Instagram Down: 24 ಗಂಟೆಗಳಲ್ಲಿ ಮೆಟಾಗೆ ಡಬಲ್ ಶಾಕ್, ವಾಟ್ಸ್ ಆಪ್ ಬಳಿಕ ಇದೀಗ ಇನ್ಸ್ಟಾಗ್ರಾಮ್ ಡೌನ್!

Instagram Outage: ಟ್ವಿಟರ್‌ನಲ್ಲಿ ಕೆಲವು ಬಳಕೆದಾರರು ಈ ಬಗ್ಗೆ ದೂರಿದ್ದಾರೆ. ಇದಾದ ಬಳಿಕ #Instagramdown Twitter ನಲ್ಲಿ ಟ್ರೆಂಡಿಂಗ್ ಆರಂಭಿಸಿದೆ. ಈ ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡುವ ಮೂಲಕ, ಜನರು Instagram ಡೌನ್ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್ ಡಿಟೆಕ್ಟರ್ ಇನ್‌ಸ್ಟಾಗ್ರಾಮ್ ಡೌನ್ ಆಗಿರುವ ಬಗ್ಗೆ ಮಾಹಿತಿಯನ್ನು ನೀಡಿದೆ.

Written by - Nitin Tabib | Last Updated : Jul 20, 2023, 09:06 PM IST
  • ಭಾರತದ ಅನೇಕ ಜನರು Instagram ನ ಡೌನ್ ಡಿಟೆಕ್ಟರ್ (Instagram Outage) ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
  • ಆ್ಯಪ್ ಡೌನ್‌ನಿಂದಾಗಿ ಬಳಕೆದಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು.
  • ಶೇ.36 ರಷ್ಟು ಜನರು ಸರ್ವರ್ ಸಂಪರ್ಕಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಬೇಕಾಯಿತು.
  • ಇದೇ ವೇಳೆ ಶೇ. 22 ರಷ್ಟು ಜನರು ಲಾಗಿನ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.
Instagram Down: 24 ಗಂಟೆಗಳಲ್ಲಿ ಮೆಟಾಗೆ ಡಬಲ್ ಶಾಕ್, ವಾಟ್ಸ್ ಆಪ್ ಬಳಿಕ ಇದೀಗ ಇನ್ಸ್ಟಾಗ್ರಾಮ್ ಡೌನ್! title=

ನವದೆಹಲಿ: ಗುರುವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್ ಹಠಾತ್ ಡೌನ್ ಆಗಿದ್ದರಿಂದ ಬಳಕೆದಾರರು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಮೆಟಾ ಸಂಸ್ಥೆಯ ಫೋಟೋ ಮತ್ತು ವೀಡಿಯೊ ಹಂಚಿಕೆ ವೇದಿಕೆ Instagram ನ ಡೌನ್ ಪರಿಣಾಮವು ವಿಶ್ವಾದ್ಯಂತ ಕಂಡುಬಂದಿದೆ. ಈ ಹಿಂದೆ, ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸಾಪ್ ಕೂಡ ಬುಧವಾರ ತಡರಾತ್ರಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಈ ಕಾರಣದಿಂದಾಗಿ, ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

ಟ್ವಿಟರ್‌ನಲ್ಲಿ ಜನರು ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ (Technology News In Kannada)
ಟ್ವಿಟರ್‌ನಲ್ಲಿ ಕೆಲವು ಬಳಕೆದಾರರು ಈ ಬಗ್ಗೆ ದೂರಿದ್ದಾರೆ. ಇದಾದ ನಂತರ #Instagramdown Twitter ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿತು. ಈ ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡುವ ಮೂಲಕ, ಜನರು Instagram ಡೌನ್ ಆಗಿರುವ ಬಗ್ಗೆ ಹೇಳಿದ್ದಾರೆ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್ ಡಿಟೆಕ್ಟರ್ ಇನ್‌ಸ್ಟಾಗ್ರಾಮ್ ಡೌನ್ ಆಗಿರುವ ಬಗ್ಗೆ ಮಾಹಿತಿಯನ್ನು ನೀಡಿದೆ. ಕೆಲವು ಬಳಕೆದಾರರು ಅದನ್ನು ಇಲ್ಲಿ ವರದಿ ಮಾಡಿದ್ದಾರೆ. ವಾಸ್ತವವಾಗಿ 1.30 ರ ಸುಮಾರಿಗೆ ಈ ಔಟೇಜ್ ಆರಂಭವಾಗಿದೆ. ಇದಾದ ನಂತರ ಜನರು ಅದರ ಬಗ್ಗೆ ವರದಿ ಮಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ-Redmi Watch 3 Active ಟೀಸರ್ ಬಿಡುಗಡೆಗೊಳಿಸಿದ ಶಾವೋಮಿ, 3 ದಿನ ನೀರಿನಲ್ಲಿರಬಲ್ಲದು!

ಭಾರತದ ಅನೇಕ ಜನರು Instagram ನ ಡೌನ್ ಡಿಟೆಕ್ಟರ್ (Instagram Outage) ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಆ್ಯಪ್ ಡೌನ್‌ನಿಂದಾಗಿ ಬಳಕೆದಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಶೇ.36 ರಷ್ಟು ಜನರು ಸರ್ವರ್ ಸಂಪರ್ಕಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಬೇಕಾಯಿತು. ಇದೇ ವೇಳೆ ಶೇ. 22 ರಷ್ಟು ಜನರು ಲಾಗಿನ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ-ಎಚ್ಚರ! ನೀವೂ ಟಾಯ್ಲೆಟ್ ನಲ್ಲಿ ಮೊಬೈಲ್ ಫೋನ್ ಬಳಸುತ್ತೀರಾ? ಈ ವರದಿ ತಪ್ಪದೆ ಓದಿ!

ಕೆಲ ದಿನಗಳ ಹಿಂದೆಯೂ ಸರ್ವರ್‌ಗಳು ಸ್ಥಗಿತಗೊಂಡಿದ್ದವು.
Instagram ನಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಜುಲೈ 11 ರಂದು ಕೂಡ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸರ್ವರ್‌ಗಳು ಸ್ಥಗಿತಗೊಂಡಿದ್ದವು. ಇದೀಗ ಇನ್‌ಸ್ಟಾಗ್ರಾಮ್ ಕೆಲವೇ ದಿನಗಳಲ್ಲಿ ಡೌನ್ ಆಗಿದೆ. WhatsApp ಡೌನ್ ಸಮಸ್ಯೆಯು 1.33 AM IST (ಭಾರತೀಯ ಕಾಲಮಾನ) ಕ್ಕೆ ಆರಂಭವಾಗಿತ್ತು.  ಈ ಕಾರಣದಿಂದಾಗಿ, ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗಲಿಲ್ಲ ಅಥವಾ ಇತರ ಜನರಿಂದ ಸಂದೇಶಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News