ಒಂದು ಓವರ್ ನಲ್ಲಿ 4, 6, 4, 1, 6, ! ಟೀಂ ಇಂಡಿಯಾಗೆ ಸಿಕ್ಕಾಯ್ತು ಮ್ಯಾಚ್ ಫಿನಿಶರ್ ! ಬ್ಯಾಟ್ ಹಿಡಿದರೆ ಸಾಕು ರನ್ ಮಳೆ

ಮುಂದಿನ ದಿನಗಳಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಟೀಂ ಇಂಡಿಯಾಗೆ ರಿಂಕು ಸಿಂಗ್ ಉತ್ತಮ ಆಯ್ಕೆಯಾಗಲಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಮಿಂಚುತ್ತಿರುವ ರಿಂಕು ಸಿಂಗ್ ಟೀಂ ಇಂಡಿಯಾಗೆ ಇನ್ನಷ್ಟು ಬಲ ತುಂಬಲಿದ್ದಾರೆ.   

Written by - Ranjitha R K | Last Updated : Oct 3, 2023, 12:59 PM IST
  • ಕ್ರೀಸ್ ಗೆ ಇಳಿದ ತಕ್ಷಣ ರನ್ ಗಳ ಮಳೆ
  • ಟೀಂ ಇಂಡಿಯಾಗೆ ಸಿಕ್ಕಾಯ್ತು ಸ್ಪೋಟಕ ಬ್ಯಾಟ್ಸ್ ಮ್ಯಾನ್
  • 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಉತ್ತಮ ಆಯ್ಕೆ
ಒಂದು ಓವರ್ ನಲ್ಲಿ 4, 6, 4, 1, 6, ! ಟೀಂ ಇಂಡಿಯಾಗೆ ಸಿಕ್ಕಾಯ್ತು ಮ್ಯಾಚ್ ಫಿನಿಶರ್ ! ಬ್ಯಾಟ್ ಹಿಡಿದರೆ ಸಾಕು ರನ್ ಮಳೆ  title=

Team India Cricketer: ಕ್ರೀಸ್ ಗೆ ಇಳಿದ ತಕ್ಷಣ ಬ್ಯಾಟ್ ನಿಂದ  ರನ್ ಗಳ ಮಳೆಗರೆಯುವ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಟೀಂ ಇಂಡಿಯಾಗೆ ಸಿಕ್ಕಾಯ್ತು. ಈ ಆಟಗಾರ ಪಿಚ್‌ಗೆ ಕಾಲಿಟ್ಟಾಗಲೆಲ್ಲಾ ತನ್ನ ಬಿರುಸಿನ ಬ್ಯಾಟಿಂಗ್‌ನಿಂದ  ತನ್ನ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ. ಹೌದು, ಟೀಂ ಇಂಡಿಯಾಕ್ಕೆ ರಿಂಕು ಸಿಂಗ್ ರೂಪದಲ್ಲಿ ಬಲಿಷ್ಠ ಮ್ಯಾಚ್ ಫಿನಿಶರ್ ಸಿಕ್ಕಿದ್ದಾರೆ. ಮುಂದಿನ ದಿನಗಳಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಟೀಂ ಇಂಡಿಯಾಗೆ ರಿಂಕು ಸಿಂಗ್ ಉತ್ತಮ ಆಯ್ಕೆಯಾಗಲಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಮಿಂಚುತ್ತಿರುವ ರಿಂಕು ಸಿಂಗ್ ಟೀಂ ಇಂಡಿಯಾಗೆ ಇನ್ನಷ್ಟು ಬಲ ತುಂಬಲಿದ್ದಾರೆ. 

ಭಾರತಕ್ಕೆ  ಸಿಕ್ಕ ಹೊಸ ಮ್ಯಾಚ್ ಫಿನಿಶರ್ : 
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಮಂಗಳವಾರ ನೇಪಾಳ ವಿರುದ್ಧದ ತನ್ನ ಸ್ಫೋಟಕ ಬ್ಯಾಟಿಂಗ್‌ ಅನ್ನು ರಿಂಕು ಸಿಂಗ್ ಪ್ರದರ್ಶಿಸಿದ್ದಾರೆ. ರಿಂಕು ಸಿಂಗ್ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡ 37 ರನ್  ಸಿಡಿಸಿದ್ದಾರೆ. 

