ಆಂತರಿಕ ಮೌಲ್ಯಮಾಪನವು ಬ್ಯಾಂಕಿನ ಹೆಚ್ಚಿನ ಗ್ರಾಹಕರು ಇನ್ನು ಮುಂದೆ ಎಟಿಎಂಗಳನ್ನು ಬಳಸುವಂತಿಲ್ಲ ಎಂದು ಹೇಳಿದರು. ಇದರಿಂದಾಗಿ ಬ್ಯಾಂಕಿನ ಲಾಭ ಹೆಚ್ಚುತ್ತಿಲ್ಲ. ಆದ್ದರಿಂದ ಈ ಎಲ್ಲಾ ಎಟಿಎಂಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
RBI Rule Alert : ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ ನ ನಿಯಮಗಳನ್ನು ಬದಲಾಯಿಸಿದೆ. ಅತಿದೊಡ್ಡ ಬದಲಾವಣೆಯು ನಿಮ್ಮ ಸಂಬಳ, ಪಿಂಚಣಿ, ಇಎಂಐಗೆ ಸಂಬಂಧಿಸಿದ್ದಾಗಿದೆ.
Axis Bank Monthly Service latest news: ನಿಮ್ಮ ಖಾತೆ ಆಕ್ಸಿಸ್ ಬ್ಯಾಂಕಿನಲ್ಲಿದ್ದರೆ, ನಿಮಗೊಂದು ಸಮಾಧಾನಕರ ಸುದ್ದಿ ಇಲ್ಲಿದೆ. ಆಕ್ಸಿಸ್ ಬ್ಯಾಂಕ್ ತನ್ನ ಸೇವಾ ಶುಲ್ಕವನ್ನು ಕಡಿತಗೊಳಿಸುವ ಬಗ್ಗೆ ಘೋಷಿಸಿದೆ. ಜುಲೈ 1 ರಿಂದಲೇ ಇದನ್ನು ಜಾರಿಗೆ ತರಲಾಗಿದೆ.
ಬ್ಯಾಂಕ್ ಆಕಸ್ಮಿಕವಾಗಿ 50 ಬಿಲಿಯನ್ ಅಂದರೆ ಸುಮಾರು 3.7 ಲಕ್ಷ ಕೋಟಿ ರೂ. ಅನ್ನು ಅಮೆರಿಕನ್ ಕುಟುಂಬದ (Americal Family) ಖಾತೆಗೆ ಜಮಾ ಮಾಡಿದ್ದು ಕುಟುಂಬ ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಯಾಯಿತು.
Bank privatization : ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು (Bank privatization) ಹೊರಟಿದೆ. ಇದಕ್ಕಾಗಿ ಸರ್ಕಾರವು ಉದ್ಯೋಗಿಗಳಿಗೆ ವಿಆರ್ ಎಸ್ ಪ್ಲಾನ್ ಗಳನ್ನು (VRS Plan) ಸಿದ್ದಪಡಿಸುತ್ತಿದೆ ಎನ್ನಲಾಗಿದೆ. ಅಂದರೆ ಉದ್ಯೋಗಿಗಳಿಗೆ ಉತ್ತಮ ಪ್ಯಾಕೇಜ್ ಗಳನ್ನು ನೀಡಲಿದೆ ಎನ್ನಲಾಗಿದೆ.
ತಪ್ಪು ಖಾತೆಗೆ ದುಡ್ಡು ಹೋದರೆ, ಟ್ರಾನ್ಸ್ ಫರ್ ಆದ ದುಡ್ಡು ಮರಳಿ ಬರುವುದಿಲ್ಲ ಎಂದೇ ಸಾಕಷ್ಟು ಜನ ಭಾವಿಸಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ತಪ್ಪು ಖಾತೆಗೆ ನಿಮ್ಮ ಹಣ ಸಂದಾಯವಾದರೆ, ಸಂದಾಯವಾದ ಹಣವನ್ನು ಹಿಂತಿರುಗಿ ಪಡೆಯಬಹುದು.
ಬ್ಯಾಂಕ್ ರಜಾದಿನವನ್ನು ಹೊರತುಪಡಿಸಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಅಂದರೆ ಮೇ 8 ಮತ್ತು 22 ರಂದು ಕೂಡಾ ಬ್ಯಾಂಕ್ ಮುಚ್ಚಿರುತ್ತವೆ. ಈ ದಿನಗಳಲ್ಲಿ ಕೂಡಾ ಬ್ಯಾಂಕ್ ವ್ಯವಹಾರಗಳು ನಡೆಯುವುದಿಲ್ಲ.
