ವಿಶ್ವ ಅಥ್ಲೆಟಿಕ್ಸ್ ದಿನ: ಅಸಾಧಾರಣ ಸಾಧನೆ ತೋರಿದ ಭಾರತೀಯ ಕ್ರೀಡಾಪಟುಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಿಂದ ಗೌರವ

Limca Book of Records: ಪ್ರತಿಯೊಬ್ಬ ಅಥ್ಲೀಟ್ ತನ್ನ ಸಮರ್ಪಣೆ ಮತ್ತು ಶಿಸ್ತಿನ ಜೀವಂತ ಸಾಕಾರವಾಗಿದ್ದುಕೊಂಡು ಅಸಾಧ್ಯವಾದುದನ್ನು ಸಾಧ್ಯ ಎಂದು ತೋರಿಸಿಕೊಡುವಂತಹ ಛಲಗಾರನಾಗಿರುತ್ತಾನೆ. ಸ್ಪರ್ಧೆ ಮತ್ತು ಪದಕಗಳ ಜಗತ್ತನ್ನು ಮೀರಿ ಅಥ್ಲೆಟಿಕ್ಸ್ ಸ್ವಯಂ-ಶೋಧನೆ ಮತ್ತು ಸ್ವಯಂ ಪಾಂಡಿತ್ಯದ ಪ್ರಯಾಣವಾಗಿದೆ.

Written by - Zee Kannada News Desk | Last Updated : May 15, 2024, 04:41 PM IST
    • ಮಾನವ ಪ್ರಯತ್ನದ ವಿಶಾಲವಾದ ಲ್ಯಾಂಡ್ ಸ್ಕೇಪ್’ನೊಳಗೆ ಅಥ್ಲೆಟಿಕ್ಸ್ ಕ್ಷೇತ್ರವಿದೆ
    • ಅಥ್ಲೆಟಿಕ್ಸ್ ಕೇವಲ ಒಂದು ಕ್ರೀಡೆಗಳ ಸಂಗ್ರಹವಾಗಲೀ ಅಥವಾ ಘಟನೆಗಳ ಸರಣಿಯಲ್ಲ
    • ಕ್ರೀಡಾ ಇತಿಹಾಸದಲ್ಲಿ ಅಮೋಘ ಸಾಧನೆ ಮಾಡಿದ ಕ್ರೀಡಾಪಟುಗಳ ಮಾಹಿತಿ
ವಿಶ್ವ ಅಥ್ಲೆಟಿಕ್ಸ್ ದಿನ: ಅಸಾಧಾರಣ ಸಾಧನೆ ತೋರಿದ ಭಾರತೀಯ ಕ್ರೀಡಾಪಟುಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಿಂದ ಗೌರವ title=
File Photo

ಬೆಂಗಳೂರು: ಮಾನವ ಪ್ರಯತ್ನದ ವಿಶಾಲವಾದ ಲ್ಯಾಂಡ್ ಸ್ಕೇಪ್’ನೊಳಗೆ ಅಥ್ಲೆಟಿಕ್ಸ್ ಕ್ಷೇತ್ರವಿದೆ. ಇಲ್ಲಿ ಸಾಮಾನ್ಯ ವ್ಯಕ್ತಿಗಳು ತಮ್ಮೆಲ್ಲಾ ಲೌಕಿಕ ನಿರ್ಬಂಧಗಳನ್ನು ಮೀರಿ ಅಸಾಧಾರಣ ಸಾಧನೆಗಳನ್ನು ಮಾಡುವ ಮೂಲಕ ಚಾಂಪಿಯನ್ ಗಳಾಗುತ್ತಾರೆ. ಅಥ್ಲೆಟಿಕ್ಸ್ ಕೇವಲ ಒಂದು ಕ್ರೀಡೆಗಳ ಸಂಗ್ರಹವಾಗಲೀ ಅಥವಾ ಘಟನೆಗಳ ಸರಣಿಯಲ್ಲ. ಇದು ಮಾನವ ರೂಪದಲ್ಲಿನ ಅಂತರ್ಗತವಾಗಿರುವ ಮಿತಿಯಿಲ್ಲದ ಸಾಮರ್ಥ್ಯಕ್ಕೆ ಒಂದು ಸಾಕ್ಷಿಯಾಗಿದೆ. ಇದು ಗಾಳಿಯ ವಿರುದ್ಧ ಓಡುವ ಓಟಗಾರ, ಗುರುತ್ವಾಕರ್ಷಣೆಯ ಸೆಳೆತವನ್ನು ಸಮರ್ಥವಾಗಿ ಎದುರಿಸುವ ಜಿಗಿತಗಾರ ಅಥವಾ ಜಂಪರ್, ಎಲ್ಲಾ ಇತಿಮಿತಿಗಳನ್ನು ಮೀರಿ ಜಯಿಸುವ ಮ್ಯಾರಥಾನ್ ಓಟಗಾರ.

