ವಾಟ್ಸಾಪ್ ಮೂಲಕವೂ ಕರೆಂಟ್ ಬಿಲ್ ಪಾವತಿಸಬಹುದು!

Electricity Bill Payment By WhatsApp: ಈ ಡಿಜಿಟಲ್ ಯುಗದಲ್ಲಿ ಬಹುತೇಕ ಎಲ್ಲಾ ಕೆಲಸಗಳನ್ನು ಕುಳಿತಲ್ಲಿಯೇ ನಿರ್ವಹಿಸಬಹುದು. ಇದೀಗ ಜನಪ್ರಿಯ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಮೂಲಕವೂ ನೀವು ವಿದ್ಯುತ್ ಬಿಲ್ ಪಾವತಿಸಬಹುದು. 

Written by - Yashaswini V | Last Updated : Apr 25, 2023, 11:24 AM IST
  • ವಿದ್ಯುತ್ ಬಿಲ್ ಪಾವತಿಸಲು ಹಲವು ಆಯ್ಕೆಗಳಿವೆ.
  • ಇವುಗಳಲ್ಲಿ ವಾಟ್ಸಾಪ್-ಪೇ ಕೂಡ ಒಂದು
  • ವಾಟ್ಸಾಪ್-ಪೇ ವೈಶಿಷ್ಟ್ಯದೊಂದಿಗೆ ವಿದ್ಯುತ್ ಬಿಲ್‌ಗಳನ್ನು ಸುಲಭವಾಗಿ ಪಾವತಿಸಬಹುದು.
ವಾಟ್ಸಾಪ್ ಮೂಲಕವೂ ಕರೆಂಟ್ ಬಿಲ್ ಪಾವತಿಸಬಹುದು!  title=

WhatsApp: ತಂತ್ರಜ್ಞಾನದ ಪ್ರಗತಿಯೊಂದಿಗೆ ಪ್ರಸ್ತುತ ಆನ್‌ಲೈನ್ ಪೇಮೆಂಟ್ ಪ್ರವೃತ್ತಿ ಹೆಚ್ಚಾಗಿದೆ. ಹಿಂದೆಲ್ಲಾ ವಿದ್ಯುತ್ ಬಿಲ್,  ವಾಟರ್ ಬಿಲ್‌ಗಳನ್ನು ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪಾವತಿಸಬೇಕಾಗಿತ್ತು. ಈ ಡಿಜಿಟಲ್ ಯುಗದಲ್ಲಿ ಇಂತಹ ಬಹುತೇಕ ಕೆಲಸಗಳನ್ನು ಸದಾ ಕೈಯಲ್ಲೇ ಇರುವ ಸ್ಮಾರ್ಟ್ಫೋನ್ ಮುಖಾಂತರ ಸುಲಭವಾಗಿ ಮಾಡಬಹುದು. ಅದರಲ್ಲೂ, ಇದೀಗ ಜನಪ್ರಿಯ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಮೂಲಕವೂ ನೀವು ವಿದ್ಯುತ್ ಬಿಲ್ ಪಾವತಿಸಬಹುದು. 

ವಾಟ್ಸಾಪ್ ಪೇ ಮೂಲಕ ವಿದ್ಯುತ್ ಬಿಲ್ ಪಾವತಿಸಿ: 
ವಾಸ್ತವವಾಗಿ, ಮಧ್ಯಪ್ರದೇಶದ ವಿದ್ಯುತ್ ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ಗಳನ್ನು ವಾಟ್ಸಾಪ್ ಮೂಲಕವೇ ಪಾವತಿಸಬಹುದಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಪ್ರದೇಶ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿಯೊಬ್ಬರು ಡಿಜಿಟಲ್ ಪಾವತಿಯನ್ನು ಉತ್ತೇಜಿಸುವಲ್ಲಿ ಬೇರೆಯವರಿಗಿಂತ ನಾವು ಮುಂದಿದ್ದೇವೆ. ವಿದ್ಯುತ್ ಬಿಲ್ ಪಾವತಿಸಲು ಹಲವು ಆಯ್ಕೆಗಳಿವೆ. ಇವುಗಳಲ್ಲಿ ವಾಟ್ಸಾಪ್-ಪೇ ಕೂಡ ಒಂದು ಆಯ್ಕೆಯಾಗಿದೆ ಎಂದಿದ್ದಾರೆ. 

