಾಡಲೇಬೇಕಂದು ಆನಂದ್‌ ಹೇಳುತ್ತಾನೆ. ಅದೇ ದಿನವೇ ಕೆಂಚ ನಾಲ್ಕು ಜನ ಹುಡುಗರ ಜೊತೆಗೆ ಗೌತಮ್‌ ಮನೆಗೆ  ಬರುತ್ತಾನೆ. ಆವಾಗ ಅಜ್ಜಿ ಕೆಂಚನನ್ನು ವಿಚಾರಿಸಿ, ನೀನು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಾಳೆ. ಅಜ್ಜಿಯ ಮಾತನ್ನು ಕೇಳದೆಯೇ  ಕೆಂಚ ಸ್ವಲ್ಪ ಜೋರು ಮಾಡುತ್ತಾನೆ.

ಇದನ್ನೂ ಓದಿ: Srirastu Shubhamastu: ದೀಪಿಕಾಗೆ ಟಕ್ಕರ್‌ ಕೊಟ್ಟ ಪೂರ್ಣಿ: ಮಗಳನ್ನು ಹುಡುಕಿಕೊಂಡ ಬಂದ ವನಜಾಗೆ ಶಾಕ್‌!

ಅದೇ ಸಮಯದಲ್ಲಿ ಜೈದೇವ ಅಜ್ಜಿ ಪರ ನಿಂತು ಕೆಂಚನ ಮೇಲೆ ಕೂಗಾಡುತ್ತಾನೆ. ತಕ್ಷಣವೇ ಕೆಂಚ ತನ್ನ ಹತ್ತಿರವಿದ್ದ ಚೀಲದಿಂದ ಮಚ್ಚು ತೆಗೆಯುತ್ತಾನೆ. ಆಗ ಅಜ್ಜಿಗೆ ನಡುಕ ಬರುತ್ತದೆ. ಅದೇ ವೇಳೆ ಮನೆಯಲ್ಲಿ ನಡೆಯುತ್ತಿರುವ ಗಲಾಟೆಯನ್ನು ಕೇಳಿ ಭೂಮಿಕಾ ಬಂದು ಕೆಂಚನ ಅವತಾರವನ್ನು ನೋಡಿ, ಮನೆಯಲ್ಲೆಲ್ಲಾ ರೌಡಿಸಂ ಮಾಡಬೇಡಿ ಎನ್ನುತ್ತಾಳೆ. ಆದರೆ ಕೆಂಚ ಭೂಮಿಕಾಳನ್ನು ಕೂಡ ಹೆದರಿಸಿ, 60 ಎಕರೆಯನ್ನು ಮರೆತುಬಿಡಿ ಎಂದು ಹೇಳಿ ಹೋಗುತ್ತಾನೆ.

ಭೂಮಿಕಾ ಕೆಂಚ ಹೋದ ನಂತರವೂ ಶಾಕ್ ನಲ್ಲೇ ಇರುತ್ತಾಳೆ. ಆಕೆ  ಅಜ್ಜಿ ಯಾರು ಅವರೆಲ್ಲಾ, ಯಾಕೆ ಹಾಗೆ ಹೆದರಿಸಿ ಹೋದರು ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಅಜ್ಜಿ ಚಿಕ್ಕಮಗಳೂರಿನಲ್ಲಿರುವ ತಮ್ಮ ಎಸ್ಟೇಟ್ ಅನ್ನು ನೋಡಿಕೊಳ್ಳುತ್ತಿರುವ ಮ್ಯಾನೇಜರ್. ಈಗ ತನಗೆ ಆಸ್ತಿ ಬೇಕೆಂದು ಲಪಟಾಯಿಸಲು ನೋಡುತ್ತಿದ್ದಾನೆಂದು ಹೇಳುತ್ತಾರೆ. ಅಷ್ಟು ಮಾತ್ರವಲ್ಲದೇ ಅಜ್ಜಿ ಭೂಮಿಕಾ ಬಳಿ ಈ ವಿಚಾರವನ್ನು ಗೌತಮ್ ಗೆ ಯಾವುದೇ ಕಾರಣಕ್ಕೂ ಹೇಳಬೇಡವೆಂದು ಭಾಷೆ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ: Actress Padmaja: ಟಾಪ್‌ ನಟಿ ಪದ್ಮಜಾ ರಾವ್ ನಿಜವಾದ ಪತಿ ಯಾರು ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!

ಇನ್ನೊಂದು ಕಡೆ ಜಮೀನು ವಿಚಾರವಾಗಿ ತಕರಾರು ತೆಗೆಯುಂತೆ ಮಾಡಿರುವ ಪ್ಲಾನ್‌ ಶಕುಂತಲಾಳಾದು ಆಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಗೌತಮ್‌ ಚಿಕ್ಕಮಗಳೂರಿಗೆ ಹೋಗಬೇಕು. ಜೊತೆಗೆ ತನ್ನ ಹೆಂಡತಿ ಭೂಮಿಕಾಳನ್ನು ಕೂಡ ಕರೆದುಕೊಂಡು ಹೋಗು ಹೇಳಿ, ಅದಕ್ಕೆ ಹನಿಮೂನ್‌ ಬಣ್ಣ ಬಳದರಾಯಿತು ಎಂದು ತನ್ನ ಅಣ್ಣನ ಬಳಿ ತನ್ನ ಉಪಾಯವನ್ನು ಹೇಳಿಕೊಳ್ಳುತ್ತಾಳೆ. ಇದರಿಂದ ಗೌತಮ್-ಭೂಮಿಕಾ ಜೀವಕ್ಕೆ ಅಪಾಯವಿದೆಯಾ? ಎಂಬುದನ್ನು ಮುಂಬರುವ ಸಂಚಿಕೆ ನೋಡಿದರೆ ಗೊತ್ತಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News