T20 World Cup 2022: ಟೀಂ ಇಂಡಿಯಾ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನ ಮದುವೆಯಾಗುತ್ತೇನೆಂದ ಪಾಕ್ ನಟಿ!

‘ಮುಂಬರುವ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಭಾರತವನ್ನು ‘ಅದ್ಭುತವಾಗಿ’ ಸೋಲಿಸಿದ್ರೆ ನಾನು ಜಿಂಬಾಬ್ವೆ ದೇಶದ ಯುವಕನನ್ನು ಮದುವೆಯಾಗುತ್ತೇನೆ’ ಅಂತಾ ಹೇಳಿದ್ದಾರೆ.

Written by - Puttaraj K Alur | Last Updated : Nov 4, 2022, 08:47 AM IST
  • ಭಾರತವನ್ನು ಸೋಲಿಸಿದ್ರೆ ನಾನು ಜಿಂಬಾಬ್ವೆ ದೇಶದ ಯುವಕನನ್ನು ಮದುವೆಯಾಗುತ್ತೇನೆ
  • ಜಿಂಬಾಬ್ವೆ ಯುವಕರಿಗೆ ಭರ್ಜರಿ ಆಫರ್ ನೀಡಿರುವ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ
  • ಪಾಕ್ ನಟಿಯ ಟ್ವೀಟ್ ಸಖತ್ ವೈರಲ್, ಭಾರತೀಯ ಕ್ರಿಕೆಟ್ ಪ್ರೇಮಿಗಳಿಂದ ಟ್ರೋಲ್
T20 World Cup 2022: ಟೀಂ ಇಂಡಿಯಾ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನ ಮದುವೆಯಾಗುತ್ತೇನೆಂದ ಪಾಕ್ ನಟಿ! title=
ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ ಭರ್ಜರಿ ಆಫರ್

ನವದೆಹಲಿ: ಭಾನುವಾರ ಭಾರತ ಮತ್ತು ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿವೆ. ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡದ ಸಮಿಫೈನಲ್ ಹಾದಿ ಸುಗಮವಾಗಿದೆ. ಆದರೆ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಜಿಂಬಾಬ್ವೆ ತಂಡದ ಕೈಯಲ್ಲಿ 1ರನ್‍ನಿಂದ ಸೋಲು ಕಂಡಿರುವ ಪಾಕ್ ತಂಡಕ್ಕೆ ಮರ್ಮಾಘಾತವಾಗಿದೆ. ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು 2 ಸೋಲು ಕಂಡಿರುವ ಪಾಕ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.  

ಭಾನುವಾರ ಒಟ್ಟು 3 ಪಂದ್ಯಗಳು ನಡೆಯಲಿವೆ. ಈ ಪೈಕಿ ನೆದರಲ್ಯಾಂಡ್ ಕೈಯಲ್ಲಿ ದಕ್ಷಿಣ ಆಫ್ರಿಕಾ ಸೋಲಬೇಕು, ಇಲ್ಲವೇ ಜಿಂಬಾಬ್ವೆ ಕೈಯಲ್ಲಿ ಭಾರತ ಸೋಲಬೇಕು. ಈ 2 ಪಂದ್ಯಗಳ ಫಲಿತಾಂಶದ ಮೇಲೆ ಇದೀಗ ಪಾಕಿಸ್ತಾನದ ಭವಿಷ್ಯ ನಿಂತಿದೆ. ಇಲ್ಲದಿದ್ದರೆ ಪಾಕ್ ಆಟಗಾರರು ಗಂಟುಮೂಟೆ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: T20 World Cup 2022 : ವಿಶ್ವಕಪ್‌ನಲ್ಲಿ ಈ ಬೆಸ್ಟ್ ಬೌಲರ್​ಗಳನ್ನ ಕಂಡುಕೊಂಡ ರೋಹಿತ್!