ಇದನ್ನೂ ಓದಿ- Westinghouse 55 inch 4K Smart TV : ಅಗ್ಗದ ಬೆಲೆಗೆ ಮಾರುಕಟ್ಟೆಗೆ ಬಂದಿದೆ 55 ಇಂಚಿನ ಸ್ಮಾರ್ಟ್ ಟಿವಿ

ಬಳಕೆದಾರರು ವಾಟ್ಸಾಪ್ ಖಾತೆಗೆ ತಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವ ಮೂಲಕ ಯುಟಿಲಿಟಿ ಬಿಲ್‌ಗಳನ್ನು ಪಾವತಿ ಮಾಡಬಹುದು. ಒಂದೊಮ್ಮೆ ನೀವು ವಾಟ್ಸಾಪ್ ಪೇ ಸೌಲಭ್ಯವನ್ನು ಹೊಂದಿಲ್ಲದಿದ್ದರೆ ಗೂಗಲ್ ಪೇ, ಫೋನ್ ಪೇ, ಪೇಟಿಎಂ 
ಅಥವಾ ಯು‌ಪಿ‌ಐ ಮೂಲಕವೂ ಪೇಮೆಂಟ್ ಮಾಡಬಹುದಾಗಿದೆ.

ಇದನ್ನೂ ಓದಿ- ಹೊರ ಬಿತ್ತು Maruti Jimny ಬೆಲೆ ! ಕೈಗೆಟಕುವ ದರದಲ್ಲಿ ಸೂಪರ್ ಸ್ಪೆಷಲ್ ಕಾರ್

ವಾಟ್ಸಪ್ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ: 
ಮೊದಲೇ ತಿಳಿಸಿದಂತೆ ವಾಟ್ಸಾಪ್-ಪೇ ವೈಶಿಷ್ಟ್ಯದೊಂದಿಗೆ ವಿದ್ಯುತ್ ಬಿಲ್‌ಗಳನ್ನು ಸುಲಭವಾಗಿ ಪಾವತಿಸಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ... 
>> ಮಧ್ಯಪ್ರದೇಶದ ವಿದ್ಯುತ್ ಗ್ರಾಹಕರು ವಾಟ್ಸಾಪ್ ಮೂಲಕ ವಿದ್ಯುತ್ ಬಿಲ್ ಪೇಮೆಂಟ್ ಮಾಡಲು ಬಳಕೆದಾರರು ತಮ್ಮ ಫೋನ್‌ನಲ್ಲಿ ಕಂಪನಿಯ ಟೋಲ್ ಫ್ರೀ ಸಂಖ್ಯೆ 07552551222 ಅನ್ನು ಸೇವ್ ಮಾಡಬೇಕು. 
>> ನಂತರ ಇದರಲ್ಲಿ ಚಾಟ್ ಮಾಡಬಹುದು. 
>> ವೀಕ್ಷಿಸಿ ಮತ್ತು ಬಿಲ್ ಪಾವತಿ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಪಾವತಿಯನ್ನು ಪೂರ್ಣಗೊಳಿಸಲು ಸೂಚನೆಗಳೊಂದಿಗೆ ಪ್ರಾಂಪ್ಟ್ ಅನ್ನು ಇಲ್ಲಿ ಸ್ವೀಕರಿಸುತ್ತೀರಿ. 
>> ಪೇಮೆಂಟ್ ಪೂರ್ಣಗೊಂಡ ಬಳಿಕ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News