WhatsApp ಬಳಕೆದಾರಿಗೊಂದು ಬಂಬಾಟ್ ಸುದ್ದಿ

WABetainfo ತನ್ನ ವರದಿಯಲ್ಲಿ ವಾಟ್ಸ್ ಆಪ್ ತನ್ನ ಸೈಡ್ ಬಾರ್ ನಲ್ಲಿ ಹೊಸ ಕಾಲ್ ಟ್ಯಾಬ್ ವೈಶಿಷ್ಟ್ಯವನ್ನು ಸೇರಿಸಿರುವುದಾಗಿ ಮಾಹಿತಿ ನೀಡಿದೆ. ಬಳಕೆದಾರರು ಈ ಟ್ಯಾಬ್ ಮೇಲೆ ಕ್ಲಿಕ್ಕಿಸಿದಾಗ ಅವರಿಗೆ ಅವರ ಕಾಲ್ ಹಿಸ್ಟರಿ ಕಾಣಿಸಲಿದೆ ಎಂದು ಅದು ಹೇಳಿದೆ.  

Written by - Nitin Tabib | Last Updated : Nov 22, 2022, 10:07 PM IST
  • ಇತ್ತೀಚೆಗಷ್ಟೇ WhatsApp ತನ್ನ ಡೆಸ್ಕ್‌ಟಾಪ್ ಬೀಟಾ ಬಳಕೆದಾರರಿಗೆ ಚಾಟ್ ಲಿಸ್ಟ್, ಸೆಟ್ಟಿಂಗ್‌ಗಳು
  • ಮತ್ತು ಸ್ಥಿತಿಯನ್ನು ನೋಡಲು ಸೈಡ್-ಬಾರ್ ಅನ್ನು ಪರಿಚಯಿಸಿದೆ ಎಂದು WABetainfo ತನ್ನ ವರದಿಯಲ್ಲಿ ಹೇಳಿತ್ತು.
  • ಇದೀಗ ಕಂಪನಿಯು ಆ ಸೈಡ್ ಬಾರ್‌ನಲ್ಲಿ ಹೊಸ ಕಾಲ್ ಟ್ಯಾಬ್ ವೈಶಿಷ್ಟ್ಯವನ್ನು ಶಾಮೀಲುಗೊಳಿಸಲಿ
WhatsApp ಬಳಕೆದಾರಿಗೊಂದು ಬಂಬಾಟ್ ಸುದ್ದಿ title=
WhatsApp New Feature

WhatsApp Desktop Version: Whatsapp ಜನಪ್ರಿಯ ಕಿರು ಸಂದೇಶ ರವಾನಿಸುವ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ವಿಶ್ವಾದ್ಯಂತ ಇದು ಸಾಕಷ್ಟು ಜನಪ್ರೀಯತೆಯನ್ನು ಪಡೆದುಕೊಂಡಿದೆ.  ಬಳಕೆದಾರರು ಈ ವೇದಿಕೆಯನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲದೆ ಡೆಸ್ಕ್‌ಟಾಪ್‌ಗಳಲ್ಲಿಯೂ ಬಳಸುತ್ತಾರೆ. ವಾಟ್ಸಾಪ್ ನಲ್ಲಿ ಇಂತಹ ಹಲವು ಫೀಚರ್ ಗಳಿದ್ದು, ಮೊಬೈಲ್ ಆವೃತ್ತಿಯಲ್ಲಿ ಲಭ್ಯವಿದ್ದರೂ ವೆಬ್ ಆವೃತ್ತಿಯಲ್ಲಿ ಅವು ಇಲ್ಲ. ಇದೀಗ ನಿಧಾನವಾಗಿ WhatsApp ಕೂಡ ತನ್ನ ವೆಬ್ ಆವೃತ್ತಿಯನ್ನು ಸುಧಾರಿಸುತ್ತಿದೆ. ಈಗ ಕಂಪನಿಯು ಡೆಸ್ಕ್‌ಟಾಪ್‌ ಆವೃತ್ತಿಗಾಗಿ ಕಾಲ್ ಟ್ಯಾಬ್ ವೈಶಿಷ್ಟ್ಯವನ್ನು ಪರಿಚಯಿಸುವುದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವನ್ನು ಒಂದೊಮ್ಮೆ ಬಿಡುಗಡೆಯಾದ ಬಳಿಕ ಬಳಕೆದಾರರು ತಮ್ಮ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ನಲ್ಲಿ ತಮ್ಮ ಕರೆ ಇತಿಹಾಸವನ್ನು ನೋಡಲು ಸಾಧ್ಯವಾಗಲಿದೆ.

