WhatsApp ನಲ್ಲಿ ಇನ್ಮುಂದೆ ಯಾರು ಈ ಕೆಲ್ಸಾ ಮಾಡ್ಲಿಕ್ಕಾಗಲ್ಲ, ಬರ್ತಿದೆ ಹೊಸ ವೈಶಿಷ್ಟ್ಯ

Whatsapp ನಲ್ಲಿ ಇನ್ಮುಂದೆ View Once Messages ಮೊದಲಿಗಿಂತಲೂ ಹೆಚ್ಚು ಸುರಕ್ಷತವಾಗಿರಲಿವೆ. ಹೀಗಾಗಿ ಇನ್ಮುಂದೆ ಯಾರು ನಿಮ್ಮ View Once ಫೋಟೋ/ವಿಡಿಯೋಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಅವರು ಸ್ಕ್ರೀನ್ ರೆಕಾರ್ಡ್ ಕೂಡ ಮಾಡಲು ಸಾಧ್ಯವಾಗುವುದಿಲ್ಲ.

Written by - Nitin Tabib | Last Updated : Oct 5, 2022, 02:00 PM IST
  • ವಾಟ್ಸ್ ಆಪ್ ಬಿಡುಗಡೆ ಮಾಡಲು ಹೊರಟಿರುವ ಈ ವೈಶಿಷ್ಟ್ಯದಿಂದ
  • ಯಾವುದೇ ಬಳಕೆದಾರರು ಇತರ ಬಳಕೆದಾರರ ವ್ಹಿವ್ ಒನ್ಸ್ ಸಂದೇಶಗಳ
  • ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
WhatsApp ನಲ್ಲಿ ಇನ್ಮುಂದೆ ಯಾರು ಈ ಕೆಲ್ಸಾ ಮಾಡ್ಲಿಕ್ಕಾಗಲ್ಲ, ಬರ್ತಿದೆ ಹೊಸ ವೈಶಿಷ್ಟ್ಯ title=
WhatsApp New Feature

WhatsApp ಮೇಲೆ ಇನ್ಮುಂದೆ ಯಾರು ನಿಮ್ಮ ವೈಯಕ್ತಿಕ ಫೋಟೋ-ವಿಡಿಯೋಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ವಾಟ್ಸ್ ಆಪ್ ಶೀಘ್ರದಲ್ಲಿಯೇ ಅದ್ಭುತ ವೈಶಿಷ್ಟ್ಯವೊಂದನ್ನು ರೊಲ್ ಔಟ್ ಮಾಡಲು ಸಿದ್ಧತೆ ನಡೆಸಿದೆ. ಇದು ಬಳಕೆದಾರರನ್ನು ಮತ್ತಷ್ಟು ಸುರಕ್ಷಿತವಾಗಿರಿಸಲು ಸಹಾಯ ಮಾಡಲಿದೆ. ಹೌದು, ವಾಟ್ಸ್ ಆಪ್ ಬಿಡುಗಡೆ ಮಾಡಲು ಹೊರಟಿರುವ ಈ ವೈಶಿಷ್ಟ್ಯದಿಂದ ಯಾವುದೇ ಬಳಕೆದಾರರು ಇತರ ಬಳಕೆದಾರರ ವ್ಹಿವ್ ಒನ್ಸ್ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕುರಿತು ವರದಿ ಪ್ರಕಟಿಸಿರುವ ವಾಟ್ಸ್ ಆಪ್ ಹೊಸ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ ವೆಬ್ ಸೈಟ್ WaBetaInfo, ವಾಟ್ಸ್ ಆಪ್ ಬಳಕೆದಾರರನ್ನು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದರಿಂದ ತಡೆಯಲು, ವ್ಹಿವ್ ಒನ್ಸ್ ಫೋಟೋ ಅಥವಾ ವಿಡಿಯೋನ ಒಂದು ಹೊಸ ವರ್ಶನ್ ರೋಲ್ ಔಟ್ ಮಾಡಲಿದೆ. ಇದರಿಂದ ಬಳಕೆದಾರರು ಇತರ ಬಳಕೆದಾರರ ಇಂತಹ ಸಂದೇಶಗಳ ಸ್ಕ್ರೀನ್ ಶಾಟ್ ಪಡೆದುಕೊಳ್ಳುವುದು ಬಿಡಿ, ಸ್ಕ್ರೀನ್ ರೆಕಾರ್ಡ್ ಕೂಡ  ಕೈಗೊಳ್ಳುವುದು ಸಾಧ್ಯವಾಗುವುದಿಲ್ಲ. ಪ್ರಸ್ತುತ ಈ ವೈಶಿಷ್ಟ್ಯವನ್ನು ಕೆಲ ಬೀಟಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದ್ದು. ಈ ಹೊಸ ವೈಶಿಷ್ಟ್ಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 

