ಚಿರತೆಯಂತೆ ಜಿಗಿಯುತ್ತಾ ಬಾಲ್ ಎಸೆದು ವಿಕೆಟ್ ಕಿತ್ತ ಕೊಹ್ಲಿ! ವಿರಾಟ್ ಚಾಣಾಕ್ಷತನಕ್ಕೆ ಫ್ಯಾನ್ಸ್ ಫುಲ್ ಫಿದಾ… ವಿಡಿಯೋ

Virat Kohli rocket throw: ವಿರಾಟ್ ಕೊಹ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಗುರುವಾರ ನಡೆದ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಅವರನ್ನು ರಾಕೆಟ್ ತರಹದ ಎಸೆತದಲ್ಲಿ ರನ್ ಔಟ್ ಮಾಡುವ ಮೂಲಕ ಡಗೌಟ್‌’ಗೆ ದಾರಿ ತೋರಿಸಿದರು.

Written by - Bhavishya Shetty | Last Updated : May 10, 2024, 07:13 PM IST
    • ವಿರಾಟ್ ಕೊಹ್ಲಿ ವಿಶ್ವದ ಫಿಟ್ ಆಟಗಾರರಲ್ಲಿ ಒಬ್ಬರು
    • ರಾಕೆಟ್ ಥ್ರೋ ಮೂಲಕ ವಿಕೆಟ್ ಕಬಳಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ
    • ವಿರಾಟ್ ಕೊಹ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ
ಚಿರತೆಯಂತೆ ಜಿಗಿಯುತ್ತಾ ಬಾಲ್ ಎಸೆದು ವಿಕೆಟ್ ಕಿತ್ತ ಕೊಹ್ಲಿ! ವಿರಾಟ್ ಚಾಣಾಕ್ಷತನಕ್ಕೆ ಫ್ಯಾನ್ಸ್ ಫುಲ್ ಫಿದಾ… ವಿಡಿಯೋ title=
Virat Kohli Rocket Throw Video

Virat Kohli rocket throw: ವಿರಾಟ್ ಕೊಹ್ಲಿ ವಿಶ್ವದ ಫಿಟ್ ಆಟಗಾರರಲ್ಲಿ ಒಬ್ಬರು. ಇದಕ್ಕೆ ಸಾಕ್ಷಿ ಕಳೆದ ದಿನ ನಡೆದ ಪಂದ್ಯದಲ್ಲಿ ಕಂಡುಬಂದ ಒಂದು ದೃಶ್ಯ. ವಿರಾಟ್ ಕೊಹ್ಲಿ ತಮ್ಮ ರಾಕೆಟ್ ಥ್ರೋ ಮೂಲಕ ವಿಕೆಟ್ ಕಬಳಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಕೊಹ್ಲಿಯ ಈ ಸಾಹಸ ಕಂಡ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಕುಳಿತಿದ್ದ ಪ್ರೇಕ್ಷಕರೆಲ್ಲರೂ ಸಂಭ್ರಮದಿಂದ ಕುಣಿದಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್’ಗೂ ಮುನ್ನ ಸ್ಪಿನ್ ಬೌಲಿಂಗ್ ಎದುರಿಸಲು ವಿರಾಟ್ ಹೊಸ ಪ್ಲಾನ್!

ವಿರಾಟ್ ಕೊಹ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಗುರುವಾರ ನಡೆದ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಅವರನ್ನು ರಾಕೆಟ್ ತರಹದ ಎಸೆತದಲ್ಲಿ ರನ್ ಔಟ್ ಮಾಡುವ ಮೂಲಕ ಡಗೌಟ್‌’ಗೆ ದಾರಿ ತೋರಿಸಿದರು.

ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ವಿರಾಟ್ ಕೊಹ್ಲಿ ಅವರನ್ನು ರನ್ ಔಟ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೌಲರ್‌’ಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದ್ದರು.

 

ಇದನ್ನೂ ಓದಿ: ಟಿ20 ವಿಶ್ವಕಪ್’ಗೂ ಮುನ್ನ ಸ್ಪಿನ್ ಬೌಲಿಂಗ್ ಎದುರಿಸಲು ವಿರಾಟ್ ಹೊಸ ಪ್ಲಾನ್!

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 47 ಎಸೆತಗಳಲ್ಲಿ 92 ರನ್ ಗಳಿಸಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌’ಗಳನ್ನು ಬಾರಿಸಿದರು. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ ಕೂಡ 195.74 ಆಗಿತ್ತು. ಅಂದಹಾಗೆ ಐಪಿಎಲ್ 2024 ರ 12 ಪಂದ್ಯಗಳಲ್ಲಿ 153.51 ಸ್ಟ್ರೈಕ್ ರೇಟ್‌’’ನಲ್ಲಿ 634 ರನ್ ಗಳಿಸಿದ್ದಾರೆ. ಸದ್ಯ ಕೊಹ್ಲಿ ಆರೆಂಜ್ ಕ್ಯಾಪ್ ಉಳಿಸಿಕೊಂಡಿದ್ದಾರೆ. ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌’ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News