ಮತ್ತೆ ವಿರಾಟ್ ಕೊಹ್ಲಿ ಮಡಿಲಿಗೆ RCB ನಾಯಕತ್ವ…! ಹಳೆ ಗಂಡನ ಪಾದವೇ ಗತಿ ಎಂದಿತೇ ಮ್ಯಾನೇಜ್’ಮೆಂಟ್?

RCB Captaincy: ಇನ್ನೂ ಆರು ಪಂದ್ಯಗಳು ಬಾಕಿಯಿದ್ದು, ಆರ್‌ ಸಿ ಬಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೂ ಪ್ಲೇಆಫ್ ಕನಸು ನನಸಾಗುವುದು ಬಹಳ ಕಷ್ಟ. ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ನೇಮಕ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ

Written by - Bhavishya Shetty | Last Updated : Apr 22, 2024, 08:11 PM IST
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಒಂದು ರನ್ ಅಂತರದಿಂದ ಸೋಲು
    • ಈ ಮೂಲಕ ಬಹುತೇಕ ಪ್ಲೇ ಆಫ್ ಕನಸು ಭಗ್ನಗೊಂಡಿದೆ
    • ಆರು ಪಂದ್ಯಗಳು ಬಾಕಿಯಿದ್ದು, ಆರ್‌ ಸಿ ಬಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ
ಮತ್ತೆ ವಿರಾಟ್ ಕೊಹ್ಲಿ ಮಡಿಲಿಗೆ RCB ನಾಯಕತ್ವ…! ಹಳೆ ಗಂಡನ ಪಾದವೇ ಗತಿ ಎಂದಿತೇ ಮ್ಯಾನೇಜ್’ಮೆಂಟ್? title=
Virat Kohli

RCB Captaincy: ಕಳೆದ ದಿನ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಒಂದು ರನ್ ಅಂತರದಿಂದ ಸೋಲು ಕಂಡಿದೆ. ಈ ಮೂಲಕ ಬಹುತೇಕ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಗೆಲುವಿನ ಸನಿಹಕ್ಕೆ ಬಂದರೂ ಗೆಲ್ಲಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಟೀಂ ಇಂಡಿಯಾದ ಈ ಕ್ರಿಕೆಟಿಗನಿಗೆ ಪತ್ನಿಯಿಂದಲೇ ಚಿತ್ರಹಿಂಸೆ! ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಆರೋಪ.. ಕಾಟ ತಾಳಲಾರದೆ ಕೊನೆಗೂ ಕೊಟ್ಟೇಬಿಟ್ಟ ಡಿವೋರ್ಸ್

ಇನ್ನೂ ಆರು ಪಂದ್ಯಗಳು ಬಾಕಿಯಿದ್ದು, ಆರ್‌ ಸಿ ಬಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೂ ಪ್ಲೇಆಫ್ ಕನಸು ನನಸಾಗುವುದು ಬಹಳ ಕಷ್ಟ. ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ನೇಮಕ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಆರ್ ಸಿ ಬಿ ಹೊಸ ಅಧ್ಯಾಯ ಎಂದು ಸೀಸನ್ ಶುರು ಮಾಡಿತ್ತು. ಆದರೆ ಕೊಂಚವೂ ಏರುಗತಿ ಕಾಣದೆ ಇದೀಗ ಪ್ಲೇ ಆಫ್ ಬಾಗಿಲು ಮುಚ್ಚುವವರೆಗೆ ಕಳಪೆ ಪ್ರದರ್ಶನ ತೋರಿದೆ. ಹೀಗಿರುವಾಗ ಮುಂದಿನ ಪಂದ್ಯ ಅಂದರೆ ಏಪ್ರಿಲ್ 25 ರಂದು SRH ವಿರುದ್ಧದ ನಡೆಯಲಿರುವ ಪಂದ್ಯಕ್ಕೆ ಕೊಹ್ಲಿ ನಾಯಕತ್ವ ವಹಿಸಿಕೊಳ್ಳುತ್ತಾರಾ ಎಂಬ ಅನುಮಾನ ಮೂಡಿದೆ

ಕೊಹ್ಲಿ ಪ್ರಸ್ತುತ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಈ ಹಿಂದೆ ತಂಡವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದ್ದ ಕೊಹ್ಲಿ ಆ ಬಳಿಕ ನಾಯಕತ್ವದಿಂದ ಕೆಳಗಿಳಿದರು, ಆದರೆ RCBಗೆ ಅದುವೇ ಅಪಶಕುನವಾಯಿತೇನೋ…! ಪ್ಲೇ ಆಫ್, ಫೈನಲ್ ಪ್ರವೇಶಿಸಿ ಎಡವುತ್ತಿದ್ದ ತಂಡ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಕೊಂಚ ಮೇಲೇರಲು ಸಹ ಪರದಾಡುತ್ತಿದೆ.

ಇದನ್ನೂ ಓದಿ: ತೇಜಸ್ವಿ ಸೂರ್ಯ ಪರ ಅಣ್ಣಾಮಲೈ ಅಬ್ಬರದ ಪ್ರಚಾರ: ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಮತ್ತೆ ಹಳೆ ಗಂಡನ ಪಾದವೇ ಗತಿ ಎನ್ನುತ್ತಾ, ಆರ್ ಸಿ ಬಿ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ನೀಡಲು ಮಂಡಳಿ ಪ್ಲಾನ್ ಮಾಡುತ್ತಿದೆಯೇ? ಎಂಬ ಶಂಕೆ ವ್ಯಕ್ತವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News