ಭಾರತ ಸೋತರೆ ಜಿಂಬಾಬ್ವೆ ಹುಡುಗನ ಮದುವೆಯಾಗುತ್ತೇನೆ

ಟಿ-20 ವಿಶ್ವಕಪ್‍ನ ಭಾನುವಾರದ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ್ರೆ ನಾನು ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ ಅಂತಾ ಪಾಕಿಸ್ತಾನದ ನಟಿ ಆಫರ್ ನೀಡಿದ್ದಾಳೆ. ಟೂರ್ನಿಯಿಂದಲೇ ನಿರ್ಗಮಿಸುವ ಹಂತದಲ್ಲಿರುವ ಪಾಕಿಸ್ತಾನದ ಸೆಮಿಫೈನಲ್ ಕನಸು ಇದೀಗ ಭಾರತ ಮತ್ತು ದ.ಆಫ್ರಿಕಾ ತಂಡಗಳ ಫಲಿತಾಂಶದ ಮೇಲೆ ನಿಂತಿದೆ. ಹೀಗಾಗಿ ಪಾಕ್ ನಟಿ ಸೆಹರ್ ಶಿನ್ವಾರಿ ಈ ಕುರಿತು ಟ್ವೀಟ್ ಮಾಡಿ ಭರ್ಜರಿ ಆಫರ್ ನೀಡಿದ್ದಾರೆ. ‘ಮುಂಬರುವ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಭಾರತವನ್ನು ‘ಅದ್ಭುತವಾಗಿ’ ಸೋಲಿಸಿದ್ರೆ ನಾನು ಜಿಂಬಾಬ್ವೆ ದೇಶದ ಯುವಕನನ್ನು ಮದುವೆಯಾಗುತ್ತೇನೆ’ ಅಂತಾ ಹೇಳಿದ್ದಾರೆ. ನಟಿಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈವರೆಗೂ ಈ ಪೋಸ್ಟ್‍ಅನ್ನು 15 ಸಾವಿರಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದು, 990ಕ್ಕೂ ಹೆಚ್ಚು ರಿಟ್ವೀಟ್‍ ಮಾಡಲಾಗಿದೆ.

ನಟಿಯ ಆಫರ್ ನೋಡಿ ಅನೇಕ ನೆಟಿಜನ್‍ಗಳು ನಾನು ಜಿಂಬಾಬ್ವೆ ಹುಡುಗ, ನನ್ನನ್ನೇ ಮದುವೆಯಾಗುಂತೆ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಇದಲ್ಲದೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕ್ ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಜಿಂಬಾಬ್ವೆ ತಂಡ ಭಾರತವನ್ನು ಸೋಲಿಸುವುದು ಕನಸಿನ ಮಾತು, ನೀನು ಏನಾದರೆ ಚಾಲೆಂಜ್ ಮಾಡಿದ್ರೆ ಜೀವನಪೂರ್ತಿ ಏಕಾಂಗಿಯಾಗಿ ಇರಬೇಕಾಗುತ್ತದೆ ಅಂತಾ ನಟಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Team India : ಟಿ20 ವಿಶ್ವಕಪ್‌ನಿಂದ ಈ ಆಲ್ ರೌಂಡರ್ ಆಟಗಾರ ಔಟ್!

ಈ ಹಿಂದೆ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಸೆಹರ್ ಶಿನ್ವಾರಿ ನಿರಂತರವಾಗಿ ಟ್ವೀಟ್ ಮಾಡಿ ಭಾರತ ಸೋಲಲಿ ಅಂತಾ ಹಾರೈಸಿದ್ದಳು. ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಸೋಲಿಸಿದ್ರೆ ನಾನು ತನ್ನ ಖಾತೆಯನ್ನೇ ಡಿಲೀಟ್ ಮಾಡುತ್ತೇನೆ ಅಂತಾ ಘೋಷಿಸಿದ್ರು. ಆದರೆ ಅಂದು ಭಾರತ ತಂಡ ಬಾಂಗ್ಲಾವನ್ನು ಸೋಲಿಸಿತ್ತು. ಪಂದ್ಯದ ಫಲಿತಾಂಶದ ಬಳಿಕ ನಟಿ ಶಿನ್ವಾರಿ ತಮ್ಮ ಟ್ವೀಟ್‍ಅನ್ನು ಡಿಲೀಟ್ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News