FIFA World Cupನಲ್ಲಿ ಸೋತ ಬೆಲ್ಜಿಯಂ: ಕೋಪಗೊಂಡ ಅಭಿಮಾನಿಗಳಿಂದ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿ, ವಾಹನಗಳಿಗೆ ಬೆಂಕಿ

FIFA World Cup: ಕತಾರ್‌ನಲ್ಲಿ ಬೆಲ್ಜಿಯಂ ಸೋಲನುಭವಿಸುತ್ತಿದ್ದಂತೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿಯಾಯಿತು. ಬೆಲ್ಜಿಯಂ ಸೋಲಿನ ನಂತರ ಬ್ರಸೆಲ್ಸ್‌ನ ಬೀದಿಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಾಕಾರರು ಅನೇಕ ಅಂಗಡಿಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದರು.

Written by - Bhavishya Shetty | Last Updated : Nov 28, 2022, 08:48 AM IST
    • ಬೆಲ್ಜಿಯಂ ತಂಡವನ್ನು ಮೊರಾಕೊ ಎರಡು ಗೋಲುಗಳಿಂದ ಸೋಲಿಸಿದೆ
    • ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿಯಾಯಿತು
    • ಈ ಗಲಭೆಯಲ್ಲಿ ಓರ್ವ ಪತ್ರಕರ್ತ ಗಾಯಗೊಂಡಿದ್ದಾರೆ
FIFA World Cupನಲ್ಲಿ ಸೋತ ಬೆಲ್ಜಿಯಂ: ಕೋಪಗೊಂಡ ಅಭಿಮಾನಿಗಳಿಂದ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿ, ವಾಹನಗಳಿಗೆ ಬೆಂಕಿ title=
brazil

FIFA World Cup: ಫಿಫಾ ವಿಶ್ವಕಪ್ ನಲ್ಲಿ ಭಾನುವಾರ ಭಾರಿ ಸಂಚಲನ ಉಂಟಾಗಿದೆ. ವಿಶ್ವ ದರ್ಜೆಯ ಆಟಗಾರರಿಂದ ಕಂಗೊಳಿಸುತ್ತಿದ್ದ ಬೆಲ್ಜಿಯಂ ತಂಡವನ್ನು ಮೊರಾಕೊ ಎರಡು ಗೋಲುಗಳಿಂದ ಸೋಲಿಸಿದೆ. ಮೊರಾಕೊ ಪರ ಮೊದಲ ಗೋಲು ರೂಮನ್ ಸೈಸ್ ಮತ್ತು ಎರಡನೇ ಗೋಲು ಜಕಾರಿಯಾ ಅಬುಖ್ಲಾಲ್ ಬಾರಿಸಿದ್ದರು. ಈ ಗೆಲುವಿನ ನಂತರ, ಮೊರಾಕೊ ಫೈನಲ್ 16 ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಬೆಲ್ಜಿಯಂಗೆ ಆ ಹಂತ ತಲುಪಲು ಕಷ್ಟವಾಗಿದೆ.

ಕತಾರ್‌ನಲ್ಲಿ ಬೆಲ್ಜಿಯಂ ಸೋಲನುಭವಿಸುತ್ತಿದ್ದಂತೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿಯಾಯಿತು. ಬೆಲ್ಜಿಯಂ ಸೋಲಿನ ನಂತರ ಬ್ರಸೆಲ್ಸ್‌ನ ಬೀದಿಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಾಕಾರರು ಅನೇಕ ಅಂಗಡಿಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದರು.

