ಮದುವೆ ಮಾಡಿಸ್ತೀವಿ ಎಂದು ಅವಿವಾಹಿತರನ್ನೇ ಟಾರ್ಗೆಟ್‌ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್!

Fake Marriages: ಮದುವೆ ಹೆಸರಿನಲ್ಲಿ ಅವಿವಾಹಿತರಿಗೆ ಟೋಪಿ ಹಾಕುತ್ತಿದ್ದ 8 ಜನ ಮಹಿಳೆಯರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಘೋಲಿಯ ಕೇಘ್ನಾಂಡ್ ಫಾಟಾ ನಿವಾಸಿ ಜ್ಯೋತಿ ರವೀಂದ್ರ ಪಾಟೀಲ್(35), ವಿದ್ಯಾ ಸತೀಶ್ ಖಂಡೇಲ್ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು 4 ದಿನಗಳ ಕಾಲ ಕಸ್ಟಡಿಯಲ್ಲಿರಿಸಲಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.  

Written by - Puttaraj K Alur | Last Updated : Feb 10, 2024, 12:39 AM IST
  • ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ನಕಲಿ ವಿವಾಹ ಮಾಡಿ ಮೋಸ ಮಾಡುವ ಗ್ಯಾಂಗ್‌
  • ಹೆಣ್ಣು ತೋರಿಸುತ್ತೇವೆಂದು ಅವಿವಾಹಿತರಿಗೆ ಫಂಗನಾಮ ಹಾಕುತ್ತಿದ್ದ ಮೋಸದ ಗ್ಯಾಂಗ್‌
  • ಖತರ್ನಾಕ್ ಗ್ಯಾಂಗ್‌ನ ಸದಸ್ಯರನ್ನು ಬಂಧಿಸಿದ ಪುಣೆಯ ಗ್ರಾಮೀಣ ಅಪರಾಧ ಶಾಖೆ ಪೊಲೀಸರು
ಮದುವೆ ಮಾಡಿಸ್ತೀವಿ ಎಂದು ಅವಿವಾಹಿತರನ್ನೇ ಟಾರ್ಗೆಟ್‌ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್! title=
ಫಂಗನಾಮ ಹಾಕುತ್ತಿದ್ದ ಮೋಸದ ಗ್ಯಾಂಗ್‌!

ನವದೆಹಲಿ: ನೀವು ಇನ್ನೂ ಮದುವೆಯಾಗಿಲ್ವಾ..? ಹಾಗಾದ್ರೆ ತುಂಬಾ ಎಚ್ಚರಿಕೆಯಿಂದಿರಿ. ಹೆಣ್ಣು ತೋರಿಸುತ್ತೇವೆಂದು ನಿಮಗೆ ಫಂಗನಾಮ ಹಾಕುವ ಗ್ಯಾಂಗ್‌ಗಳು ಸಕ್ರಿಯವಾಗಿವೆ ಹುಷಾರ್! ನೀವೇನಾದರೂ ಇವರ ಮಾತು ನಂಬಿದ್ರೆ ಮುಗಿತು ನಿಮ್ಮ ಕಥೆ! ಹೌದು, ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ನಕಲಿ ವಿವಾಹ ಮಾಡಿ ಮೋಸ ಮಾಡುವ ಗ್ಯಾಂಗ್‌ಗಳು ಹುಟ್ಟಿಕೊಂಡಿವೆ. ವಯಸ್ಸಾದ್ರೂ ಇನ್ನೂ ಮದುವೆಯಾಗಿಲ್ಲವೆಂದು ಕೊರಗುತ್ತಿರುವವರು ಇವರ ಮಾತನ್ನು ಸುಲಭವಾಗಿ ನಂಬಿ ಮೋಸ ಹೋಗಿಬಿಡುತ್ತಾರೆ.  

ಒಂದು ನಿರ್ದಿಷ್ಟ ವಯಸ್ಸಿನ ಪುರುಷರೇ ಈ ಗ್ಯಾಂಗ್‌ನ ಟಾರ್ಗೆಟ್. ಅವರು ಮೊದಲು ನಿಮಗೆ ವಧುವನ್ನು ತೋರಿಸುತ್ತೇವೆಂದು ಹೇಳುತ್ತಾರೆ. ವಧು ತೋರಿಸಲು ಶುಲ್ಕ ನೀಡಬೇಕೆಂದು ನಿಮ್ಮ ಬಳಿ ಹಣ ಪಡೆದುಕೊಳ್ಳುತ್ತಾರೆ. ಬಳಿಕ ಮದುವೆಯನ್ನೂ ಮಾಡಿಸುತ್ತಾರೆ. ಆದರೆ ಅದು ಅಸಲಿ ಮದುವೆಯ ಬದಲು ನಕಲಿ ಮದುವೆಯಾಗಿರುತ್ತದೆ. ಹೀಗೆ ನಕಲಿ ಮದುವೆ ಮಾಡಿಸಿ ಅವಿವಾಹಿತರಿಗೆ ಮೋಸ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ಸದಸ್ಯರನ್ನು ಪುಣೆಯ ಗ್ರಾಮೀಣ ಅಪರಾಧ ಶಾಖೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪಲ್ಸ್ ಪೋಲಿಯೋಗೆ ಸಂಬಂಧಿಸಿದಂತೆ ಪೂರ್ವ ವಲಯದಲ್ಲಿ ಸಭೆ: ಧ್ವನಿವರ್ಧಕಗಳ ಮೂಲಕ ಜಾಗೃತಿ