ಇದನ್ನೂ ಓದಿ: ಟೀಂ ಇಂಡಿಯಾದ ದಿಗ್ಗಜ ಇರ್ಫಾನ್ ಪಠಾಣ್ ಪತ್ನಿ ಯಾರು ಗೊತ್ತಾ? ಮದುವೆಯಾಗಿ 8 ವರ್ಷ ಕಾಲ ಮುಖ ತೋರಿಸದೆ ಬದುಕಿದ್ಳು ಈ ಸುಂದರಿ

ಹೀಗೆ ಪ್ರತಿಯೊಬ್ಬ ಅಥ್ಲೀಟ್ ತನ್ನ ಸಮರ್ಪಣೆ ಮತ್ತು ಶಿಸ್ತಿನ ಜೀವಂತ ಸಾಕಾರವಾಗಿದ್ದುಕೊಂಡು ಅಸಾಧ್ಯವಾದುದನ್ನು ಸಾಧ್ಯ ಎಂದು ತೋರಿಸಿಕೊಡುವಂತಹ ಛಲಗಾರನಾಗಿರುತ್ತಾನೆ. ಸ್ಪರ್ಧೆ ಮತ್ತು ಪದಕಗಳ ಜಗತ್ತನ್ನು ಮೀರಿ ಅಥ್ಲೆಟಿಕ್ಸ್ ಸ್ವಯಂ-ಶೋಧನೆ ಮತ್ತು ಸ್ವಯಂ ಪಾಂಡಿತ್ಯದ ಪ್ರಯಾಣವಾಗಿದೆ.

ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ದಿನದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ತನ್ನ ಪುಟಗಳಲ್ಲಿ ಜಗತ್ತಿನ ಕ್ರೀಡಾ ಇತಿಹಾಸದಲ್ಲಿ ಅಮೋಘ ಸಾಧನೆ ಮಾಡಿದ ಕ್ರೀಡಾಪಟುಗಳ ಮಾಹಿತಿಯನ್ನು ಪ್ರಕಟಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಆರಂಭವಾದ ದಿನದಿಂದ ಮಾನವನ ಆಕಾಂಕ್ಷೆ ಮತ್ತು ಸಾಧನೆಯ ದಾರಿದೀಪವಾಗಿದೆ. ಅಪ್ರತಿಮ ಸಮರ್ಪಣೆ ಮತ್ತು ಸಾಧನೆಯ ಹಾದಿಯನ್ನು ಸೆರೆಹಿಡಿಯುತ್ತಾ ಬಂದಿದೆ. ಅದರ ಪುಟಗಳಲ್ಲಿ ವೈವಿಧ್ಯಮಯ ಅಥ್ಲೆಟಿಕ್ ಡೊಮೇನ್ ಗಳಲ್ಲಿ ಪ್ರತಿಭೆಯ ಶ್ರೀಮಂತ ಇತಿಹಾಸವನ್ನು ಪ್ರದರ್ಶಿಸುವ ಗಮನಾರ್ಹ ಸಾಹಸಗಳ ಕಥೆಗಳಿವೆ.

ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಕ್ರೀಡಾ ಸಾಧಕರ ಮಾಹಿತಿಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಮೂದಿಸಲಾಗಿದೆ. ಈ ಪೈಕಿ ಕೆಲವು ಅತ್ಯದ್ಭುತ ಸಾಧಕರ ಮಾಹಿತಿ ಇಲ್ಲಿದೆ.

•             2023 ರಲ್ಲಿ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಜಾವೆಲಿನ್ ಥ್ರೋ ವಿಭಾಗದ ಫೈನಲ್ ನಲ್ಲಿ 88.17 ಮೀಟರ್ ಎಸೆದು ಮೊದಲಿಗರಾಗಿ ಹೊರಹೊಮ್ಮಿದರು.