ಇದನ್ನೂ ಓದಿ: ಅಂಧರ ವಿಶ್ವಕಪ್ ಗೆ ಕೊಪ್ಪಳ ಯುವಕ ಆಯ್ಕೆ

ಪೊಲೀಸರು ಬ್ರಸೆಲ್ಸ್‌ನ ಕೇಂದ್ರ ಭಾಗಗಳನ್ನು ಬಂದ್ ಮಾಡಿ, ಹಿಂಸಾಚಾರವನ್ನು ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಸಹ ಪ್ರಯೋಗಿಸಿದರು. ಈ ಗಲಭೆಯಲ್ಲಿ ಓರ್ವ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಹತ್ತಾರು ಗಲಭೆಕೋರರು ಕಾರನ್ನು ಉರುಳಿಸಿ ಬೆಂಕಿ ಹಚ್ಚಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್‌ ಸೇರಿ ಅನೇಕ ವಾಹನಗಳಿಗೆ ಹಾನಿಯುಂಟಾಗಿದೆ.

ಬ್ರಸೆಲ್ಸ್ ಮೇಯರ್ ಫಿಲಿಪ್ ಕ್ಲೋಸ್ ಜನರು ನಗರ ಕೇಂದ್ರದಿಂದ ದೂರವಿರುವಂತೆ ಸೂಚಿಸಿದ್ದಾರೆ. ಬೀದಿಗಳಲ್ಲಿ ಕ್ರಮವನ್ನು ತೆಗೆದುಕೊಳ್ಳಲು ಅಧಿಕಾರಿಗಳು ತಮ್ಮ ಕೈಲಾದಷ್ಟು ಶ್ರಮ ಪಡುತ್ತಿದ್ದಾರೆ. ಪೊಲೀಸರ ಆದೇಶದ ನಂತರ ಮೆಟ್ರೋ ಮತ್ತು ಟ್ರಾಮ್ ಸಂಚಾರವನ್ನು ಸಹ ನಿಲ್ಲಿಸಲಾಗಿದೆ.ಸುಮಾರು 100 ಪೊಲೀಸ್ ಅಧಿಕಾರಿಗಳನ್ನು ಸಜ್ಜುಗೊಳಿಸಲಾಗಿದ್ದು, ಹಿಂಸಾಚಾರದ ಸಮಯದಲ್ಲಿ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: IND vs NZ: ಸಂಜು ಸ್ಯಾಮ್ಸನ್ ರನ್ನು ಪ್ಲೇಯಿಂಗ್ XI ನಿಂದ ಕೈಬಿಟ್ಟಿದಕ್ಕೆ ಆಕ್ರೋಶ: ತಂಡದ ನಿರ್ವಹಣೆ ಬಗ್ಗೆ ಪ್ರಶ್ನಿಸಿದ ಸ್ಟಾರ್ ಆಟಗಾರ

ನೆದರ್ಲೆಂಡ್ಸ್‌ನಲ್ಲೂ ಹಿಂಸಾಚಾರ:

ರಾಯಿಟರ್ಸ್ ವರದಿಯ ಪ್ರಕಾರ, ನೆರೆಯ ನೆದರ್‌ಲ್ಯಾಂಡ್ಸ್‌ನ ಪೊಲೀಸರು ರೋಟರ್‌ಡ್ಯಾಮ್ ನಗರದಲ್ಲಿಯೂ ಹಿಂಸಾಚಾರ ಸಂಭವಿಸಿದೆ ಎಂದು ಹೇಳಿದ್ದಾರೆ. 500 ಫುಟ್ಬಾಲ್ ಬೆಂಬಲಿಗರ ಗುಂಪನ್ನು ಚದುರಿಸಲು ಅಧಿಕಾರಿಗಳು ಪ್ರಯತ್ನಿಸಿದರೂ ಸಹ ಪೊಲೀಸರ ಮೇಲೆಯೇ ಪಟಾಕಿ ಮತ್ತು ಗಾಜಿನಿಂದ ಹಲ್ಲೆ ನಡೆಸಿದ್ದರು. ಅದೇ ಸಮಯದಲ್ಲಿ, ರಾಜಧಾನಿ ಆಮ್ಸ್ಟರ್‌ಡ್ಯಾಮ್ ಮತ್ತು ಹೇಗ್‌ನಲ್ಲಿಯೂ ಉದ್ವಿಗ್ನತೆ ಹರಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News