ಇದನ್ನೂ ಓದಿ-BSNL ಗ್ರಾಹಕರಿಗೊಂದು ಬಂಬಾಟ್ ಸುದ್ದಿ, ಕೇಂದ್ರ ಸಚಿವರ ಘೋಷಣೆ ಕೇಳಿ ನೀವು ಕುಣಿದು ಕುಪ್ಪಳಿಸುವಿರಿ

ಮೊದಲ ವೈಶಿಷ್ಟ್ಯದಲ್ಲಿಯೂ ಕೂಡ ಈ ಕೊರತೆ ಇತ್ತು
ಈ ವರ್ಷದ ಆರಂಭದಲ್ಲಿ ವಾಟ್ಸ್ ಆಪ್ ತನ್ನ ವಿವ್ಹ್ ಒನ್ಸ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಈ ವೈಶಿಷ್ಟ್ಯ ಬಳಕೆದಾರರಿಗೆ ಫೋಟೋ-ವಿಡಿಯೋ ಕಳುಹಿಸುವ ಅನುಮತಿ ನೀಡುತ್ತಿತ್ತು. ಈ ಸಂದೇಶ ಪಡೆದುಕೊಳ್ಳುವ ಬಳಕೆದಾರರು ಒಮ್ಮೆ ಆ ಸಂದೇಶವನ್ನು ಓದಿದ ಬಳಿಕ ಅವರ ಸಂದೇಶ ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತಿತ್ತು.ವಾಟ್ಸ್ ಆಪ್ ಬಳಕೆದಾರರಿಗೆ ಹೆಚ್ಚಿನ ಪ್ರೈವಸಿ ನೀಡುವ ಉದ್ದೇಶ ಇದು ಹೊಂದಿತ್ತು. ಆದರೆ, ಒಂದೊಮ್ಮೆ ಸಂದೇಶ ಪಡೆದುಕೊಳ್ಳುವವರು ಸಂದೇಶದ ಸ್ಕ್ರೀನ್ ಶಾಟ್ ತೆಗೆದುಕೊಂಡರೆ, ಅದರ ಸಂಪೂರ್ಣ ಉದ್ದೇಶ ವಿಫಲವಾಗುತ್ತಿತ್ತು. 

ಇದನ್ನೂ ಓದಿ-Good News: Jio ಬಳಕೆದಾರರಿಗೊಂದು ಬಂಬಾಟ್ ಸುದ್ದಿ, ನಾಳೆಯಿಂದ Jio True 5G ಸೇವೆ ಆರಂಭ

ಸ್ಕ್ರೀನ್ ಶಾಟ್ ತೆಗೆದುಕೊಂಡರೆ ಫೋಟೋ ಕಪ್ಪು ಬಣ್ಣಕ್ಕೆ ತಿರುಗಲಿದೆ
ಆದರೆ, ಇದೀಗ ಹೊಸ ವೈಶಿಷ್ಟ್ಯದ ಜೊತೆಗೆ ಬಳಕೆದಾರರು ವ್ಹಿವ್ ಒನ್ಸ್ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಅವರು ಸ್ಕ್ರೆನ್ ಶಾಟ್ ತೆಗೆದುಕೊಳ್ಳಲು ಬಯಸಿದರೂ ಕೂಡ ಫೋಟೋ ಕಪ್ಪು ಬಣ್ಣಕ್ಕೆ ತಿರುಗಲಿದೆ. ವರದಿಯ ಪ್ರಕಾರ, ಒಂದೊಮ್ಮೆ ಈ ವೈಶಿಷ್ಟ್ಯ ಜಾರಿಯಾದ ಬಳಿಕ, ಬಳಕೆದಾರರು ಸಿಕ್ಯೋರಿಟಿ ನೀತಿಯ ಹಿನ್ನೆಲೆ ಸ್ಕ್ರೀನ್ ಶಾಟ್ ಪಡೆದುಕೊಳ್ಳಲು ಸಾಧ್ಯವಿಲ್ಲ. ಅಷ್ಟೇ ಯಾಕೆ ಈ ನೀತಿಯನ್ನು ಬೈಪಾಸ್ ಮಾಡಲು ನೀವು ಥರ್ಡ್ ಪಾರ್ಟಿ ಆಪ್ ಬಳಸಿದರು ಕೂಡ ಸ್ಕ್ರೀನ್ ಶಾಟ್ ಕಪ್ಪು ಬಣ್ಣಕ್ಕೆ ತಿರುಗಲಿದೆ. ಆದರೆ ವಾಟ್ಸ್ ಆಪ್ ನ ಈ ಹೊಸ ವೈಶಿಷ್ಟ್ಯ ಕೇವಲ ಫೋಟೋ ಹಾಗೂ ವಿಡಿಯೋಗಳಿಗೆ ಮಾತ್ರ ಸೀಮಿತವಾಗಿರಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News