ಗೂಗಲ್ ಪೇಯಿಂದ UPI Lite ಪರಿಚಯ: ಇಲ್ಲಿವೆ ಇದರ ವೈಶಿಷ್ಟ್ಯಗಳು

Google Pay UPI Lite: ಈ ಡಿಜಿಟಲ್ ಯುಗದಲ್ಲಿ ಹಣಕಾಸಿನ ವಹಿವಾಟಿಗೆ ತುಂಬಾ ಜನಪ್ರಿಯವಾಗಿರುವ ಪ್ಲಾಟ್ ಫಾರ್ಮ್ ಎಂದರೆ ಗೂಗಲ್ ಪೇ. ಇದೀಗ ಗೂಗಲ್ ಪೇ ತನ್ನ  ಆ್ಯಪ್​ ಅನ್ನು ಇನ್ನಷ್ಟು ಬಳಕೆದಾರರ ಸ್ನೇಹಿಯಾಗಿಸಲು ಯುಪಿಐ ವೈಶಿಷ್ಟ್ಯವನ್ನು ಪರಿಚಯಿಸಿದೆ. ಏನಿದರ ಪ್ರಯೋಜನ ಎಂದು ತಿಳಿಯಿರಿ. 

Written by - Yashaswini V | Last Updated : Jul 14, 2023, 01:16 PM IST
  • ಯುಪಿಐ ಲೈಟ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಿತು.
  • ಇದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವಿನ್ಯಾಸಗೊಳಿಸಿದ ಡಿಜಿಟಲ್ ಪಾವತಿ ಸೇವೆಯಾಗಿದೆ.
  • UPI ಲೈಟ್ ಅನ್ನು ಬಳಕೆದಾರರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದ್ದರೂ, ಇದು ನೈಜ ಸಮಯದಲ್ಲಿ ವಿತರಿಸುವ ಬ್ಯಾಂಕ್‌ನ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅವಲಂಬಿಸಿಲ್ಲ.
ಗೂಗಲ್ ಪೇಯಿಂದ UPI Lite ಪರಿಚಯ: ಇಲ್ಲಿವೆ ಇದರ ವೈಶಿಷ್ಟ್ಯಗಳು  title=
Google Pay UPI Lite

Google Pay UPI Lite: ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಹಿವಾಟಿಗಾಗಿ ತುಂಬಾ ಜನಪ್ರಿಯವಾಗಿರುವ ಗೂಗಲ್ ಪೇ ಭಾರತದಲ್ಲಿ ಯುಪಿಐ ಲೈಟ್ ವೈಶಿಷ್ಟ್ಯವನ್ನು ಪರಿಚಯಿಸಿದೆ.ಇದು ಬಳಕೆದಾರರಿಗೆ ದೈನಂದಿನ ವಹಿವಾಟುಗಳಿಗಾಗಿ ವೇಗವಾಗಿ  ಪೇಮೆಂಟ್ ಮಾಡಲು ಮತ್ತು ಸರಳವಾದ ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. 

ಪಾವತಿಗಳನ್ನು ಸರಳ ಮತ್ತು ವೇಗಗೊಳಿಸುವ ಗುರಿ ಹೊಂದಿರುವ ಯುಪಿಐ ಲೈಟ್: 
ಹೌದು, ಭಾರತದಲ್ಲಿ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸುರಿವ ಪ್ರಸಿದ್ದ ಪಾವತಿ ಪ್ಲಾಟ್‌ಫಾರ್ಮ್‌ ಗೂಗಲ್ ಪೇ, UPI ಲೈಟ್‌ನೊಂದಿಗೆ, ಬಳಕೆದಾರರು ದಿನಸಿ ಸಾಮಗ್ರಿಗಳು, ತಿಂಡಿಗಳು ಮತ್ತು ಕ್ಯಾಬ್ ಸವಾರಿಯಂತಹ ದೈನಂದಿನ ವಸ್ತುಗಳ ದೈನಂದಿನ ಪಾವತಿಗಳನ್ನು ವೇಗವಾಗಿ ಮಾಡಬಹುದಾಗಿದೆ. ಪಾವತಿಗಳನ್ನು ಸರಳ ಮತ್ತು ವೇಗಗೊಳಿಸುವುದು ಇದರ ಗುರಿಯಾಗಿದೆ. ಬಳಕೆದಾರರು ತಮ್ಮ UPI ಲೈಟ್ ಖಾತೆಯಿಂದ ಒಂದೇ ಟ್ಯಾಪ್ ಮೂಲಕ ₹ 200 ಹಣವನ್ನು ಕಳುಹಿಸಬಹುದು .  ಇದರ ಪ್ರಮುಖ ವೈಶಿಷ್ಟ್ಯವೆಂದರೆ ಈ ಪಾವತಿಗಾಗಿ ನೀವು ಪದೇ ಪದೇ ಪಿನ್ ನಮೂದಿಸುವ ಅಗತ್ಯವಿಲ್ಲ. 