ರಿಂಕು ಸಿಂಗ್  ಬೆಂಕಿ ಪ್ರದರ್ಶನ ಹೀಗಿತ್ತು : 

 

ಇದನ್ನೂ ಓದಿ : ICC ODI ವಿಶ್ವಕಪ್ 2023 ಉದ್ಘಾಟನಾ ಸಮಾರಂಭ ದಿಢೀರ್ ರದ್ದು ಮಾಡಿತಾ ಬಿಸಿಸಿಐ?

ಬ್ಯಾಟ್‌ ಹಿಡಿದರೆ ಬಿರುಗಾಳಿ : 
ರಿಂಕು ಸಿಂಗ್ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ಮಾರಕ ಅಸ್ತ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ರಿಂಕು ಸಿಂಗ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ 2023ರಲ್ಲಿ ರಿಂಕು ಸಿಂಗ್ 14 ಪಂದ್ಯಗಳಲ್ಲಿ 474 ರನ್ ಗಳಿಸಿದ್ದರು. ರಿಂಕು ಸಿಂಗ್ ಅವರನ್ನು ಕೆಕೆಆರ್ ತಂಡ 2018 ರಲ್ಲಿ 80 ಲಕ್ಷ ರೂಪಾಯಿಗೆ ಖರೀದಿಸಿತ್ತು. ರಿಂಕು ಸಿಂಗ್ ಉತ್ತರ ಪ್ರದೇಶದ 42 ಪ್ರಥಮ ದರ್ಜೆ ಪಂದ್ಯಗಳಲ್ಲಿ 7 ಶತಕ ಮತ್ತು 19 ಅರ್ಧ ಶತಕಗಳನ್ನು ಒಳಗೊಂಡಂತೆ 3007 ರನ್ ಗಳಿಸಿದ್ದಾರೆ. 

ಸ್ಫೋಟಕ ಬ್ಯಾಟಿಂಗ್  ಪ್ರದರ್ಶನ :
ರಿಂಕು ಸಿಂಗ್ 55 ಲಿಸ್ಟ್ ಎ ಪಂದ್ಯಗಳಲ್ಲಿ 1844 ರನ್ ಗಳಿಸಿದ್ದಾರೆ. ರಿಂಕು ಸಿಂಗ್ ಅವರು ಲಿಸ್ಟ್ ಎ ನಲ್ಲಿ 1 ಶತಕ ಮತ್ತು 17 ಅರ್ಧ ಶತಕಗಳನ್ನು ಗಳಿಸಿದ್ದಾರೆ. ರಿಂಕು ಸಿಂಗ್ ಐಪಿಎಲ್ 2023 ರಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಬಿರುಗಾಳಿ ಎಬ್ಬಿಸಿದ್ದರು. ಇದರಿಂದಾಗಿಯೇ ಟೀಮ್ ಇಂಡಿಯಾದಲ್ಲಿ ಅವರಿಗೆ ಅವಕಾಶ ನೀಡುವಂತೆ ಒತ್ತಾಯಿಸಲಾಯಿತು. ಭಾರತಕ್ಕೆ ತನ್ನ ತಂಡದಲ್ಲಿ ಹೆಚ್ಚು ಹೆಚ್ಚು ಮ್ಯಾಚ್ ಫಿನಿಶರ್‌ಗಳ ಅಗತ್ಯವಿದೆ. ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ಸಿಂಗ್ ತನ್ನ ತಂಡವನ್ನು ಗೆಲುವಿನ ಗುರಿ ತಲುಪಿಸಿದ್ದರು. 

ಇದನ್ನೂ ಓದಿ : ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಯಶಸ್ವಿ ಜೈಸ್ವಾಲ್ ! ಅತ್ಯಂತ ಕಿರಿ ವಯಸ್ಸಿನಲ್ಲಿ ಇತಿಹಾಸ ನಿರ್ಮಿಸಿದ ಹೆಗ್ಗಳಿಕೆ

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

 

Trending News