ರಾಮಾಯಣವನ್ನು ಉಲ್ಲೇಖಿಸಿ ಪತ್ರ ಪ್ರಧಾನಿ ಮೋದಿಗೆ ಪತ್ರ ಬರೆದ ಬ್ರೆಜಿಲಿಯನ್ ಅಧ್ಯಕ್ಷ

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಾಚೀನ ಭಾರತೀಯ ಧಾರ್ಮಿಕ ಪಠ್ಯ ರಾಮಾಯಣವನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ.

Last Updated : Apr 8, 2020, 10:31 PM IST
ರಾಮಾಯಣವನ್ನು ಉಲ್ಲೇಖಿಸಿ ಪತ್ರ ಪ್ರಧಾನಿ ಮೋದಿಗೆ ಪತ್ರ ಬರೆದ ಬ್ರೆಜಿಲಿಯನ್ ಅಧ್ಯಕ್ಷ  title=

ನವದೆಹಲಿ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಾಚೀನ ಭಾರತೀಯ ಧಾರ್ಮಿಕ ಪಠ್ಯ ರಾಮಾಯಣವನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ.

ಕೊರೊನಾವೈರಸ್ COVID-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ರಫ್ತು ನಿಷೇಧವನ್ನು ತೆಗೆದುಹಾಕುವ ಪಿಎಂ ಮೋದಿಯವರ ನಿರ್ಧಾರವನ್ನು ಅಧ್ಯಕ್ಷ ಬೋಲ್ಸನಾರೊ ಅವರು ತಮ್ಮ ಪತ್ರದಲ್ಲಿ ರಾಮಾಯಣದ ಸಂಜೀವನಿಗೆ ಉಲ್ಲೇಖಿಸಿದ್ದಾರೆ.

"ಭಗವಾನ್ ರಾಮನ ಸಹೋದರ ಲಕ್ಷ್ಮಣನ ಪ್ರಾಣ ಉಳಿಸಲು ಭಗವಾನ್ ಹನುಮಾನ್ ಹಿಮಾಲಯದಿಂದ ಪವಿತ್ರ ಔಷಧಿಯನ್ನು ತಂದಂತೆಯೇ, ಮತ್ತು ಯೇಸು ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಗುಣಪಡಿಸಿದನು ಮತ್ತು ಬಾರ್ಟಿಮಿಯುಗೆ ದೃಷ್ಟಿಯನ್ನು ಪುನಃಸ್ಥಾಪಿಸಿದನು,  ಈಗ ಅದೇ ರೀತಿಯಾಗಿ ಭಾರತ ಮತ್ತು ಬ್ರೆಜಿಲ್ ಈ ಜಾಗತಿಕ ಬಿಕ್ಕಟ್ಟನ್ನು ಪಡೆಗಳನ್ನು ಎಲ್ಲರ ಜನರ ಏಳಿಗೆಗಾಗಿ  ಸೇರಿಕೊಂಡು ಇದರಿಂದ ಹೊರ ಬರಲಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವೆಂದರೆ ಈ  ಪತ್ರವನ್ನು ಬ್ರೆಜಿಲ್ ಅಧ್ಯಕ್ಷರು ಹನುಮಾನ್ ಜಯಂತಿ ದಿನ ಪಿಎಂ ಮೋದಿಗೆ ಕಳುಹಿಸಿದ್ದಾರೆ.

ಬ್ರೆಜಿಲ್ ಅಧ್ಯಕ್ಷರು ಬರೆದ ಪತ್ರದಲ್ಲಿ ಸಂಜೀವನಿ ಬೂಟಿಯ ಉಲ್ಲೇಖವು ಮುಖ್ಯವಾದುದು ಏಕೆಂದರೆ ಅವರು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ರಫ್ತು ಮಾಡುವಂತೆ ಭಾರತವನ್ನು ಕೋರಿದ್ದಾರೆ, ಇದನ್ನು COVID-19ವಿರುದ್ಧದ ಹೋರಾಟದಲ್ಲಿ ಕೆಲವು ತಜ್ಞರು ಪ್ರಮುಖ ಪಾತ್ರ ವಹಿಸಲಿರುವ  ಔಷಧ ಎಂದು ಕರೆದಿದ್ದಾರೆ.

'ಈ ಕಷ್ಟದ ಸಮಯದಲ್ಲಿ ಬ್ರೆಜಿಲ್ ಅಧ್ಯಕ್ಷರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಪ್ರಧಾನಿ ಭರವಸೆ ನೀಡಿದರು. COVID-19 ಪರಿಸ್ಥಿತಿ ಮತ್ತು ಅದರ ಉದಯೋನ್ಮುಖ ಸವಾಲುಗಳಿಗೆ ಸಂಬಂಧಿಸಿದಂತೆ ತಮ್ಮ ಅಧಿಕಾರಿಗಳು ನಿಯಮಿತವಾಗಿ ಸಂಪರ್ಕದಲ್ಲಿರುತ್ತಾರೆ ಎಂದು ಅವರು ಒಪ್ಪಿಕೊಂಡರು ಎಂದು ಭಾರತ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Trending News