ಯುಪಿಐ ಲೈಟ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಿತು. ಇದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವಿನ್ಯಾಸಗೊಳಿಸಿದ ಡಿಜಿಟಲ್ ಪಾವತಿ ಸೇವೆಯಾಗಿದೆ.  UPI ಲೈಟ್ ಅನ್ನು ಬಳಕೆದಾರರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದ್ದರೂ, ಇದು ನೈಜ ಸಮಯದಲ್ಲಿ ವಿತರಿಸುವ ಬ್ಯಾಂಕ್‌ನ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅವಲಂಬಿಸಿಲ್ಲ. ಗರಿಷ್ಠ ವಹಿವಾಟಿನ ಸಮಯದಲ್ಲಿಯೂ UPI ಲೈಟ್ ಹೆಚ್ಚಿನ ಯಶಸ್ಸಿನ ದರಗಳನ್ನು ಭರವಸೆ ನೀಡುತ್ತದೆ. 

ಇದನ್ನೂ ಓದಿ- WhatsApp 'Edit' ವೈಶಿಷ್ಟ್ಯ ಇಲ್ಲಿದೆ; ಈ ಹಂತ-ಹಂತವಾಗಿ ನಿಮ್ಮ ಮೆಸೇಜ್ ಗಳನ್ನು ಸರಿಪಡಿಸುವುದು  ಹೇಗೆ  ಎಂಬುದನ್ನು ಪರಿಶೀಲಿಸಿ

ಇದರ ಮೂಲಕ, ಬಳಕೆದಾರರು ಒಂದೇ ಟ್ಯಾಪ್‌ನಲ್ಲಿ ಪಾವತಿ ಮಾಡಬಹುದು. ಒಂದು ಬಾರಿಗೆ  ₹ 200 ವರೆಗೆ ಪಾವತಿ ಮಾಡಬಹುದು.  ಅಂದರೆ, ಯುಪಿಐ ಲೈಟ್ ವೈಶಿಷ್ಟ್ಯದ ಸಹಾಯದಿಂದ, ನೀವು ಪಿನ್ ಇಲ್ಲದೆಯೇ 200 ರೂಪಾಯಿ ಪಾವತಿ ಮಾಡಬಹುದು. 
UPI LITE ಖಾತೆಯಲ್ಲಿ ನೀವು ರೂ. 2000 ವರೆಗೆ ಇರಿಸಬಹುದು. ಬಳಕೆದಾರರು ದಿನಕ್ಕೆ ಎರಡು ಬಾರಿ ಈ ಖಾತೆಯಲ್ಲಿ ರೂ. 2000 ಠೇವಣಿ ಮಾಡಬಹುದು.

ಇದನ್ನೂ ಓದಿ- Aadhaar ಕಾರ್ಡ್ ಗೆ ಸಂಬಂಧಿಸಿದ ಮಹತ್ವದ ಸುದ್ದಿ ಪ್ರಕಟ, UIDAI ಆರಂಭಿಸಿದೆ ಈ ನೂತನ ಸೇವೆ

Google Pay ನಲ್ಲಿ UPI ಲೈಟ್ ಅನ್ನು ಸಕ್ರಿಯಗೊಳಿಸುವ ಸುಲಭ ವಿಧಾನ ಇಲ್ಲಿದೆ: 
ಲಭ್ಯವಿರುವ ಮಾಹಿತಿಗಳ ಪ್ರಕಾರ, ಗೂಗಲ್ ಪೇ ಬಳಕೆದಾರರು ಯಾವುದೇ ಕೆವೈಸಿ  ದೃಢೀಕರಣವಿಲ್ಲದೆ ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಯುಪಿಐ ಲೈಟ್ ಸೇವೆಯನ್ನು ಆಕ್ಟಿವ್ ಮಾಡಬಹುದು. ಅದರ ಹಂತ-ಹಂತದ ಪ್ರಕ್ರಿಯೆ ಇಲ್ಲಿದೆ... 