ಮದುವೆ ಹೆಸರಿನಲ್ಲಿ ಅವಿವಾಹಿತರಿಗೆ ಟೋಪಿ ಹಾಕುತ್ತಿದ್ದ 8 ಜನ ಮಹಿಳೆಯರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಘೋಲಿಯ ಕೇಘ್ನಾಂಡ್ ಫಾಟಾ ನಿವಾಸಿ ಜ್ಯೋತಿ ರವೀಂದ್ರ ಪಾಟೀಲ್(35), ವಿದ್ಯಾ ಸತೀಶ್ ಖಂಡೇಲ್ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು 4 ದಿನಗಳ ಕಾಲ ಕಸ್ಟಡಿಯಲ್ಲಿರಿಸಲಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.  

ವಾಡ್ಗಾಂವ್ ಮಾವಲ್ ಪೊಲೀಸ್ ಠಾಣೆಯಲ್ಲಿ ಮಾವಲ್ ಮೂಲದ 32 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರು ಅಶಿಕ್ಷಿತ ಮತ್ತು ನಿರುದ್ಯೋಗಿಯಾಗಿದ್ದರಿಂದ ವಧುವನ್ನು ಹುಡುಕುವುದು ಕಷ್ಟಕರವಾಗಿತ್ತು. ಹೀಗಾಗಿ ಗ್ಯಾಂಗ್ ಲೀಡರ್ ಆಗಿರುವ ಜ್ಯೋತಿ ಪಾಟೀಲ್ ಅವರ ಬಳಿ ವಧುವಿಗಾ ಸಂಪರ್ಕಿಸಿದ್ದರು. ದಿವ್ಯಾ ಖಂಡೇಲ್ ಅವರನ್ನು ಸೋನಾಲಿ ಜಾಧವ್ ಎಂದು ಜ್ಯೋತಿ ದೂರುದಾರರಿಗೆ ಪರಿಚಯಿಸಿದ್ದರು ಮತ್ತು ಮದುವೆಗಾಗಿ ಅವರಿಂದ 2.4 ಲಕ್ಷ ರೂ. ಹಣ ಪಡೆದುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುಮಾರು ದಶಕಗಳ ನಂತರ ಭಾರತದಲ್ಲಿ ನಡೆಯಲಿದೆ 71ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ

ತಾನು ಮದುವೆಯಾಗುತ್ತಿರುವ ವಧುವಿನ ನಡವಳಿಕೆ ಅನುಮಾನಾಸ್ಪದವಾಗಿರುವುದನ್ನು ಕಂಡುಕೊಂಡ ದೂರುದಾರರ ಕುಟುಂಬ ಸಂಶಯ ವ್ಯಕ್ತಪಡಿಸಿತ್ತು. ಬಳಿಕ ದಿವ್ಯಾ ಖಂಡೇಲ್ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವುದನ್ನು ಪತ್ತೆ ಹಚ್ಚಿ ಸ್ಥಳೀಯ ಅಪರಾಧ ಶಾಖೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕಾರ್ಯಾಚರಣೆ ನಡೆಸಿದ ಪೊಲೀಸರು ಜ್ಯೋತಿ ಪಾಟೀಲ್ ಗ್ಯಾಂಗ್ ಅವಿಹಾಹಿತರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿರುವ ವಿಚಾರವನ್ನು ಬಹಿಲಿಗೆಳೆದಿದ್ದಾರೆ.

ಒಂದು ನಿರ್ದಿಷ್ಟ ವಯಸ್ಸನ್ನು ಮೀರಿದ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡಿ ಅವರಿಗೆ ವಧು ತೋರಿಸುವ ನಾಟಕವಾಡಿ ಮದುವೆ ಮಾಡಿಸಲು 2-3 ಲಕ್ಷ ರೂ. ಹಣ ಪಡೆದುಕೊಳ್ಳುತ್ತಿದ್ದರು. ಮದುವೆಯಾದ ಆರೇಳು ದಿನಗಳ ಬಳಿಕ ಆಭರಣ ಮತ್ತು ಹಣ ದೋಚಿ ಪರಾರಿಯಾಗುತ್ತಿದ್ದರು. ಇವರ ಮೋಸದ ಜಾಲಕ್ಕೆ ಸಿಕ್ಕು ಬಲಿಪಶುಗಳಾದ ಬಹುತೇಕರು ಸಮಾಜದಲ್ಲಿ ಮುಖ ತೋರಿಸಲು ಹೆದರಿ ಈ ಗ್ಯಾಂಗ್‌ನ ವಂಚನೆ ಬಗ್ಗೆ ದೂರು ನೀಡಿರಲಿಲ್ಲ.

ಈ ರೀತಿ ಮೋಸ ಹೋದವರು ಧೈರ್ಯವಾಗಿ ಮುಂದೆ ಬಂದು ದೂರು ನೀಡಬೇಕು ಅಂತಾ ಪೊಲೀಸರು ತಿಳಿಸಿದ್ದಾರೆ. ಬಂಧಿತ 8 ಮಂದಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420(ಮೋಸ) ಮತ್ತು 379(ಕಳ್ಳತನ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪುಣೆ ಅಪರಾಧ ಶಾಖೆಯ ಇನ್ಸ್ ಪೆಕ್ಟರ್ ಪದ್ಮಕರ್ ಘನ್ವತ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News