2021 ರ ಏಪ್ರಿಲ್ 17 ರಂದು ವ್ಯವಹಾರ ಅವಧಿ ಮುಕ್ತಾಯದ ನಂತರ, ಆರ್ಟಿಜಿಎಸ್ (RTGS) ವ್ಯವಸ್ಥೆಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಡಿಸಾಸ್ಟರ್ ರಿಕವರಿ ಸಮಯವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಸುಧಾರಿಸಲು ಆರ್ಟಿಜಿಎಸ್ ಅನ್ನು ತಾಂತ್ರಿಕವಾಗಿ ಅಪ್ ಡೇಟ್ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಲಕ್ಷಾಂತರ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಸೈಬರ್ ಅಪರಾಧಿಗಳು ಇದೀಗ ಗ್ರಾಹಕರ ಖಾತೆಗಳಲ್ಲಿ ಫಿಕ್ಸ್ಡ್ ಡೆಪಾಸಿಟ್ ಗಳನ್ನು ತೆರೆದಿರುವ ವಿಚಾರವನ್ನು ಎಸ್ಬಿಐ ಬಯಲು ಮಾಡಿದೆ.
ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಿದಾಗ ಒಂದೊಮ್ಮೆ ಹರಿದ ನೋಟುಗಳನ್ನು ಪಡೆದರೆ ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ನೀವು ಈ ನೋಟುಗಳನ್ನು ಸುಲಭವಾಗಿ ಬದಲಾಯಿಸಿ ಹೊಸ ನೋಟುಗಳನ್ನು ಪಡೆಯಬಹುದು.
e-mandates ಗೆ ಒಪ್ಪಿಗೆ ಸೂಚಿಸಿರುವ ಗ್ರಾಹಕರ ಬಿಲ್ ಪಾವತಿ ಏಪ್ರಿಲ್ 1 ರ ನಂತರ ವಿಫಲವಾಗಬಹುದು ಎಂದು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI) ಗ್ರಾಹಕರಿಗೆ ಎಚ್ಚರಿಸಿದೆ. ಅನೇಕ ಬ್ಯಾಂಕುಗಳು ಇನ್ನು ಕೂಡಾ ಆರ್ಬಿಐ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್ನಲ್ಲಿ ಖಾತೆದಾರರಾಗಿದ್ದರೆ ನಿಮಗಾಗಿ ಬಹಳ ಮುಖ್ಯವಾದ ಸುದ್ದಿ ಇದೆ.
ನಿಮ್ಮ ಖಾತೆಯು ಈ 8 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿದ್ದರೆ, ಈ ಕೆಲಸವನ್ನು ತಕ್ಷಣವೇ ಮಾಡಿ ಮುಗಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಮುಂದಿನ ವಾರ ಮೂರು ದಿನ ಮಾತ್ರ ಬ್ಯಾಂಕ್ ಕೆಲಸ ನಡೆಯುತ್ತದೆ. ಹಾಗಾಗಿ ಆದಷ್ಟು ಬೇಗ ಬ್ಯಾಂಕ್ ಗೆ ಹೋಗಿ ಹೊಸ ಚೆಕ್ ಬುಕ್ಗಾಗಿ ಅರ್ಜಿ ಸಲ್ಲಿಸಿ.
ಬ್ಯಾಂಕ್ ಫ್ರಾಡ್ ಆದಾಗ ತಕ್ಷಣ ಬ್ಯಾಂಕ್ ಗೆ ದೂರು ನೀಡಿದರೆ ಹಣದ ಮರುಪಾವತಿಯಾಗುತ್ತದೆ ಎಂದೂ ಹೇಳಲಾಗುತ್ತದೆ. ಆದರೆ ಇದು ಎಲ್ಲ ಪ್ರಕರಣಗಳಿಗೂ ಅನ್ವಯಿಸುವುದಿಲ್ಲ. ಗ್ರಾಹಕರ ತಪ್ಪಿನಿಂದ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ.
ಬ್ಯಾಂಕೊಂದು ಮಾಡಿದ ತಪ್ಪಿನಿಂದಾಗಿ ಈ ವ್ಯಕ್ತಿ ಬರೋಬ್ಬರಿ 64 ಡೆಬಿಟ್ ಕಾರ್ಡ್ ಗಳನ್ನು ಪಡೆಯುವಂತಾಯಿತು. ಅಲ್ಲದೆ ಎಲ್ಲಾ 64 ಡೆಬಿಟ್ ಕಾರ್ಡ್ ಗಳನ್ನು ಕೂಡಾ ಒಂದೇ ಖಾತೆಗೆ ಲಿಂಕ್ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.