“ಈ ಆಟಗಾರನೇ ಚಾಂಪಿಯನ್, ಗೆಲುವು ಈತನಿಂದಲೇ ಸಿಕ್ಕಿದ್ದು”- ರೋಹಿತ್ ಶರ್ಮಾ ಭರ್ಜರಿ ಜಯದ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ?

Rohit Sharma Statement: ಗೆಲುವಿಗೆ 399 ರನ್‌’ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 292 ರನ್‌’ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್‌’ನಲ್ಲಿ ದ್ವಿಶತಕ ಸಿಡಿಸಿದ ಯುವ ಯಶಸ್ವಿ ಜೈಸ್ವಾಲ್ ಮತ್ತು ಪಂದ್ಯದಲ್ಲಿ 9 ವಿಕೆಟ್ ಪಡೆದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪ್ರಯತ್ನವನ್ನು ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

Written by - Bhavishya Shetty | Last Updated : Feb 5, 2024, 06:25 PM IST
    • ಎರಡನೇ ಟೆಸ್ಟ್ ಅನ್ನು 106 ರನ್‌’ಗಳಿಂದ ಗೆದ್ದ ಭಾರತ
    • ಯುವ ಆಟಗಾರರ ಇಂತಹ ಪ್ರದರ್ಶನವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
    • ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿಕೆ
“ಈ ಆಟಗಾರನೇ ಚಾಂಪಿಯನ್, ಗೆಲುವು ಈತನಿಂದಲೇ ಸಿಕ್ಕಿದ್ದು”- ರೋಹಿತ್ ಶರ್ಮಾ ಭರ್ಜರಿ ಜಯದ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ? title=
Rohit Sharma

Rohit Sharma Statement: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಅನ್ನು 106 ರನ್‌’ಗಳಿಂದ ಗೆದ್ದ ಭಾರತ ಇತಿಹಾಸ ಸೃಷ್ಟಿಸಿದೆ. ಸರಣಿಯನ್ನು 1-1 ರಿಂದ ಸಮಬಲಗೊಳಿಸಿದ ಬಳಿಕ, ಈ ಬಲಿಷ್ಠ ತಂಡದ ವಿರುದ್ಧ ಯುವ ಆಟಗಾರರ ಇಂತಹ ಪ್ರದರ್ಶನವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: KSRTCಗೆ ವರ್ಷದೊಳಗೆ 1000 ಬಸ್ ಸೇರ್ಪಡೆ; ಮಹಿಳಾ ಸಬಲೀಕರಣಕ್ಕೆ ಪೂರಕವಾದ ಶಕ್ತಿ ಯೋಜನೆ: ಸಿಎಂ

ಗೆಲುವಿಗೆ 399 ರನ್‌’ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 292 ರನ್‌’ಗಳಿಗೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್‌’ನಲ್ಲಿ ದ್ವಿಶತಕ ಸಿಡಿಸಿದ ಯುವ ಯಶಸ್ವಿ ಜೈಸ್ವಾಲ್ ಮತ್ತು ಪಂದ್ಯದಲ್ಲಿ 9 ವಿಕೆಟ್ ಪಡೆದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪ್ರಯತ್ನವನ್ನು ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.

ಪಂದ್ಯದ ನಂತರ 'ಮ್ಯಾನ್ ಆಫ್ ದಿ ಮ್ಯಾಚ್' ಬುಮ್ರಾ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, 'ಅವರು ನಮಗೆ ಚಾಂಪಿಯನ್ ಆಟಗಾರ. ಕೆಲ ದಿನಗಳಿಂದ ನಮಗಾಗಿ ಈ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಪಂದ್ಯವನ್ನು ಗೆದ್ದಾಗ ಒಟ್ಟಾರೆ ಪ್ರದರ್ಶನವನ್ನು ನೋಡಬೇಕು. ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಸುಲಭವಲ್ಲ ಎಂದು ನಮಗೆ ತಿಳಿದಿದೆ, ಬೌಲರ್‌ಗಳು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಇನ್ನು ಈ ಪಿಚ್ ಬ್ಯಾಟಿಂಗ್‌’ಗೆ ಉತ್ತಮವಾಗಿತ್ತು. ಆದರೆ ಅನೇಕ ಬ್ಯಾಟ್ಸ್‌ಮನ್‌’ಗಳಿಗೆ ಉತ್ತಮ ಇನ್ನಿಂಗ್ಸ್‌ ಆಡಲು ಸಾಧ್ಯವಾಗಲಿಲ್ಲ” ಎಂದರು.

ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಸದ್ದು ಮಾಡಿದ್ದ ‘ಪೂಜಾ ಸ್ಥಳಗಳ ಕಾಯ್ದೆ’ ರಾಮಮಂದಿರಕ್ಕೆ ಏಕೆ ಅಡ್ಡಿಯಾಗಿಲ್ಲ?

'ಇದು ಸುಲಭದ ಸರಣಿಯಲ್ಲ'

ರೋಹಿತ್ ಶರ್ಮಾ ಮಾತು ಮುಂದುವರೆಸಿ, “ಈ ತಂಡದಲ್ಲಿ ಅನೇಕ ಯುವಕರಿದ್ದಾರೆ. ಅವರು ಈ ಸ್ವರೂಪಕ್ಕೆ ಹೊಸಬರು ಮತ್ತು ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಗೆಲುವು ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದೆ. ಅಂತಹ ಯುವ ತಂಡದೊಂದಿಗೆ ಸ್ಪರ್ಧಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ. ಇದು ನಮಗೆ ಸಕಾರಾತ್ಮಕ ಗೆಲುವು. ಇಂಗ್ಲೆಂಡ್ ತಂಡ ಉತ್ತಮವಾಗಿ ಆಡುತ್ತಿದ್ದು, ಇದು ಸುಲಭದ ಸರಣಿಯಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News