WhatsApp: ಶೀಘ್ರದಲ್ಲೇ ಬಳಕೆದಾರರಿಗೆ ಸಿಗಲಿದೆ ಗಿಫ್ಟ್, ಸುಲಭವಾಗಲಿದೆ ಫೋಟೋ ಲೈಬ್ರರಿ ಪ್ರವೇಶ

WhatsApp: ಜಗತ್ತಿನ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಇದರ ಸಹಾಯದಿಂದ ಬಳಕೆದಾರರಿಗೆ ಫೋಟೋ ಲೈಬ್ರರಿಯನ್ನು ಪ್ರವೇಶಿಸುವುದು ಇನ್ನೂ ಸುಲಭವಾಗಿಲಿದ್ದು,  ಮಾಧ್ಯಮ ಫೈಲ್‌ಗಳನ್ನು ತಮ್ಮ ಸಂಪರ್ಕಗಳಿಗೆ ಕಳುಹಿಸುವ ಪ್ರಕ್ರಿಯೆಯೂ ಸರಳವಾಗಲಿದೆ. 

Written by - Yashaswini V | Last Updated : Apr 9, 2024, 11:21 AM IST
  • ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವ ವೇದಿಕೆ ವಾಟ್ಸಾಪ್
  • ವಾಟ್ಸಾಪ್ ಆಗಾಗ್ಗೆ ಹಲವಾರು ವೈಶಿಷ್ಟ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ.
  • ಇದರ ಉದ್ದೇಶವು ಬಳಕೆದಾರರ ಅನುಭವವನ್ನು ಸುಧಾರಿಸುವುದು.
WhatsApp: ಶೀಘ್ರದಲ್ಲೇ ಬಳಕೆದಾರರಿಗೆ ಸಿಗಲಿದೆ ಗಿಫ್ಟ್, ಸುಲಭವಾಗಲಿದೆ ಫೋಟೋ ಲೈಬ್ರರಿ ಪ್ರವೇಶ  title=

WhatsApp New Feature: ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಆಗಾಗ್ಗೆ, ತನ್ನ ಬಳಕೆದಾರರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ, ವಾಟ್ಸಾಪ್, ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದ್ದು, ಇದರ ಮೂಲಕ ಫೋಟೋ ಹಂಚಿಕೆ ಇನ್ನೂ ಸರಳವಾಗಲಿದೆ. 

ಹೌದು, ಮೊದಲೆಲ್ಲಾ ವಾಟ್ಸಾಪ್ (Whatsapp) ಬಳಕೆದಾರರು ತಮ್ಮ ಸಂಪರ್ಕಕ್ಕೆ ನೆಚ್ಚಿನ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಲು ಅಟ್ಯಾಚ್ ಬಟನ್ ಅನ್ನು ಕ್ಲಿಕ್ ಮಾಡಿ ನಂತರ ತಮ್ಮ ಫೋಟೋ ಗ್ಯಾಲರಿಯನ್ನು ಪ್ರವೇಶಿಸುವ ಆಯ್ಕೆಯನ್ನು ಆರಿಸಿ ಅಲ್ಲಿಂದ ಫೋಟೋ ಶೇರ್ ಮಾಡಬೇಕಿತ್ತು.  ಆದರೆ, ಇನ್ನುಮುಂದೆ ಈ ಪ್ರಕ್ರಿಯೆ ಇನ್ನೂ ಸುಲಭವಾಗಲಿದೆ. 

ಇದನ್ನೂ ಓದಿ- ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಬಳಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ

ವಾಟ್ಸಾಪ್ ಅಪ್ಡೇಟ್ (Whatsapp Update) ಬಗ್ಗೆ ವರದಿ ಮಾಡುವ WABeta ಇನ್ಫೋ ವರದಿಯ ಪ್ರಕಾರ,  ವಾಟ್ಸಾಪ್ ಶೀಘ್ರದಲ್ಲೇ ಹೊಸ ಫೀಚರ್ ಪರಿಚಯಿಸಲು ಮುಂದಾಗಿದೆ. ಇದರ ಮೂಲಕ,  ಬಳಕೆದಾರರು ತಮ್ಮ ಸಂಪರ್ಕಗಳೊಂದಿಗೆ ಫೋಟೋಗಳನ್ನು ಸುಲಭವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. 

ಲಭ್ಯವಿರುವ ಮಾಹಿತಿಯ ಪ್ರಕಾರ, ವಾಟ್ಸಾಪ್ ನ ಈ ಹೊಸ ವೈಶಿಷ್ಟ್ಯದಲ್ಲಿ ಬಳಕೆದಾರರು  ಅಟ್ಯಾಚ್ ಫೈಲ್ ಬಟನ್ ಅನ್ನು ಸ್ವಲ್ಪ ಸಮಯದವರೆಗೆ ಒತ್ತಿ ಹಿಡಿದುಕೊಂಡರೆ ಅದು ನೇರವಾಗಿ ಅವರನ್ನು ಫೋಟೋ ಗ್ಯಾಲರಿಗೆ ಕರೆದೊಯ್ಯುತ್ತದೆ. ಅಲ್ಲಿಂದ ಅವರು ತಮಗೆ ಬೇಕಾದ ಫೋಟೋ ಅಥವಾ ವಿಡಿಯೋವನ್ನು ತಮ್ಮ ಸಂಪರ್ಕಗಳಿಗೆ ಶೇರ್ ಮಾಡಬಹುದು. ಇದರಿಂದ ಫೋಟೋ ಸೆಂಡ್ ಮಾಡಲು ಬಳಕೆದಾರರು ಫೋಟೋ ಗ್ಯಾಲರಿ ಆಯ್ಕೆಯನ್ನು ಆಯ್ಕೆ ಮಾಡುವ ಅಗತ್ಯ ನಿವಾರಣೆಯಾಗುತ್ತದೆ. ಜೊತೆಗೆ ಸಮಯವೂ ಉಳಿತಾಯವಾಗುತ್ತದೆ. 

ಇದನ್ನೂ ಓದಿ- WhatsApp Alert: ಈ 4 ಸಂದೇಶಗಳ ಮೇಲೆ ಮರೆತೂ ಕ್ಲಿಕ್ಕಿಸಬೇಡಿ, ಭಾರಿ ಪಶ್ಚಾತಾಪ ಪಡಬೇಕಾದೀತು!

ವಾಟ್ಸಾಪ್ ಈಗಾಗಲೇ ಈ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರೀಕ್ಷಾರ್ಥವಾಗಿ ಕೆಲವು ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಸುತ್ತಿದ್ದಾರೆ. ಶೀಘ್ರದಲ್ಲೇ, ಎಲ್ಲಾ ಬಳಕೆದಾರರಿಗೂ ಈ ವೈಶಿಷ್ಟ್ಯ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಮೆಟಾ ಮಾಲೀಕತ್ವದ ವಾಟ್ಸಾಪ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News