ಪೆನ್ ಡ್ರೈವ್ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ-NDA ನಿಲುವೇನು? ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ

ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಚಾರವಾಗಿ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು, “ಪ್ರಜ್ವಲ್ ಅವರನ್ನು ಜೆಡಿಎಸ್’ನಿಂದ ಉಚ್ಛಾಟನೆ ಮಾಡಿರುವುದು ಅವರ ಪಕ್ಷ ಹಾಗೂ ಕುಟುಂಬದ ವಿಚಾರ.

Written by - Prashobh Devanahalli | Last Updated : Apr 29, 2024, 06:48 PM IST
    • ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಚಾರವಾಗಿ ಪ್ರಶ್ನೆ
    • ಎನ್’ಡಿಎ ನಿಲುವೇನು ಎಂದು ತಿಳಿಸಬೇಕು ಎಂದ ಡಿಸಿಎಂ ಡಿ.ಕೆ ಶಿವಕುಮಾರ್
    • ಪೆನ್ ಡ್ರೈವ್ ವಿಚಾರವಾಗಿ ತನಿಖೆಯಾಗಲಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ
ಪೆನ್ ಡ್ರೈವ್ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ-NDA ನಿಲುವೇನು? ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ title=
File Photo

ಬೆಳಗಾವಿ/ಕೂಡ್ಲಗಿ: “ಪೆನ್ ಡ್ರೈವ್ ವಿಚಾರದಲ್ಲಿ ನಾವು ಜೆಡಿಎಸ್ ಪಕ್ಷದವರನ್ನು ಪ್ರಶ್ನೆ ಮಾಡುವುದಿಲ್ಲ. ಬಿಜೆಪಿ ಹಾಗೂ ಈ ವಿಚಾರದಲ್ಲಿ ಎನ್’ಡಿಎ ನಿಲುವೇನು ಎಂದು ತಿಳಿಸಬೇಕು” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕೇಳಿದರು.

ಬೆಳಗಾವಿಯಲ್ಲಿ ಮತ್ತು ಕೂಡ್ಲಗಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: CSK ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಪತ್ನಿ ಯಾರು ಗೊತ್ತಾ? ಈಕೆಯೂ ಕ್ರಿಕೆಟರ್… ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಪ್ಲೇಯರ್!

ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ವಿಚಾರವಾಗಿ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು, “ಪ್ರಜ್ವಲ್ ಅವರನ್ನು ಜೆಡಿಎಸ್’ನಿಂದ ಉಚ್ಛಾಟನೆ ಮಾಡಿರುವುದು ಅವರ ಪಕ್ಷ ಹಾಗೂ ಕುಟುಂಬದ ವಿಚಾರ. ಆದರೆ ಈ ಹಗರಣದ ಹಿನ್ನೆಲೆಯಲ್ಲಿ ಮೈತ್ರಿ ಬಗ್ಗೆ ತಮ್ಮ ನಿಲುವೇನು ಎಂಬುದರ ಬಗ್ಗೆ ಬಿಜೆಪಿ ಹಾಗೂ ಎನ್’ಡಿಎ ನಾಯಕರು ಉತ್ತರ ನೀಡಬೇಕು” ಎಂದರು.

ಪೆನ್ ಡ್ರೈವ್ ವಿಚಾರವಾಗಿ ತನಿಖೆಯಾಗಲಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ವಿಚಾರ ನಮ್ಮ ನಿಯಂತ್ರಣದಲ್ಲಿ ಇಲ್ಲ. ಏನೇ ಇದ್ದರು ತನಿಖಾಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ಬಿಜೆಪಿ ನಾಯಕರಾದ ಆರ್.ಅಶೋಕ್, ವಿಜಯೇಂದ್ರ ನುಣುಚಿಕೊಳ್ಳಬಾರದು. ಕುಮಾರಸ್ವಾಮಿ, ಅವರ ಕುಟುಂಬ ಹಾಗೂ ಅವರ ಪಕ್ಷದವರು ಏನಾದರೂ ಮಾಡಿಕೊಳ್ಳಲಿ” ಎಂದರು.

