Rakshit Shetty Charlie : ಮುದ್ದಾದ 6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ..! ವಿಡಿಯೋ ಶೇರ್‌ ಮಾಡಿ ಖುಷಿ ಹಂಚಿಕೊಂಡ ರಕ್ಷಿತ್‌

Rakshit Shetty 777 Charlie : 777 ಚಾರ್ಲಿ ಸಿನಿಮಾದ ಕೇಂದ್ರ ಬಿಂದು ಅಂದ್ರೆ ಚಾರ್ಲಿ.. ಕ್ಯೂಟ್‌ ಚಾರ್ಲಿ ಎಲ್ಲರಿಗೂ ತುಂಬಾ ಇಷ್ಟವಾದಳು.. ಸಧ್ಯ ಚಾರ್ಲಿ 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು, ರಕ್ಷಿತ್‌ ಶೆಟ್ಟಿ ಈ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ. 

Written by - Krishna N K | Last Updated : May 15, 2024, 08:40 PM IST
    • 777 ಚಾರ್ಲಿ ಸಿನಿಮಾದ ಕೇಂದ್ರ ಬಿಂದು ಅಂದ್ರೆ ಚಾರ್ಲಿ
    • ಸಧ್ಯ ಚಾರ್ಲಿ 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದಾಳೆ
    • ಈ ಕುರಿತು ನಟ ರಕ್ಷಿತ್‌ ಶೆಟ್ಟಿ ವಿಡಿಯೋ ಹಂಚಿಕೊಂಡಿದ್ದಾರೆ
Rakshit Shetty Charlie : ಮುದ್ದಾದ 6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ..! ವಿಡಿಯೋ ಶೇರ್‌ ಮಾಡಿ ಖುಷಿ ಹಂಚಿಕೊಂಡ ರಕ್ಷಿತ್‌ title=

777 Charlie gave birth to puppies : 777 ಚಾರ್ಲಿ ಭಾರತೀಯರು ಅಚ್ಚು ಮೆಚ್ಚಿನ ಕನ್ನಡ ಸಿನಿಮಾ. ಜನ ಈ ಚಿತ್ರವನ್ನು ಎಷ್ಟು ಇಷ್ಟ ಪಟ್ಟಿದರು ಅಂದ್ರೆ, ಶ್ವಾನವನ್ನು ಮುಟ್ಟಲೂ ಹಿಂದೇಟು ಹಾಕುತ್ತಿದ್ದವರು, ಮನೆಯಲ್ಲಿ ಸಾಕಲು ಪ್ರಾರಂಭಿಸಿದರು. ಅಲ್ಲದೆ, ಸಿನಿಮಾದ ಪಾರ್ಟ್-2ಗಾಗಿ ಜನ ಬೇಡಿಕೆಯಿಡುತ್ತಿದ್ದಾರೆ.. ಇದರ ನಡುವೆ ನಟ ರಕ್ಷಿತ್‌ ಶೆಟ್ಟಿ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ.

ಹೌದು.. ಈ ಸಿನಿಮಾದ ಕೇಂದ್ರ ಬಿಂದು ಅಂದ್ರೆ ಚಾರ್ಲಿ.. ಕ್ಯೂಟ್‌ ಚಾರ್ಲಿ ಎಲ್ಲರಿಗೂ ತುಂಬಾ ಇಷ್ಟವಾದಳು.. ಸಧ್ಯ ಚಾರ್ಲಿ 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು, ರಕ್ಷಿತ್‌ ಶೆಟ್ಟಿ ಈ ಕುರಿತ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸರ್ಪ್ರೈಸ್‌ ಲೈವ್‌.. ಒಂದು ಕಾರಣ ಇದೆ ಲೈವ್‌ ಬರೋಕೆ.. 777 ಚಾರ್ಲಿ ( 777 Charlie) ಸಿನಿಮಾ ರಿಲೀಸ್‌ ಆಗಿ 2 ವರ್ಷ ಆಗ್ತಾ ಬಂತು..

 
 
 
 

 
 
 
 
 
 
 
 
 
 
 

A post shared by Rakshit Shetty (@rakshitshetty)

ಇದನ್ನೂ ಓದಿ: ರೌಡಿ ಬಾಯ್‌ ಜೊತೆ ನ್ಯಾಚುರಲ್‌ ಬ್ಯೂಟಿ..! ಆದ್ರೆ.. ಆ ಸೀನ್‌ ಮಾಡ್ತಾರಾ ಸಾಯಿ ಪಲ್ಲವಿ

ಸಿನಿಮಾ ಪ್ರಾರಂಭವಾದಾಗಿನಿಂದ ನಮಗೆ ಒಂದು ಕೊರತೆ ಇತ್ತು. ಚಾರ್ಲಿಗೆ ವಯಸ್ಸಾಗಿತ್ತು, ಅವಳು ತಾಯಿ ಆದ್ರೆ ಈ ಒಂದು ಜರ್ನಿ ಕಂಪ್ಲೀಟ್‌ ಆಗ್ತಿತ್ತು ಅಂತ. ಕುರಿತು ನಾನು ಪ್ರಮೋದ್‌ಗೆ ಕಾಲ್‌ ಮಾಡಿ ಆಗಾಗ ಕೇಳ್ತಾ ಇದ್ದೆ. ಆದರೆ ಅವರು, ಚಾರ್ಲಿಗೆ ವಯಸ್ಸಾಗಿದೆ, ಏನಾಗುತ್ತೋ ನೋಡ್ಬೇಕು ಅಂತ ಹೇಳಿದ್ರು..

ಆದ್ರೆ ಕೊನೆಗೂ ನಾವು ಅಂದುಕೊಂಡಂತಾಗಿದೆ.. ಮೇ 9 ತಂದು ಚಾರ್ಲಿ 6 ಮುದ್ದಾದ ಪಪ್ಪಿಸ್‌ಗೆ ಜನ್ಮ ನೀಡಿದ್ದಾಳೆ. ಅದಕ್ಕಾಗಿ ಅವಳನ್ನ ನೋಡೋಕೆ ಅಂತ ಮೈಸೂರಿಗೆ ಬಂದೆ ಅಂತ.. ಚಾರ್ಲಿ ತೋರಿಸಿ ಮುದ್ದಾಡಿದ ರಕ್ಷಿತ್‌ ಅವಳ ಮರಿಗಳನ್ನು ಸಹ ವಿಡಿಯೋದಲ್ಲಿ ತೋರಿಸಿದ್ದಾರೆ. ಸಧ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಎಲ್ಲರೂ ಖುಷಿ ವ್ಯಕ್ತ ಪಡಿಸುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News