ರೋಹಿತ್ ಬಳಿಕ ಭಾರತದ ಶಾಶ್ವತ ಆರಂಭಿಕ ಆಟಗಾರನಾಗಲಿದ್ದಾನೆ ಈ ಡೆಡ್ಲಿ ಪ್ಲೇಯರ್! ಮೂರು ಸ್ವರೂಪಕ್ಕೂ ಈತನೇ ಓಪನರ್

Team India Openers, Cricket News in Kannada: ರೋಹಿತ್ ಶರ್ಮಾ ಅವರ ನಾಯಕತ್ವ ಮತ್ತು ಟೀಮ್ ಇಂಡಿಯಾದಲ್ಲಿ ಅವರ ಸ್ಥಾನದ ಬಗ್ಗೆ ಸದ್ಯ ಪ್ರಶ್ನೆಗಳಿವೆ. ಒಂದು ವೇಳೆ, ರೋಹಿತ್ ಶರ್ಮಾ ಮುಂದಿನ ದಿನಗಳಲ್ಲಿ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದರೆ, ಅವರ ಸ್ಥಾನಕ್ಕೆ ಯಾವ ಆಟಗಾರ ಬರಬಹುದು ಎಂಬ ಗೊಂದಲ ಎಲ್ಲಾ ಅಭಿಮಾನಿಗಳಲ್ಲಿ ಕಾಡುತ್ತಿದೆ.

Written by - Bhavishya Shetty | Last Updated : Nov 23, 2023, 02:48 PM IST
    • ಟೀಂ ಇಂಡಿಯಾಗೆ ರೋಹಿತ್ ರೀತಿ ಆಡುವ ಓರ್ವ ಓಪನರ್ ಅವಶ್ಯಕತೆ ಇದೆ
    • ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದ ರೋಹಿತ್ ಶರ್ಮಾ
    • ಆರಂಭಿಕ ಆಟಗಾರನಾಗಿ ಬಡ್ತಿ ಹೊಂದಲು ಕಾರಣವಾಗಿದ್ದು ಧೋನಿ
ರೋಹಿತ್ ಬಳಿಕ ಭಾರತದ ಶಾಶ್ವತ ಆರಂಭಿಕ ಆಟಗಾರನಾಗಲಿದ್ದಾನೆ ಈ ಡೆಡ್ಲಿ ಪ್ಲೇಯರ್! ಮೂರು ಸ್ವರೂಪಕ್ಕೂ ಈತನೇ ಓಪನರ್ title=
Rohit Sharma

Ishan Kishan Opener: ವಿಶ್ವಕಪ್ 2023ರ ಫೈನಲ್‌’ನಲ್ಲಿ ಸೋಲು ಕಂಡ ಭಾರತ ಇದೀಗ ಕೆಲ ಆಟಗಾರರು ನಿವೃತ್ತಿ ಘೋಷಿಸುತ್ತಾರೇನೋ ಎಂಬ ಭಯದಲ್ಲಿದೆ. ಇದಕ್ಕೆ ಕಾರಣ ಈ ಆಟಗಾರರ ವಯಸ್ಸು, ಅದರಲ್ಲಿ ಒಬ್ಬರು ಪ್ರಸ್ತುತ ಟೀಂ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮಾ.

ರೋಹಿತ್ ಶರ್ಮಾ ಅವರ ನಾಯಕತ್ವ ಮತ್ತು ಟೀಮ್ ಇಂಡಿಯಾದಲ್ಲಿ ಅವರ ಸ್ಥಾನದ ಬಗ್ಗೆ ಸದ್ಯ ಪ್ರಶ್ನೆಗಳಿವೆ. ಒಂದು ವೇಳೆ, ರೋಹಿತ್ ಶರ್ಮಾ ಮುಂದಿನ ದಿನಗಳಲ್ಲಿ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದರೆ, ಅವರ ಸ್ಥಾನಕ್ಕೆ ಯಾವ ಆಟಗಾರ ಬರಬಹುದು ಎಂಬ ಗೊಂದಲ ಎಲ್ಲಾ ಅಭಿಮಾನಿಗಳಲ್ಲಿ ಕಾಡುತ್ತಿದೆ. ಏಕೆಂದರೆ ವಿಶ್ವಕಪ್ ಟೂರ್ನಿಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳುವುದಾದರೆ, ಇಡೀ ಪಂದ್ಯಾವಳಿಯಲ್ಲಿ ರೋಹಿತ್ ಕೇವಲ ನಾಯಕನಾಗಿರದೆ, ಜವಾಬ್ದಾರಿಯುತವಾಗಿ ಆರಂಭಿಕ ಸ್ಥಾನದಲ್ಲಿದ್ದುಕೊಂಡು ಬ್ಯಾಟಿಂಗ್ ಮಾಡಿದ್ದರು.