ಹಂತ 1: 
ನಿಮ್ಮ ಮೊಬೈಲ್ ಸಾಧನದಲ್ಲಿ Google Pay ಅಪ್ಲಿಕೇಶನ್‌ಗೆ ಹೋಗಿ.

ಹಂತ 2: 
ಫೋನ್‌ನ ಪರದೆಯ ಮೇಲಿನ ಬಲ ಮೂಲೆಯಲ್ಲಿ ಕಾಣಿಸುವ ಪ್ರೊಫೈಲ್ ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡಿ. 

ಹಂತ 3:
ನಿಮ್ಮ ಪ್ರೊಫೈಲ್ ಪುಟದಲ್ಲಿ, ಕೆಳಗೆ ಸ್ಕ್ರಾಲ್ ಮಾಡಿ ಅಥವಾ UPI LITE ಸಕ್ರಿಯಗೊಳಿಸುವ ಆಯ್ಕೆಯನ್ನು ಸರ್ಚ್ ಮಾಡಿ. ನಂತರ ಅದರ ಮೇಲೆ ಟ್ಯಾಪ್ ಮಾಡಿ.

ಹಂತ 4: 
ಬಳಿಯಕ್ UPI LITE ಕುರಿತು ಸೂಚನೆಗಳು ಮತ್ತು ವಿವರಗಳೊಂದಿಗೆ ಹೊಸ ಪರದೆ ಅಥವಾ ವಿಂಡೋ ಕಾಣಿಸಿಕೊಳ್ಳುತ್ತದೆ.

ಹಂತ 5: 
ಇಲ್ಲಿ ನೀಡಿರುವ ಮಾಹಿತಿಯನ್ನು ಓದಿ ಮತ್ತು UPI LITE ಅನ್ನು ಸಕ್ರಿಯಗೊಳಿಸಿ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 6: 
ಈಗ Google Pay ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಅಥವಾ ನಿಮ್ಮ ವಿವರಗಳನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ನಿಗದಿತ ಬಾಕ್ಸ್ ನಲ್ಲಿ ನಿಗದಿತ ಮಾಹಿತಿಯನ್ನು ನಮೂದಿಸಿ. 

ಹಂತ 7: 
ಲಿಂಕ್ ಮಾಡುವ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನೀವು UPI LITE ಅನ್ನು ಯಶಸ್ವಿಯಾಗಿ ಸಕ್ರಿಯಗೊಳಿಸಲಾಗಿದೆ  ಎಂಬ ಅಧಿಸೂಚನೆ ಅಥವಾ ಸಂದೇಶವನ್ನು ಪಡೆಯುತ್ತೀರಿ.  

ಹಂತ 8: 
ಈಗ ನೀವು ನಿಮ್ಮ UPI LITE ಖಾತೆಗೆ ಹಣವನ್ನು ಸೇರಿಸಬಹುದು. ಇದಕ್ಕಾಗಿ ಮೊದಲು Google Pay ಅಪ್ಲಿಕೇಶನ್ ತೆರೆಯಿರಿ ಮತ್ತು UPI LITE ವಿಭಾಗ ಅಥವಾ Wallet ಗೆ ಹೋಗಿ.

ಹಂತ 9: 
UPI ಲೈಟ್ ಖಾತೆಗೆ ಹಣವನ್ನು ಸೇರಿಸುವ ಆಯ್ಕೆಯನ್ನು ಟ್ಯಾಪ್ ಮಾಡಿ. ಇದರಲ್ಲಿ ನೀವು ಒಂದು ಬಾರಿಗೆ ಗರಿಷ್ಠ 2000 ರೂಪಾಯಿಗಳನ್ನು ಹಾಕಬಹುದು.

ಹಂತ 10: 
ವಹಿವಾಟನ್ನು ದೃಢೀಕರಿಸಿ ಮತ್ತು ಪ್ರಕ್ರಿಯೆಗೊಳಿಸಿದರೆ ನಿಮ್ಮ UPI LITE ಖಾತೆಗೆ ಯಶಸ್ವಿಯಾಗಿ ಹಣ ವರ್ಗಾವಣೆ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News