Video : IND vs Pak ಪಂದ್ಯಕ್ಕೂ ಮುನ್ನ ವಿಶೇಷ ತಯಾರಿ ನಡೆಸಿದ ವಿರಾಟ್!

ಭಾರತ-ಪಾಕ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ವಿಶೇಷ ತಾಲೀಮು ನಡೆಸುತ್ತಿರುವುದು ಈ ಫೋಟೋಗಳಲ್ಲಿ ಕಾಣಬಹುದಾಗಿದೆ. 

Written by - Channabasava A Kashinakunti | Last Updated : Sep 3, 2022, 05:59 PM IST
  • ಸೂಪರ್ 4 ಪಂದ್ಯಗಳಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ
  • ವಿಶೇಷ ತರಬೇತಿ ನಡೆಸಿದ ವಿರಾಟ್ ಕೊಹ್ಲಿ
  • ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್
Video : IND vs Pak ಪಂದ್ಯಕ್ಕೂ ಮುನ್ನ ವಿಶೇಷ ತಯಾರಿ ನಡೆಸಿದ ವಿರಾಟ್! title=

Virat Kohli, Asia Cup 2022 : ಏಷ್ಯಾ ಕಪ್ 2022 ರ ಗುಂಪು ಹಂತದ ಪಂದ್ಯಗಳು ಮುಗಿದಿವೆ. ಸೂಪರ್ 4 ಪಂದ್ಯಗಳಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಭರ್ಜರಿ ತಯಾರಿ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಭಾರತ-ಪಾಕ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ವಿಶೇಷ ತಾಲೀಮು ನಡೆಸುತ್ತಿರುವುದು ಈ ಫೋಟೋಗಳಲ್ಲಿ ಕಾಣಬಹುದಾಗಿದೆ. 

ವಿಶೇಷ ತರಬೇತಿ ನಡೆಸಿದ ವಿರಾಟ್ ಕೊಹ್ಲಿ 

ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಬಿರುಸಿನ ತಾಲೀಮು ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋಗಳಲ್ಲಿ, ವಿರಾಟ್ ಕೊಹ್ಲಿ 'ಹೈ ಆಲ್ಟಿಟ್ಯೂಡ್ ಮಾಸ್ಕ್' ಧರಿಸಿ ಓಡುತ್ತಿರುವುದನ್ನು ಕಾಣಬಹುದು. ತರಬೇತಿ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ವಿರಾಟ್ ಕೊಹ್ಲಿ ಇದನ್ನು ಮಾಡುತ್ತಿರುವುದು ಕಂಡುಬಂದಿದೆ. ಕಡಿಮೆ ಗಾಳಿಯಲ್ಲೂ ಶ್ವಾಸಕೋಶಗಳು ಸುಸ್ತಾಗದಂತೆ ತ್ರಾಣವನ್ನು ಹೆಚ್ಚಿಸಲು ಈ ವಿಶೇಷ ಮಾಸ್ಕ್ ಬಳಸಲಾಗುತ್ತದೆ. ವಿರಾಟ್ ಕೊಹ್ಲಿ ಈ ಹಿಂದೆಯೂ 'ಹೈ ಆಲ್ಟಿಟ್ಯೂಡ್ ಮಾಸ್ಕ್' ಧರಿಸಿ ತರಬೇತಿ ಪಡೆಯುತ್ತಿರುವುದು ನೋಡಿರಬಹುದು.

ಇದನ್ನೂ ಓದಿ :  IND vs PAK : ಈ ಆಟಗಾರನಿಗಿಲ್ಲ ಟೀಂ ಇಂಡಿಯಾದ playing 11ನಲ್ಲಿ ಸ್ಥಾನ!

'ಸುದೀರ್ಘ ವಿರಾಮದ ನಂತರ ತಂಡಕ್ಕೆ ಮರಳುತ್ತಿದ್ದೇನೆ'

ಏಷ್ಯಾಕಪ್ 2022 ಪ್ರಾರಂಭವಾಗುವ ಮೊದಲು ವಿರಾಟ್ ಕೊಹ್ಲಿ ಒಂದು ತಿಂಗಳ ವಿರಾಮದಲ್ಲಿದ್ದರು. ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ. ಹಾಗೆ, ಅವರು ಏಷ್ಯಾ ಕಪ್ 2022 ರಲ್ಲಿ ಹಿಂದಿರುಗಿದ ತಕ್ಷಣ ಅವರ ಬ್ಯಾಟ್‌ನಿಂದ ರನ್‌ಗಳು ಹೊರಬರುತ್ತಿವೆ. ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ರೂಪ್ ಹಂತದ ಎರಡೂ ಪಂದ್ಯಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ.

ಏಷ್ಯಾಕಪ್ ನ ಮೊದಲೆರಡು ಪಂದ್ಯಗಳಲ್ಲಿನ ಪ್ರದರ್ಶನ

ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 35 ರನ್ ಗಳಿಸಿದ್ದರು. ಹಾಗೆ, ಹಾಂಗ್ ಕಾಂಗ್ ವಿರುದ್ಧ 44 ಎಸೆತಗಳಲ್ಲಿ ಔಟಾಗದೆ 59 ರನ್ ಗಳಿಸಿದರು. ಈ ವರ್ಷದ ಫೆಬ್ರವರಿ 18 ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ನಲ್ಲಿ 52 ರನ್ ಗಳಿಸಿದ ನಂತರ ಇದು ಅವರ ಮೊದಲ ಅರ್ಧಶತಕವಾಗಿದೆ. ಹಾಂಗ್ ಕಾಂಗ್ ವಿರುದ್ಧ 34.09 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಅವರು 1 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಹ ಬಾರಿಸಿದರು.

ಇದನ್ನೂ ಓದಿ : Asia Cup 2022: ಮತೊಮ್ಮೆ ಭಾರತ V/S ಪಾಕಿಸ್ತಾನ ಮುಖಾಮುಖಿ! ಸೂಪರ್-4ರ ಸಂಪೂರ್ಣ ಮಾಹಿತಿ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News