ಬರಲಿದೆ ಹೊಸ ವೈಶಿಷ್ಟ್ಯ: ಇನ್ನೂ ಸುಲಭವಾಗಲಿದೆ ವಾಟ್ಸಾಪ್ ಕಾಲಿಂಗ್

WhatsApp New Feature: ವಾಟ್ಸಾಪ್ ಪ್ರಸ್ತುತ ವಿಶ್ವದ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿದೆ. ವಾಟ್ಸಾಪ್ ಬಳಕೆದಾರರಿಗೆ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್ ಕಾಲಿಂಗ್ ನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಕೆಲಸ ಮಾಡುತ್ತಿದೆ.

Written by - Yashaswini V | Last Updated : Feb 3, 2023, 02:13 PM IST
  • ವಾಟ್ಸಾಪ್ ಕರೆ ವೈಶಿಷ್ಟ್ಯವನ್ನು ಇನ್ನೂ ಸುಲಭಗೊಳಿಸಲು ಶಾರ್ಟ್‌ಕಟ್ ಫೀಚರ್ ಅನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಈ ವೈಶಿಷ್ಟ್ಯದಲ್ಲಿ ಬಳಕೆದಾರರು ಸಂಪರ್ಕಗಳ ಪಟ್ಟಿಯಲ್ಲಿರುವ ಸಂಪರ್ಕ ಸೆಲ್ ಅನ್ನು ಟ್ಯಾಪ್ ಮಾಡುವ ಮೂಲಕ ಕರೆ ಮಾಡುವ ಶಾರ್ಟ್‌ಕಟ್ ಅನ್ನು ರಚಿಸಲು ಸಾಧ್ಯವಾಗುತ್ತದೆ.
  • ನಂತರ ಇದನ್ನು ಹೋಮ್ ಸ್ಕ್ರೀನ್‌ಗೆ ಸೇರಿಸಲಾಗುತ್ತದೆ.
ಬರಲಿದೆ ಹೊಸ ವೈಶಿಷ್ಟ್ಯ: ಇನ್ನೂ ಸುಲಭವಾಗಲಿದೆ ವಾಟ್ಸಾಪ್ ಕಾಲಿಂಗ್  title=
WhatsApp New Feature

WhatsApp New Feature: ವಾಟ್ಸಾಪ್‌ ಬಳಕೆದಾರರನ್ನು ಆಕರ್ಷಿಸಲು ಆಗಾಗ್ಗೆ ಹೊಸ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಪ್ರಸ್ತುತ, ಜನರ ಜೀವನಾಡಿ ಆಗಿರುವ ವಾಟ್ಸಾಪ್ ತನ್ನ ಕಾಲಿಂಗ್ ವೈಶಿಷ್ಟ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದು ಬಳಕೆದಾರರಿಗೆ ಕರೆ ಶಾರ್ಟ್‌ಕಟ್‌ಗಳನ್ನು ರಚಿಸಲು ಅನುಮತಿಸುತ್ತದೆ ಎಂದು ಹೇಳಲಾಗುತ್ತಿದೆ.

ವಾಟ್ಸಾಪ್ ಅಪ್ಡೇಟ್ ಕುರಿತಂತೆ ವರದಿ ಮಾಡುವ Wabetainfo ಪ್ರಕಾರ, ವಾಟ್ಸಾಪ್ ಕಾಲಿಂಗ್ ವೈಶಿಷ್ಟ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ವಾಟ್ಸಾಪ್ ಕಾಲಿಂಗ್ ಇನ್ನೂ ಸುಲಭವಾಗಲಿದೆ  ಎನ್ನಲಾಗಿದೆ. 

ಇದನ್ನೂ ಓದಿ- ಏರ್‌ಟೆಲ್ ಅಗ್ಗದ ಯೋಜನೆಯಲ್ಲಿ ಸಿಗುತ್ತಿದೆ ನಿತ್ಯ 2ಜಿಬಿ ಡಾಟಾ, ಅನ್ಲಿಮಿಟೆಡ್ ಕಾಲ್ ಜೊತೆಗೆ ಇನ್ನೂ ಹಲವು ಲಾಭ

ವಾಟ್ಸಾಪ್ ಕರೆ ವೈಶಿಷ್ಟ್ಯವನ್ನು ಇನ್ನೂ ಸುಲಭಗೊಳಿಸಲು ಶಾರ್ಟ್‌ಕಟ್ ಫೀಚರ್ ಅನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯದಲ್ಲಿ ಬಳಕೆದಾರರು ಸಂಪರ್ಕಗಳ ಪಟ್ಟಿಯಲ್ಲಿರುವ ಸಂಪರ್ಕ ಸೆಲ್ ಅನ್ನು ಟ್ಯಾಪ್ ಮಾಡುವ ಮೂಲಕ ಕರೆ ಮಾಡುವ ಶಾರ್ಟ್‌ಕಟ್ ಅನ್ನು ರಚಿಸಲು ಸಾಧ್ಯವಾಗುತ್ತದೆ. ನಂತರ ಇದನ್ನು ಹೋಮ್ ಸ್ಕ್ರೀನ್‌ಗೆ ಸೇರಿಸಲಾಗುತ್ತದೆ. ಇದರಿಂದ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡುವ ಸಲುವಾಗಿ ಪದೇ ಪದೇ ಅಪ್ಲಿಕೇಶನ್ ತೆರೆಯುವುದನ್ನು ತಪ್ಪಿಸಬಹುದಾಗಿದೆ.

ಇದನ್ನೂ ಓದಿ- ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಪವರ್‌ಬ್ಯಾಂಕ್

ಈ ಮೊದಲು ವಾಟ್ಸಾಪ್ ಅಪ್ಡೇಟ್ ಗೆ ಸಂಬಂಧಿಸಿದಂತೆ ವರದಿಯೊಂದರಲ್ಲಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ  ಬಳಕೆದಾರರು ತಮ್ಮ ಮೂಲ ಗುಣಮಟ್ಟದಲ್ಲಿ ಫೋಟೋಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತದೆ. ಪ್ಲಾಟ್‌ಫಾರ್ಮ್  ಡ್ರಾಯಿಂಗ್ ಟೂಲ್ ಹೆಡರ್‌ನಲ್ಲಿ ಹೊಸ ಸೆಟ್ಟಿಂಗ್‌ಗಳ ಐಕಾನ್ ಅನ್ನು ಸಂಯೋಜಿಸಲು ಯೋಜಿಸಿದೆ, ಇದು ಬಳಕೆದಾರರಿಗೆ ಯಾವುದೇ ಫೋಟೋದ ಗುಣಮಟ್ಟವನ್ನು ರೂಪಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News