WhatsApp ನಲ್ಲಿ Quality ಕಡಿಮೆಯಾಗದಂತೆ HD ಗುಣಮಟ್ಟದ ಫೋಟೋ ಶೇರ್‌ ಮಾಡುವ ಸಿಂಪಲ್‌ ಟ್ರಿಕ್‌ ಇಲ್ಲಿದೆ

Send hd photos on whatsapp : ವಾಟ್ಸಾಪ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಅವುಗಳ ಗುಣಮಟ್ಟ ಹಾಳಾಗಬಹುದೆಂಬ ಚಿಂತೆ ಕಾಡುತ್ತದೆ. ಆದರೆ ಇಂದು ನಾವು ಹೇಳುವ ಈ ಸಿಂಪಲ್‌ ಟ್ರಿಕ್‌ ಮೂಲಕ ನೀವು HD Quality ಯಲ್ಲಿ ಫೋಟೋಗಳನ್ನು ವಾಟ್ಸಾಪ್‌ ಮೂಲಕ ಸೆಂಡ್‌ ಮಾಡಬಹುದು. 

Written by - Chetana Devarmani | Last Updated : Feb 25, 2024, 11:12 AM IST
  • ವಾಟ್ಸಾಪ್‌ನಲ್ಲಿ ಹೈ ಕ್ವಾಲಿಟಿಯ ವೀಡಿಯೊಗಳನ್ನು ಕಳುಹಿಸುವುದು ಹೇಗೆ?
  • ವಾಟ್ಸಾಪ್‌ನಲ್ಲಿ ಹೈ ಕ್ವಾಲಿಟಿಯ HD ಫೋಟೋ ಕಳುಹಿಸುವುದು ಹೇಗೆ?
  • ಉತ್ತಮ ಗುಣಮಟ್ಟದ ಫೋಟೋ ವಾಟ್ಸಾಪ್‌ನಲ್ಲಿ ಶೇರ್‌ ಮಾಡುವ ವಿಧಾನ
WhatsApp ನಲ್ಲಿ Quality ಕಡಿಮೆಯಾಗದಂತೆ HD ಗುಣಮಟ್ಟದ ಫೋಟೋ ಶೇರ್‌ ಮಾಡುವ ಸಿಂಪಲ್‌ ಟ್ರಿಕ್‌ ಇಲ್ಲಿದೆ  title=

How to Send High Resolution Photos : WhatsApp ಒಂದು ತ್ವರಿತ ಸಂದೇಶ ಕಳುಹಿಸಬಹುದಾದ ಅಪ್ಲಿಕೇಷನ್‌ ಆಗಿದೆ. ಇದನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಬಳಸುತ್ತಾರೆ. ಪ್ರತಿ ದೇಶದಲ್ಲಿ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಆಪ್‌ ಆಗಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ ಜನರು ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ತಮ್ಮ ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಚಾಟ್ ಮಾಡಬಹುದು. ಆಡಿಯೋ-ವಿಡಿಯೋ ಕರೆಗಳನ್ನು ಮಾಡಬಹುದು. ವಾಟ್ಸಾಪ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳಬಹುದು. ಆದರೆ, ಕೆಲವೊಮ್ಮೆ ವಾಟ್ಸಾಪ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಅವುಗಳ ಗುಣಮಟ್ಟ ಕಡಿಮೆಯಾಗಬಹುದೆಂಬ ಅಂಶ ನಮ್ಮನ್ನು ಕಾಡುತ್ತದೆ. 

ಇದನ್ನೂ ಓದಿ:Calling Name Presentation: ಸಿಎನ್‌ಎಪಿ ಸೌಲಭ್ಯ ಎಂದರೇನು? ಇದರ ವೈಶಿಷ್ಟತೆಯೇನು ಎಂದು ತಿಳಿಯಿರಿ 

ಉತ್ತಮ ಗುಣಮಟ್ಟದ ಫೋಟೋ ಶೇರ್‌ ಮಾಡಿದಾಗ WhatsApp ಅವುಗಳ ಗಾತ್ರವನ್ನು ಸಂಕುಚಿತಗೊಳಿಸುತ್ತದೆ. ಇದು ಫೋಟೋದ ಗುಣಮಟ್ಟದಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ. ವಾಟ್ಸಾಪ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಅವುಗಳ ಗುಣಮಟ್ಟ ಕೆಡದಂತೆ HD ಕ್ವಾಲಿಟಿ ಫೋಟೋಗಳನ್ನು ಹಂಚಿಕೊಳ್ಳಲು ಒಂದು ಮಾರ್ಗವಿದೆ. ಅದನ್ನು ಬಳಸಿಕೊಂಡು ನೀವು ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.