ಇದನ್ನೂ ಓದಿ: ಎಲೆಕ್ಟ್ರಿಫೈಯಿಂಗ್ Pro Kabaddi League ಗೆ ಕೌಂಟ್‌ಡೌನ್ ಶುರು

ಈ ಎಲ್ಲಾ ಅಂಶಗಳನ್ನು ನೋಡುವಾಗ ಮುಂದೆ ಟೀಂ ಇಂಡಿಯಾಗೆ ಇಂತಹದ್ದೇ ಓರ್ವ ಓಪನರ್ ಅವಶ್ಯಕತೆ ಇದೆ. ಹಿಂದೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿದ್ದ ರೋಹಿತ್ ಶರ್ಮಾ, ಆರಂಭಿಕ ಆಟಗಾರನಾಗಿ ಬಡ್ತಿ ಹೊಂದಲು ಕಾರಣವಾಗಿದ್ದು ಧೋನಿ ಅವರು ಎಂಬುದು ಎಲ್ಲರಿಗೂ ತಿಳಿದ ವಿಷಯ.

ಅಂದಹಾಗೆ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿದ ಕ್ರಿಕೆಟಿಗ ಕೂಡ ಹೌದು. ಇದರಲ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 264 ರನ್ ಕೂಡ ಸೇರಿದೆ. ರೋಹಿತ್ ಶರ್ಮಾ ಓಪನರ್ ಆದ ಬಳಿಕ ಅವರನ್ನು ಹಿಟ್ ಮ್ಯಾನ್ ಎಂದೇ ಕರೆಯಲಾಯಿತು. ಇದೀಗ ಇವರು ಒಂದು ವೇಳೆ ನಿವೃತ್ತಿ ಘೋಷಿಸಿದರೆ ಅಥವಾ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟಲ್ಲಿ, ಆ ಸ್ಥಾನಕ್ಕೆ ಇಶಾನ್ ಕಿಶನ್ ನ್ಯಾಯ ಒದಗಿಸುವ ಸಾಧ್ಯತೆ ಇದೆ.

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಮಧ್ಯಮ ಕ್ರಮಾಂಕದಲ್ಲಿದ್ದ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಅವರನ್ನು ಓಪನರ್ ಆಗಿ ಮಾಡಿದಂತೆಯೇ, ಇಶಾನ್ ಕಿಶನ್ ಅವರನ್ನು ಇನ್ನುಮುಂದೆ ಖಾಯಂ ಓಪನರ್ ಆಗಿ ಮಾಡಿದರೆ ಟೀಂ ಇಂಡಿಯಾಗೆ ಭವಿಷ್ಯದಲ್ಲಿ ಪ್ರಯೋಜನವಾಗಲಿದೆ.

ಇಶಾನ್ ಕಿಶನ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ಆರಂಭಿಕ ಹಂತದಲ್ಲಿ ಎದುರಾಳಿ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡೋದು ಖಂಡಿತ.

ಇದನ್ನೂ ಓದಿ: ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್’ಗೆ ಕೂಡಿ ಬಂತು ಮದುವೆ ಭಾಗ್ಯ! ವಧು ಯಾರು ಗೊತ್ತಾ?

2023 ರ ODI ವಿಶ್ವಕಪ್ ನಂತರ, ಭಾರತವು ರೋಹಿತ್ ಶರ್ಮಾ ಬದಲಿಗೆ ಹೊಸ ಆರಂಭಿಕರನ್ನು ಸಿದ್ಧಪಡಿಸುವ ಅಗತ್ಯವಿದೆ. ಇನ್ನೊಂದೆಡೆ ಇಶಾನ್ ಕಿಶನ್ ಭಾರತದ ಹೊಸ ಓಪನರ್ ಆಗಲು ಸೂಕ್ತವಾಗಿದ್ದಾರೆ. ಅಂದಹಾಗೆ ಇಶಾನ್ 27 ಏಕದಿನ ಪಂದ್ಯಗಳಲ್ಲಿ 933 ರನ್ ಗಳಿಸಿದ್ದು, ಇದರಲ್ಲಿ 1 ಶತಕ ಮತ್ತು 7 ಅರ್ಧ ಶತಕಗಳು ಸೇರಿವೆ. ಇನ್ನು ಏಕದಿನದಲ್ಲಿ ಇಶಾನ್ ಕಿಶನ್ ಅವರ ಅತ್ಯುತ್ತಮ ಸ್ಕೋರ್ 210 ರನ್. 2022ರ ಡಿಸೆಂಬರ್ 10ರಂದು ಚಿತ್ತಗಾಂಗ್‌’ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ 131 ಎಸೆತಗಳಲ್ಲಿ 210 ರನ್ ಗಳಿಸಿದ್ದರು. 210 ರನ್‌’ಗಳ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಇಶಾನ್ ಕಿಶನ್ 24 ಬೌಂಡರಿ ಮತ್ತು 10 ಸಿಕ್ಸರ್‌’ಗಳನ್ನು ಬಾರಿಸಿದ್ದು ಅವಿಸ್ಮರಣೀಯ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News