ನೋಡಲು ಸಣಕಲು… ಆದ್ರೆ World Cupನಲ್ಲಿ ಟೀಂ ಇಂಡಿಯಾ ಆನೆಬಲ ತುಂಬಲಿದ್ದಾನೆ ಈ ಆಟಗಾರ! ಎಂಟ್ರಿ ಕನ್ಫರ್ಮ್?

Team India: ಟೀಂ ಇಂಡಿಯಾದಲ್ಲಿ ನಿರಂತರ ಅವಕಾಶಗಳು ಸಿಗದಿರುವ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ವಿಶ್ವಕಪ್ ಗೂ ಮುನ್ನ ತಂಡದಲ್ಲಿ ಸ್ಥಾನ ಪಡೆಯುವ ಲಕ್ಷಣ ಕಾಣುತ್ತಿದೆ. ಚಹಾಲ್ ತನ್ನ ಕೊನೆಯ ODI ಪಂದ್ಯವನ್ನು ಭಾರತದ ಪರವಾಗಿ, 24 ಜನವರಿ 2023 ರಂದು ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಅಂದಿನಿಂದ ಅವರು ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ.

Written by - Bhavishya Shetty | Last Updated : Apr 17, 2023, 10:52 PM IST
    • ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ವಿಶ್ವಕಪ್ ಗೂ ಮುನ್ನ ತಂಡದಲ್ಲಿ ಸ್ಥಾನ ಪಡೆಯುವ ಲಕ್ಷಣ ಕಾಣುತ್ತಿದೆ
    • ಇದಕ್ಕೆ ಕಾರಣ ಅವರು ಐಪಿಎಲ್’ನಲ್ಲಿ ಬೌಲಿಂಗ್ ಮಾಡುತ್ತಿರುವ ಶೈಲಿ.
    • ಈ ಸೀಸನ್’ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್ 17 ರನ್‌’ಗಳಿಗೆ 4 ವಿಕೆಟ್‌ಗಳು
ನೋಡಲು ಸಣಕಲು… ಆದ್ರೆ World Cupನಲ್ಲಿ ಟೀಂ ಇಂಡಿಯಾ ಆನೆಬಲ ತುಂಬಲಿದ್ದಾನೆ ಈ ಆಟಗಾರ! ಎಂಟ್ರಿ ಕನ್ಫರ್ಮ್? title=
Yuzvendra Chahal

Team India: ಈ ವರ್ಷದ ಕೊನೆಯಲ್ಲಿ ಭಾರತ ಏಕದಿನ ವಿಶ್ವಕಪ್ ಆತಿಥ್ಯ ವಹಿಸಲಿದೆ. 2011ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವಕಪ್ ಆಯೋಜನೆಯಾಗುತ್ತಿದೆ. ಈ ನಡುವೆ ಐಪಿಎಲ್’ನಲ್ಲಿ ಹೆಚ್ಚು ವಿಕೆಟ್ ಪಡೆದ ಆಟಗಾರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾನೆ. ಈತನ ಎಂಟ್ರಿಯಿಂದ ಟೀಂ ಇಂಡಿಯಾಗೆ ಆನೆ ಬಲ ಬಂದಿದೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ‘ಐಟಂ’ ಡ್ಯಾನ್ಸ್ ಮಾಡೋ ಆಫರ್ ಕೊಟ್ಟ ‘ದೇಶದ್ರೋಹಿ’ ನಟ!

ಟೀಂ ಇಂಡಿಯಾದಲ್ಲಿ ನಿರಂತರ ಅವಕಾಶಗಳು ಸಿಗದಿರುವ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ವಿಶ್ವಕಪ್ ಗೂ ಮುನ್ನ ತಂಡದಲ್ಲಿ ಸ್ಥಾನ ಪಡೆಯುವ ಲಕ್ಷಣ ಕಾಣುತ್ತಿದೆ. ಚಹಾಲ್ ತನ್ನ ಕೊನೆಯ ODI ಪಂದ್ಯವನ್ನು ಭಾರತದ ಪರವಾಗಿ, 24 ಜನವರಿ 2023 ರಂದು ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಅಂದಿನಿಂದ ಅವರು ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. ಆದರೆ ಮುಂಬರುವ ಪಂದ್ಯಗಳಲ್ಲಿ ಅವರು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕಾರಣ ಅವರು ಐಪಿಎಲ್’ನಲ್ಲಿ ಬೌಲಿಂಗ್ ಮಾಡುತ್ತಿರುವ ಶೈಲಿ.

ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಇದುವರೆಗೆ ನಡೆದ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ. ಎಕಾನಮಿ 7.85 ಆಗಿದೆ. ಈ ಸೀಸನ್’ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್ 17 ರನ್‌’ಗಳಿಗೆ 4 ವಿಕೆಟ್‌ಗಳು. ಭವಿಷ್ಯದಲ್ಲಿ ಇದೇ ರೀತಿ ಬೌಲಿಂಗ್ ಮಾಡಿದರೆ ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾದ ಭಾಗವಾಗುವುದು ಪಕ್ಕಾ ಎನ್ನಬಹುದು.

ODIಗಳಲ್ಲಿ ಅಂಕಿಅಂಶಗಳು ಹೀಗಿವೆ:

ಯುಜ್ವೇಂದ್ರ ಚಹಾಲ್ ಇದುವರೆಗೆ ಟೀಮ್ ಇಂಡಿಯಾ ಪರ 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 5.27 ರ ಎಕಾನಮಿ ದರದಲ್ಲಿ 121 ವಿಕೆಟ್’ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್ 42 ರನ್‌’ಗಳಿಗೆ 7 ವಿಕೆಟ್ ಕಬಳಿಸಿರುವುದು.

ಇದನ್ನೂ ಓದಿ: RCB vs CSK: ಮೂರನೇ ಗೆಲುವಿಗೆ ಬೆಂಗಳೂರು-ಚೆನ್ನೈ ಫೈಟ್! ಹೀಗಿರಲಿದೆ Playing XI; ಪಿಚ್ ರಿಪೋರ್ಟ್ ಇಲ್ಲಿದೆ

ಈ ಬಾರಿಯ ಐಪಿಎಲ್‌’ನಲ್ಲಿ ಯುಜುವೇಂದ್ರ ಚಹಾಲ್ ದೊಡ್ಡ ದಾಖಲೆ ಬರೆದಿದ್ದಾರೆ. ಭಾರತೀಯ ಸ್ಟಾರ್ ಸ್ಪಿನ್ನರ್ ಈಗ ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ 171 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಲೆಜೆಂಡರಿ ಲಸಿತ್ ಮಾಲಿಂಗ ನಂತರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News