ಹರ್ಯಾಣದ ರೋಹ್ಟಕ್ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ವೀರೇಂದ್ರ ಸೆಹ್ವಾಗ್ ಏನಂದ್ರು?

ಕೆಲವು ವಿಷಯಗಳು ಎಂದಿಗೂ ಬದಲಾಗುವುದಿಲ್ಲ-ವೀರೇಂದ್ರ ಸೆಹ್ವಾಗ್

Last Updated : Feb 10, 2019, 02:48 PM IST
ಹರ್ಯಾಣದ ರೋಹ್ಟಕ್ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ವೀರೇಂದ್ರ ಸೆಹ್ವಾಗ್ ಏನಂದ್ರು? title=

ನವದೆಹಲಿ: ಭಾರತದ ಮುಕ್ತ ಮನಸ್ಸಿನ ಆಟಗಾರ ವೀರೇಂದ್ರ ಸೆಹ್ವಾಗ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವದಂತಿಗಳು ಮತ್ತೊಮ್ಮೆ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸೆಹ್ವಾಗ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದ ರೋಹ್ಟಕ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿದ್ದವು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಿಳಿಸಿರುವ ಸೆಹ್ವಾಗ್ ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಟ್ವೀಟ್ ನಲ್ಲಿ ಈ ಬಗ್ಗೆ ಬರೆದಿರುವ ಸೆಹ್ವಾಗ್, "ಕೆಲವು ವಿಷಯಗಳು ಎಂದಿಗೂ ಬದಲಾಗುವುದಿಲ್ಲ. 2014 ರಲ್ಲಿ ಇದೇ ವದಂತಿ ಇತ್ತು, 2019 ರಲ್ಲಿಯೂ ಮತ್ತೆ ಅದೇ ವದಂತಿ ಹಬ್ಬಿದೆ. ಇದರಲ್ಲಿ ಯಾವುದೇ ನಾವಿನ್ಯತೆ ಇಲ್ಲ. ಆಗಲೂ ಆಸಕ್ತಿ ಇರಲಿಲ್ಲ. ಈಗಲೂ ಆಸಕ್ತಿ ಇಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಹರ್ಯಾಣದಲ್ಲಿ ಒಟ್ಟು 10 ಕ್ಷೇತ್ರಗಳಿದ್ದು 2014ರ ಚುನಾವಣೆಯಲ್ಲಿ ಬಿಜೆಪಿ 7 ರಲ್ಲಿ ಗೆಲುವು ಕಂಡಿತ್ತು. ಈ ಬಾರಿ 10 ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಪ್ಲಾನ್ ಮಾಡಿದ್ದು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಬಿಜೆಪಿ ಹರ್ಯಾಣದಿಂದ ಕಣಕ್ಕೆ ಇಳಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿತ್ತು.
 

Trending News