ಕಾಲ್ ಟ್ಯಾಬ್ ವೈಶಿಷ್ಟ್ಯ
ಇತ್ತೀಚೆಗಷ್ಟೇ WhatsApp ತನ್ನ ಡೆಸ್ಕ್‌ಟಾಪ್ ಬೀಟಾ ಬಳಕೆದಾರರಿಗೆ ಚಾಟ್ ಲಿಸ್ಟ್, ಸೆಟ್ಟಿಂಗ್‌ಗಳು ಮತ್ತು ಸ್ಥಿತಿಯನ್ನು ನೋಡಲು ಸೈಡ್-ಬಾರ್ ಅನ್ನು ಪರಿಚಯಿಸಿದೆ ಎಂದು WABetainfo ತನ್ನ ವರದಿಯಲ್ಲಿ ಹೇಳಿತ್ತು. ಇದೀಗ ಕಂಪನಿಯು ಆ ಸೈಡ್ ಬಾರ್‌ನಲ್ಲಿ ಹೊಸ ಕಾಲ್ ಟ್ಯಾಬ್ ವೈಶಿಷ್ಟ್ಯವನ್ನು ಶಾಮೀಲುಗೊಳಿಸಲಿದೆ. ಬಳಕೆದಾರರು ಈ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ, ಅವರಿಗೆ ಡೆಸ್ಕ್ ಟಾಪ್ ನಲ್ಲಿಯೇ ಕರೆ ವಿವರಗಳು ಕಾನಿಸಲಿವೆ. ಇದರೊಂದಿಗೆ ಕಾಲ್ ಟ್ಯಾಬ್‌ನಲ್ಲಿ ಸರ್ಚ್ ಬಾರ್ ಸೌಲಭ್ಯವೂ ಬಳಕೆದಾರರಿಗೆ ಸಿಗಲಿದೆ. ಪ್ರಸ್ತುತ, ಈ ವೈಶಿಷ್ಟ್ಯದ ಮೇಲೆ ಪರೀಕ್ಷೆ ನಡೆಯುತ್ತಿದೆ. ಇದು ಶೀಘ್ರದಲ್ಲೇ ಇತರ ಬಳಕೆದಾರರಿಗಾಗಿ ಜಾರಿಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ-ಆನ್‌ಲೈನ್ ಬ್ಯಾಂಕಿಂಗ್ ಬಳಕೆ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ವಂಚನೆಗೆ ಬಲಿಯಾಗುವುದಿಲ್ಲ!

ಸ್ಕ್ರೀನ್ ಲಾಕ್ ವೈಶಿಷ್ಟ್ಯ
ಕಾಲ್ ಟ್ಯಾಬ್ ಹೊರತಾಗಿ, WhatsApp ಸ್ಕ್ರೀನ್ ಲಾಕ್ ವೈಶಿಷ್ಟ್ಯದ ಮೇಲೂ ಕೂಡ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಡೆಸ್ಕ್‌ಟಾಪ್ ಬೀಟಾ ಬಳಕೆದಾರರಿಗಾಗಿ ಕಂಪನಿಯು ಈ ಭದ್ರತಾ ವೈಶಿಷ್ಟ್ಯವನ್ನು ಜಾರಿಗೊಳಿಸಿದೆ ಎನ್ನಲಾಗಿದೆ. ಇದರ ಸಹಾಯದಿಂದ, ಬಳಕೆದಾರರು ಡೆಸ್ಕ್‌ಟಾಪ್‌ನಲ್ಲಿ ಅಪ್ಲಿಕೇಶನ್ ಅನ್ನು ಸುಲಭವಾಗಿ ಲಾಕ್ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ, ಈ ವೈಶಿಷ್ಟ್ಯದ ಮೇಲೂ ಕೂಡ ಕೆಲಸ ಪ್ರಗತಿಯಲ್ಲಿದೆ. ಇತರ ವೆಬ್ ಬಳಕೆದಾರರಿಗೆ ಎಷ್ಟು ಸಮಯದವರೆಗೆ ಸ್ಕ್ರೀನ್ ಲಾಕ್ ವೈಶಿಷ್ಟ್ಯ ಸಿಗಲಿದೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ, 

ಇದನ್ನೂ ಓದಿ-E-Bike: ಗಿಯರ್ ಹೊಂದಿರುವ Electric Bike, ಫುಲ್ ಚಾರ್ಜ್ ಗೆ 150 ಕೀ,ಮೀ ಮೈಲೇಜ್

ಪೋಲ್ ವೈಶಿಷ್ಟ್ಯ
ಕೆಲವು ಸಮಯದ ಹಿಂದೆ WhatsApp ತನ್ನ ಮೊಬೈಲ್ ಮತ್ತು ವೆಬ್ ಬಳಕೆದಾರರಿಗಾಗಿ ಪೋಲ್ ವೈಶಿಷ್ಟ್ಯವನ್ನು ಪರಿಚಯಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಬಳಕೆದಾರರಿಗೆ ಗ್ರೂಪ್ ನಲ್ಲಿ ಪೋಲ್ ರಚಿಸುವ ಸೌಲಭ್ಯವನ್ನು ನೀಡಲಾಗಿದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ಸಂಪರ್ಕ ಪಟ್ಟಿಯಲ್ಲಿರುವ ಜನರಿಗೆ ಪ್ರಶ್ನೆಗಳನ್ನು ಕೇಳಬಹುದು. ಇದರೊಂದಿಗೆ ಗ್ರೂಪ್ ಸದಸ್ಯರು ಮತ್ತು ವೀಡಿಯೊ ಕರೆಗಳಿಗೆ ಶಾಮೀಲಾಗಬಯಸುವ ಸದಸ್ಯರ ಮಿತಿಯನ್ನು ಸಹ ವಾಟ್ಸಾಪ್ ಹೆಚ್ಚಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News