•             ಜ್ಯೋತಿ ಯರ್ರಾಜಿ 2023 ರ ಜುಲೈನಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ  ಮಹಿಳಾ 100 ಮೀಟರ್ ಹರ್ಡಲ್ಸ್ ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟು ಕೀರ್ತಿ ಮೆರೆದಿದ್ದರು. ಈ ದೂರವನ್ನು ಕೇವಲ 13.09 ಸೆಕೆಂಡುಗಳಲ್ಲಿ ಓಡಿ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು.

•             ದುತಿ ಚಂದ್ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಎಲ್ಲಾ ಅಡೆತಡೆಗಳನ್ನು ಮೀರಿ ಪ್ರಸ್ತುತ ಮಹಿಳಾ 100 ಮೀಟರ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ದುತಿ ಚಂದ್ 2019 ರಲ್ಲಿ ಯುನಿವರ್ಸಿಯಾಡ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಓಟಗಾರಳಾಗಿದ್ದಾರೆ. LGBTQ+ ಕ್ರೀಡಾಪಟುವಾಗಿ ಅವರ ಧೈರ್ಯದ ನಿಲುವು ಪಾಲ್ಗೊಳ್ಳುವಿಕೆ ಮತ್ತು ಸಾಧನೆಗೆ  ಒಂದು ಉತ್ತಮ ಉದಾಹರಣೆಯಾಗಿದ್ದಾರೆ.

•             ರಮಾಬಾಯಿ. ಇವರು 105 ವರ್ಷದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಅತ್ಯಂತ ಹಿರಿಯ ಚಿನ್ನದ ಪದಕ ವಿಜೇತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಛಲ ಮತ್ತು ಬದ್ಧತೆ ಇತರರಿಗೆ ಮಾದರಿಯಾಗಿದೆ. ಗುಜರಾತಿನ ವಡೋದರದಲ್ಲಿ ನಡೆದ ನ್ಯಾಷನಲ್ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿನ 100 ಮೀಟರ್ ಸ್ಪರ್ಧೆಯಲ್ಲಿ ಮೊದಲಿಗರಾಗಿ ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಸಾಧನೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

•             ಅಂಜು ಬಾಬಿ ಜಾರ್ಜ್. ಇವರು ಇಂದಿಗೂ ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದ ಐಕಾನ್ ಆಗಿದ್ದಾರೆ. IAAF ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟುವಾಗಿದ್ದು, ಇಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಪ್ರೇರಕರಾಗಿದ್ದಾರೆ. ಲಾಂಗ್ ಜಂಪ್ ನಲ್ಲಿ ಅವರು ತೋರಿದ ಅಸಾಧಾರಣ ಸಾಧನೆಯು ಅಥ್ಲೆಟಿಕ್ಸ್ ಸಮುದಾಯದಲ್ಲಿ ಅವರನ್ನು ರೋಲ್ ಮಾಡೆಲ್ ಎಂದು ಪರಿಗಣಿಸುವಂತೆ ಮಾಡಿದೆ. ಅವರ ಈ ಸಾಧನೆಯನ್ನು ಪರಿಗಣಿಸಿ 2014 ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನ ಮಲಯಾಳಂ ಆವೃತ್ತಿಯ `ಮಹಿಳಾ ಸಬಲೀಕರಣ’ ವಿಷಯದ ಬಿಡುಗಡೆ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.