ಬೆಳಗಾವಿಯಲ್ಲಿ ಭಾನುವಾರ ಮಾತನಾಡಿದ್ದ ಪ್ರಧಾನ ಮಂತ್ರಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಾಶವಾಗಿದೆ ಎಂದು ಆರೋಪಿಸಿದ್ದ ಬಗ್ಗೆ  ಕೇಳಿದಾಗ, “ಪ್ರಧಾನಮಂತ್ರಿಗಳು ಯಾವ ರೀತಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿದೆ. ಈ ಕಾರಣಕ್ಕೆ ನಮ್ಮ ರಾಜ್ಯಕ್ಕೆ ಜನ ಬಹಳ ಉತ್ಸುಕತೆಯಿಂದ ಬರುತ್ತಿದ್ದಾರೆ. ಈ ಕಾರಣಕ್ಕೆ ವಾಜಪೇಯಿ ಅವರು ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ಭಾರತದ ಇತರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದಿದ್ದರು. ನಿಮಗೆ ಮತ ಸಿಗಲಿಲ್ಲ ಎಂದು ಕರ್ನಾಟಕ ರಾಜ್ಯದ ಬಗ್ಗೆ ಸುಳ್ಳು ಮಾತನಾಡಿದರೆ ಅದು ಭಾರತಕ್ಕೆ ಮಾಡುವ ಅಪಮಾನ. ವಿದೇಶಿಗರು ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ದೇಶದಲ್ಲೇ ಅತ್ಯುತ್ತಮ ಆಡಳಿತ ಹಾಗೂ ಪೊಲೀಸ್ ವ್ಯವಸ್ಥೆ ಇರುವ ರಾಜ್ಯ ಕರ್ನಾಟಕ” ಎಂದರು.

ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ಯಾವ ರೀತಿ ಪ್ರಕ್ರಿಯೆ ಬರುತ್ತಿದೆ ಎಂದು ಕೇಳಿದಾಗ, “ಕಾಂಗ್ರೆಸ್ ಪಕ್ಷ ದಕ್ಷಿಣ ಭಾಗದ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲಿದ್ದು, ಉತ್ತರ ಭಾಗದ ಕ್ಷೇತ್ರಗಳಲ್ಲೂ ಭರ್ಜರಿ ಜಯ ಸಾಧಿಸಲಿದೆ. ಉತ್ತರ ಕ್ಷೇತ್ರಗಳಲ್ಲಿ ಜನ ನಮಗೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಸಂಸತ್ ಸ್ಥಾನಗಳಲ್ಲಿ ನಾವು ಈ ಹಿಂದಿನ ದಾಖಲೆ ಮುರಿಯುತ್ತೇವೆ” ಎಂದರು.

ಇದನ್ನೂ ಓದಿ: ಭಾರತದ ಶ್ರೇಷ್ಠ ಬೌಲರ್ ಶಾರ್ದೂಲ್ ಠಾಕೂರ್ ಪತ್ನಿ ಎಷ್ಟೊಂದು ಕ್ಯೂಟ್! ಈಕೆಯ ಅಂದದ ಮುಂದೆ ಅನುಷ್ಕಾ ಬ್ಯೂಟಿ ಕೂಡ ಯಾವ ಲೆಕ್ಕಾ!

ಪ್ರಜ್ವಲ್ ರೇವಣ್ಣ ಪರಾರಿಯಾಗಿರುವ ಬಗ್ಗೆ ಕೇಳಿದಾಗ, “ಪ್ರಜ್ವಲ್ ರೇವಣ್ಣ ಅವರ ವಿಚಾರವನ್ನು ತನಿಖಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನೀವು ನನ್ನನ್ನು ಪ್ರಶ್ನಿಸುವ ಬದಲು ಬಿಜೆಪಿ ನಾಯಕರನ್ನು ಪ್ರಶ್ನಿಸಿ. ಈ ಭಾಗದ ಬಿಜೆಪಿ ನಾಯಕರ ನಿಲುವು ಏನು ಎಂದು ತಿಳಿಸಲಿ” ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News