HD ಆಯ್ಕೆಯನ್ನು ಬಳಸಿ : 

1. ಮೊದಲು WhatsApp ತೆರೆಯಿರಿ.
2. ಇದರ ನಂತರ ನೀವು ಫೋಟೋವನ್ನು ಶೇರ್‌ ಮಾಡ ಬಯಸುವ ಚಾಟ್‌ಗೆ ಹೋಗಿ.
3. ಇಲ್ಲಿ ಪೇಪರ್‌ಕ್ಲಿಪ್ ಐಕಾನ್ ಮೇಲೆ ಟ್ಯಾಪ್ ಮಾಡಿ.
4. ಇದರ ನಂತರ ಫೋನ್‌ನ ಗ್ಯಾಲರಿಗೆ ಹೋಗಿ, ಶೇರ್‌ ಮಾಡಲು ಬಯಸುವ ಫೋಟೋ ಸೆಲೆಕ್ಟ್ ಮಾಡಿ.
5. ಫೋಟೋದ ಮೇಲಿರುವ HD ಮೇಲೆ ಟ್ಯಾಪ್ ಮಾಡಿ. HD ಗುಣಮಟ್ಟವನ್ನು ಆಯ್ಕೆಮಾಡಿ.
6. ಈಗ ಫೋಟೋ ಶೇರ್‌ ಮಾಡಿ. ಫೋಟೋ ಕ್ವಾಲಿಟಿ ಹಾಳಾಗದಂತೆ HD ಗುಣಮಟ್ಟದಲ್ಲಿ ಸೆಂಡ್‌ ಆಗುತ್ತದೆ.

ಡಾಕ್ಯುಮೆಂಟ್ ಆಗಿ ಕಳುಹಿಸಿ : 

1. ಮೊದಲು WhatsApp ತೆರೆಯಿರಿ.
2. ಇದರ ನಂತರ, ನೀವು ಫೋಟೋವನ್ನು ಶೇರ್‌ ಮಾಡ ಬಯಸುವ ಚಾಟ್ ಅನ್ನು ತೆರೆಯಿರಿ. ಪೇಪರ್‌ಕ್ಲಿಪ್ ಐಕಾನ್ ಮೇಲೆ ಟ್ಯಾಪ್ ಮಾಡಿ.
3. ಇಲ್ಲಿ ಡಾಕ್ಯುಮೆಂಟ್ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
4. ಗ್ಯಾಲರಿಗೆ ಹೋಗಿ, ಫೋಟೋವನ್ನು ಆಯ್ಕೆ ಮಾಡಿ.
5. ಈ ಗ ಫೋಟೋ ಸೆಂಡ್‌ ಮಾಡಿ. ನಿಮ್ಮ ಫೋಟೋ ಕ್ವಾಲಿಟಿ ಹಾಳಾಗದಂತೆ ಸೆಂಡ್‌ ಆಗುತ್ತದೆ. 

Google ಡ್ರೈವ್‌ ಮೂಲಕ ಶೇರ್‌ ಮಾಡಿ : 

1. ಮೊದಲು ಗೂಗಲ್ ಡ್ರೈವ್ ತೆರೆಯಿರಿ.
2. ಇಲ್ಲಿ + ಐಕಾನ್ ಮೇಲೆ ಟ್ಯಾಪ್ ಮಾಡಿ. ಅಪ್‌ಲೋಡ್ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
3. ಫೋಟೋವನ್ನು ಸೆಲೆಕ್ಟ್‌ ಮಾಡಿ, ಅದನ್ನು ಅಪ್ಲೋಡ್ ಮಾಡಿ. 
4. ಅಪ್‌ಲೋಡ್ ಮಾಡಿದ ಫೋಟೋವನ್ನು ನೋಡಲು ಕೆಳಗೆ ಸ್ವೈಪ್ ಮಾಡಿ.
5. ನಂತರ ಫೋಟೋದ ಪಕ್ಕದಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ ಮತ್ತು ಕಾಪಿ ಲಿಂಕ್ ಮೇಲೆ ಕ್ಲಿಕ್‌ ಮಾಡಿ.
6. ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರೊಂದಿಗೆ WhatsApp ನಲ್ಲಿ ಹಂಚಿಕೊಳ್ಳಬಹುದು.

ಇದನ್ನೂ ಓದಿ:ಶೀಘ್ರದಲ್ಲೇ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ ಜಾರಿ !ಕ್ರಮಿಸುವ ದೂರಕ್ಕಷ್ಟೇ ಟೋಲ್ ಪಾವತಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News