ಒಂದೇ ಪಂದ್ಯದಲ್ಲಿ ಆರಂಭಿಕರ ಶತಕದಾಟ: IPL ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದ ಗಿಲ್-ಸುದರ್ಶನ್

Shubman Gill-Sai Sudarshan: ಅಹಮದಾಬಾದ್‌’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಅದ್ಭುತ ಸೃಷ್ಟಿಸಿದ್ದಾರೆ. ಅಂದಹಾಗೆ ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ನಾಯಕತ್ವದ ಇನ್ನಿಂಗ್ಸ್ ಆಡಿದರು. ಈ ಋತುವಿನಲ್ಲಿ ಗಿಲ್  ಮೊದಲ ಶತಕ ಬಾರಿಸಿದ್ದಾರೆ. ಇನ್ನೊಂದೆಡೆ ಐಪಿಎಲ್ ಕ್ರಿಕೆಟ್ ವೃತ್ತಿಜೀವನದ ನಾಲ್ಕನೇ ಶತಕವಾಗಿದೆ.

Written by - Bhavishya Shetty | Last Updated : May 10, 2024, 09:24 PM IST
    • ಒಂದೇ ಪಂದ್ಯದಲ್ಲಿ ಆರಂಭಿಕ ಆಟಗಾರರಿಬ್ಬರ ಶತಕದಾಟ
    • ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ನಾಯಕತ್ವದ ಇನ್ನಿಂಗ್ಸ್ ಆಡಿದರು
    • ಜೊತೆ ಐಪಿಎಲ್‌’ನಲ್ಲಿ ಗುಜರಾತ್‌ ಪರ ಅತಿದೊಡ್ಡ ಜೊತೆಯಾಟ
ಒಂದೇ ಪಂದ್ಯದಲ್ಲಿ ಆರಂಭಿಕರ ಶತಕದಾಟ: IPL ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದ ಗಿಲ್-ಸುದರ್ಶನ್ title=
Shubman Gill- Sai Sudharsan

Shubman Gill-Sai Sudarshan: ಐಪಿಎಲ್ 2024ರ 59 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ನಾಯಕ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅಬ್ಬರಿಸಿದ್ದು, ಒಂದೇ ಪಂದ್ಯದಲ್ಲಿ ಆರಂಭಿಕ ಆಟಗಾರರಿಬ್ಬರು ಶತಕದಾಟವಾಡಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್’ಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಘೋಷಿಸಿದ ಸ್ಟಾರ್ ಬ್ಯಾಟ್ಸ್’ಮನ್!

ಅಹಮದಾಬಾದ್‌’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಅದ್ಭುತ ಸೃಷ್ಟಿಸಿದ್ದಾರೆ. ಅಂದಹಾಗೆ ಗಿಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ನಾಯಕತ್ವದ ಇನ್ನಿಂಗ್ಸ್ ಆಡಿದರು. ಈ ಋತುವಿನಲ್ಲಿ ಗಿಲ್  ಮೊದಲ ಶತಕ ಬಾರಿಸಿದ್ದಾರೆ. ಇನ್ನೊಂದೆಡೆ ಐಪಿಎಲ್ ಕ್ರಿಕೆಟ್ ವೃತ್ತಿಜೀವನದ ನಾಲ್ಕನೇ ಶತಕವಾಗಿದೆ.

ಈ ಪಂದ್ಯದಲ್ಲಿ, ಗಿಲ್ ತನ್ನ ಓಪನಿಂಗ್ ಪಾರ್ಟನರ್ ಸಾಯಿ ಸುದರ್ಶನ್ ಜೊತೆ ಐಪಿಎಲ್‌’ನಲ್ಲಿ ಗುಜರಾತ್‌ ಪರ ಅತಿದೊಡ್ಡ ಜೊತೆಯಾಟವನ್ನು ಆಡಿದ ದಾಖಲೆ ಬರೆದಿದ್ದಾರೆ.

ಸಾಯಿ ಸುದರ್ಶನ್ ದಾಖಲೆ:

ಸಾಯಿ ಸುದರ್ಶನ್ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ 1000 ರನ್‌’ಗಳ ಗಳಿಸಿದ ಆಟಗಾರ ಎಂದೆನಿಸಿಕೊಂಡಿದ್ದಾರೆ. ಇದರ ಜೊತೆಗೆ ಎಡಗೈ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮತ್ತು ರುತುರಾಜ್ ಗಾಯಕ್ವಾಡ್ ಜಂಟಿಯಾಗಿ ಹೊಂದಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ದಾಖಲೆ

ಶಾನ್ ಮಾರ್ಷ್ - 21 ಇನ್ನಿಂಗ್ಸ್

ಲೆಂಡ್ಲ್ ಸಿಮನ್ಸ್ - 23 ಇನ್ನಿಂಗ್ಸ್

ಮ್ಯಾಥ್ಯೂ ಹೇಡನ್ - 25 ಇನ್ನಿಂಗ್ಸ್

ಸಾಯಿ ಸುದರ್ಶನ್ - 25 ಇನ್ನಿಂಗ್ಸ್

ಜಾನಿ ಬೈರ್ಸ್ಟೋವ್ - 26 ಇನ್ನಿಂಗ್ಸ್

ಕ್ರಿಸ್ ಗೇಲ್ - 27 ಇನ್ನಿಂಗ್ಸ್

ಕೇನ್ ವಿಲಿಯಮ್ಸನ್ - 28 ಇನ್ನಿಂಗ್ಸ್

ಮೈಕೆಲ್ ಹಸ್ಸಿ - 30 ಇನ್ನಿಂಗ್ಸ್

ಸಚಿನ್ ತೆಂಡೂಲ್ಕರ್ - 31 ಇನ್ನಿಂಗ್ಸ್

ರುತುರಾಜ್ ಗಾಯಕ್ವಾಡ್ - 31 ಇನ್ನಿಂಗ್ಸ್

ಇದನ್ನೂ ಓದಿ:  ದ್ರಾವಿಡ್ ಅಧಿಕಾರಾವಧಿ ಅಂತ್ಯ: ಟಿ20 ವಿಶ್ವಕಪ್’ಗೆ ಮುನ್ನ ಭಾರತದ ಮುಖ್ಯ ಕೋಚ್ ಆಗಿ ದಿಗ್ಗಜ ನೇಮಕ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News