ಧೋನಿ ಜರ್ಸಿ ಸಂಖ್ಯೆ 7ರಂತೆ ಪ್ರೇಯಸಿ ಹೆಸರಲ್ಲಿ 7 ಅಕ್ಷರ ಇಲ್ಲವೆಂದು ಬ್ರೇಕಪ್ ಮಾಡಿಕೊಂಡ ಪ್ರಿಯಕರ! ಇದೆಂಥಾ ಅಭಿಮಾನ??

IPL 2024, CSK vs SRH: ಅಂದಹಾಗೆ ಈ ಪಂದ್ಯದ ವೇಳೆ ಅಭಿಮಾನಿಯೊಬ್ಬರ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೊಬ್ಬನ ಪೋಸ್ಟರ್ ಇದಾಗಿದ್ದು, ಇದೆಂಥಾ ಅಭಿಮಾನ ಎಂಬ ಪ್ರಶ್ನೆ ಮೂಡಿಸುವಂತಿದೆ.  

Written by - Bhavishya Shetty | Last Updated : Apr 29, 2024, 08:21 PM IST
    • ಚೆನ್ನೈ ಸೂಪರ್ ಕಿಂಗ್ಸ್’ಗೆ 10 ಪಂದ್ಯಗಳಲ್ಲಿ ಇದು ಐದನೇ ಗೆಲುವು
    • 10 ಅಂಕಗಳನ್ನು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದೆ
    • ಈ ಪಂದ್ಯದ ವೇಳೆ ಅಭಿಮಾನಿಯೊಬ್ಬರ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ
ಧೋನಿ ಜರ್ಸಿ ಸಂಖ್ಯೆ 7ರಂತೆ ಪ್ರೇಯಸಿ ಹೆಸರಲ್ಲಿ 7 ಅಕ್ಷರ ಇಲ್ಲವೆಂದು ಬ್ರೇಕಪ್ ಮಾಡಿಕೊಂಡ ಪ್ರಿಯಕರ! ಇದೆಂಥಾ ಅಭಿಮಾನ?? title=
Poster

IPL 2024, CSK vs SRH: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) 78 ರನ್‌’ಗಳಿಂದ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಸೋಲಿಸಿತು. ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್’ಗೆ 10 ಪಂದ್ಯಗಳಲ್ಲಿ ಇದು ಐದನೇ ಗೆಲುವು. ಈ ಮೂಲಕ 10 ಅಂಕಗಳನ್ನು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದೆ. ಇನ್ನು ಪ್ರಸ್ತುತ ನಿವ್ವಳ ರನ್ ರೇಟ್ +0.810 ಆಗಿದೆ.

ಇದನ್ನೂ ಓದಿ: T20 ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಗಿಲ್ಲ ಸ್ಥಾನ! ಆಲ್ ರೌಂಡರ್ ಸ್ಥಾನ ತುಂಬೋದು ಯಾರು?

ಅಂದಹಾಗೆ ಈ ಪಂದ್ಯದ ವೇಳೆ ಅಭಿಮಾನಿಯೊಬ್ಬರ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೊಬ್ಬನ ಪೋಸ್ಟರ್ ಇದಾಗಿದ್ದು, ಇದೆಂಥಾ ಅಭಿಮಾನ ಎಂಬ ಪ್ರಶ್ನೆ ಮೂಡಿಸುವಂತಿದೆ.  

ಧೋನಿ ಅಭಿಮಾನಿ ತನ್ನ ಪೋಸ್ಟರ್‌’ನಲ್ಲಿ “ನನ್ನ ಪ್ರೇಯಸಿ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ನಾನು ಅವಳೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದೇನೆ” ಎಂದು ಬರೆದಿದ್ದಾನೆ. ಧೋನಿ ಜರ್ಸಿ ಸಂಖ್ಯೆ ನಂಬರ್ 7 ಆಗಿದೆ.

ಟಾಪ್-4 ರಲ್ಲಿ CSK:

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಈಗ ಐಪಿಎಲ್ 2024ರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದೆ. ಈ ಮೂಲಕ ಲಕ್ನೋ ತಂಡ ಹಿನ್ನಡೆ ಅನುಭವಿಸಿ ಟಾಪ್ 4ರಿಂದ ಹೊರಬಿದ್ದಿದೆ.

ಇದನ್ನೂ ಓದಿ: ಮೋದಿಯವರು ಮುಂದಿನ ಐದು ವರ್ಷದಲ್ಲಿ ಬಡತನ ಮುಕ್ತ ಭಾರತ ಮಾಡಲಿದ್ದಾರೆ: ಬಸವರಾಜ ಬೊಮ್ಮಾಯಿ

ಲಕ್ನೋ ಸೂಪರ್ ಜೈಂಟ್ಸ್ ಪ್ರಸ್ತುತ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲುಗಳೊಂದಿಗೆ 10 ಅಂಕಗಳನ್ನು ಪಡೆದಿದ್ದು, ನೆಟ್ ರನ್ ರೇಟ್ +0.059 ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News