ಈ ಬಗ್ಗೆ ಮಾತನಾಡಿದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಕನ್ಸಲ್ಟಿಂಗ್ ಎಡಿಟರ್ ಮತ್ತು ಪಬ್ಲಿಶರ್ ವತ್ಸಲಾ ಕೌಲ್ ಬ್ಯಾನರ್ಜಿ, ”ವಿಶ್ವ ಅಥ್ಲೆಟಿಕ್ಸ್ ದಿನವು ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಕ್ರೀಡಾಪಟುಗಳು ಪ್ರದರ್ಶಿಸುವ ಅದ್ಭುತ ಸಾಧನೆಯು ಎಲ್ಲರ ಮನಸಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಗಾಗಿ ಜಗತ್ತಿನಾದ್ಯಂತ ವೈವಿಧ್ಯಮಯ ಹಿನ್ನೆಲೆ ಮತ್ತು ವಿಭಾಗಗಳ ಕ್ರೀಡಾಪಟುಗಳ ಅಸಾಧಾರಣವಾದ ಸಾಧನೆಗಳನ್ನು ಗುರುತಿಸಲು ಮತ್ತು ಅಂತಹ ಸಾಧಕರನ್ನು ಗೌರವಿಸಲು ಇದು ಒಂದು ಅವಕಾಶವನ್ನು ನೀಡುತ್ತದೆ ಮತ್ತು ಪ್ರತಿನಿಧಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ಕೊಕಾಕೋಲಾ ಕಂಪನಿಯ ಇಂಡಿಯಾ ಮತ್ತು ಸೌತ್ ವೆಸ್ಟ್ ಏಷ್ಯಾ ಆಪರೇಟಿಂಗ್ ಯುನಿಟ್’ನ ಮಾರ್ಕೆಟಿಂಗ್ ಫಾರ್ ಹೈಡ್ರೇಶನ್, ಸ್ಪೋರ್ಟ್ಸ್ ಅಂಡ್ ಟೀ ವಿಭಾಗದ ಹಿರಿಯ ನಿರ್ದೇಶಕ ರುಚಿರಾ ಭಟ್ಟಾಚಾರ್ಯ ಮಾತನಾಡಿ, ``ಕೊಕಾಕೋಲಾ ಇಂಡಿಯಾದಲ್ಲಿ ನಾವು ಸ್ಪೂರ್ತಿ, ಸಬಲೀಕರಣ ಮತ್ತು ನೈಜ ಧನಾತ್ಮಕ ಪ್ರಭಾವವನ್ನು ಸೃಷ್ಟಿಸಲು ಕ್ರೀಡೆಯ ಪರಿವರ್ತಕ ಶಕ್ತಿಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಭಾರತೀಯ ಅಥ್ಲೀಟ್ ಗಳ ಸಾಧನೆಗಳನ್ನು ಗುರುತಿಸಿ ಗೌರವಿಸಲು ಮತ್ತು ಪ್ರೇಕ್ಷಕರಲ್ಲಿ ಹೆಮ್ಮೆಯನ್ನು ಬೆಳೆಸುವ ನಿಟ್ಟಿನಲ್ಲಿ ನಾವು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮೂಲಕ ಅವರ ಸಾಧನೆಗಳಿಗೆ ಗೌರವವನ್ನು ಸಲ್ಲಿಸುತ್ತೇವೆ” ಎಂದರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನ 33 ನೇ ಆವೃತ್ತಿಯು `ಇಂಡಿಯಾ ಅಟ್ ಹರ್ ಬೆಸ್ಟ್’ ಎಂಬ ಥೀಮ್ ಅನ್ನು ಹೊಂದಿದ್ದು, ಭಾರತೀಯ ಕ್ರೀಡಾಪಟುಗಳ ಸಾಧನೆಗಳನ್ನು ಹೊರಜಗತ್ತಿಗೆ ತೋರಿಸುವ ಕೆಲಸ ಮಾಡುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಭಾರತೀಯರ ಸಾಧನೆಗಳನ್ನು ವಿವರಿಸುವ ಅದರ ಪರಂಪರೆಗೆ ತಕ್ಕಂತೆ ಮಾಹಿತಿಗಳನ್ನು ನೀಡುತ್ತಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

ಅಸಾಮಾನ್ಯ ಸಾಧನೆಗಳು, ಅಸಾಧಾರಣ ಪ್ರದರ್ಶನದ ಯಶೋಗಾಥೆಗಳು ಮತ್ತು ಛಲಬಿಡದ ಸಾಧಕರ ವಿಜಯಗಳ ವ್ಯಾಪಕವಾದ ಶ್ರೇಣಿಯನ್ನು ಪ್ರಸ್ತುತಪಡಿಸುತ್ತದೆ. ಇದಲ್ಲದೇ, ಕೊಕಾಕೋಲಾ ಇಂಡಿಯಾ ಇತ್ತೀಚೆಗೆ #SheTheDifference ಎಂಬ ಅಭಿಯಾನದ ಭಾಗವಾಗಿ ಅಂಜು ಬಾಬಿ ಸ್ಪೋರ್ಟ್ಸ್ ಫೌಂಡೇಶನ್ ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿತ್ತು. ಈ ಸಹಭಾಗಿತ್ವವು ನಿರ್ಣಾಯಕವಾದ ಬೆಂಬಲ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಮಹಿಳಾ ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸುವ ಕೋಕಾಕೋಲಾದ ಬದ್ಧತೆಯನ್ನು ಸೂಚಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News