ಸೌತೆಕಾಯಿ ಇಲ್ಲದೆ ಅಪೂರ್ಣ ಕೃಷ್ಣಜನ್ಮಾಷ್ಟಮಿ: ಇದರ ಮಹತ್ವವೇನು ಗೊತ್ತಾ?

Sri Krishna Janmashtami: ಇಂದು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ಭಗವಾನ್ ಕೃಷ್ಣನಿಗಾಗಿ 108 ಬಗೆಯ ಖಾದ್ಯಗಳನ್ನು ಮಾಡಲಾಗುತ್ತದೆ. ಆದರೆ, ಸೌತೆಕಾಯಿ ಇಲ್ಲದೆ ಕೃಷ್ಣಜನ್ಮಾಷ್ಟಮಿ ಅಪೂರ್ಣ ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Sep 7, 2023, 08:05 AM IST
  • ಧಾರ್ಮಿಕ ನಂಬಿಕೆಗಳ ಪ್ರಕಾರ, ಬಾಲ ಗೋಪಾಲ, ಲಡ್ಡು ಗೋಪಾಲ ಎಂತೆಲ್ಲಾ ಹಲವು ನಾಮಗಳಿಂದ ಸ್ಮರಿಸಲ್ಪಡುವ ಬೆಣ್ಣೆ ಕೃಷ್ಣ ಸೌತೆಕಾಯಿಯಿಂದ ಹುಟ್ಟಿರುವನೆಂದು ನಂಬಲಾಗಿದೆ.
  • ಹಾಗಾಗಿಯೇ, ಕೃಷ್ಣ ಜನ್ಮಾಷ್ಟಮಿಯ ದಿನ ಶ್ರೀ ಕೃಷ್ಣನ ಆರಾಧನೆ ವೇಳೆ ಭಕ್ತರು ಕೃಷ್ಣನ ವಿಗ್ರಹದ ಬಳಿ ಸೌತೆಕಾಯಿಯನ್ನು ಇಟ್ಟು ಮಧ್ಯರಾತ್ರಿ 12 ಗಂಟೆಗೆ ಸೌತೆಕಾಯಿಯನ್ನು ಕಾಂಡದಿಂದ ಬೇರ್ಪಡಿಸುತ್ತಾರೆ.
  • ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜೆಯಲ್ಲಿ ಇದಕ್ಕೆ ಹೊಕ್ಕುಳಬಳ್ಳಿಯ ಚುಚ್ಚುವಿಕೆ ಎಂದು ಕರೆಯಲಾಗುತ್ತದೆ.
ಸೌತೆಕಾಯಿ ಇಲ್ಲದೆ ಅಪೂರ್ಣ ಕೃಷ್ಣಜನ್ಮಾಷ್ಟಮಿ: ಇದರ ಮಹತ್ವವೇನು ಗೊತ್ತಾ?  title=

Sri Krishna Janmashtami: ಪ್ರತಿ ವರ್ಷ ದೇಶಾದ್ಯಂತ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ಮಧ್ಯರಾತ್ರಿಯಲ್ಲಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದ್ದರಿಂದ ಕೃಷ್ಣ ಜನ್ಮಾಷ್ಟಮಿಯ ದಿನ ರಾತ್ರಿ ವೇಳೆ ಬಾಲಗೋಪಾಲನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ವಿಜೃಂಭಣೆಯಿಂದ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. 

ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಗವಾನ್ ಕೃಷ್ಣನಿಗಾಗಿ 108 ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ, ಸೌತೆಕಾಯಿ ಇಲ್ಲದೆ ಕೃಷ್ಣಜನ್ಮಾಷ್ಟಮಿ ಅಪೂರ್ಣ ಎಂದು ನಿಮಗೆ ತಿಳಿದಿದೆಯೇ? ಅದರಲ್ಲೂ ಕೃಷ್ಣ ಜನ್ಮಾಷ್ಟಮಿಯ ವೇಳೆ ಪೂಜೆಯಲ್ಲಿ ಕಾಂಡದ ಸೌತೆಕಾಯಿ ಇರಲೇಬೇಕು ಎಂಬ ನಿಯಮವಿದ್ದು, ಈ ಸೌತೆಕಾಯಿಯನ್ನು ಹೊಕ್ಕುಳಬಳ್ಳಿಯಂತೆ ಎಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ- Krishna Janmashtami: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಧಾರ್ಮಿಕ ನಂಬಿಕೆಗಳ ಪ್ರಕಾರ, ಬಾಲ ಗೋಪಾಲ, ಲಡ್ಡು ಗೋಪಾಲ ಎಂತೆಲ್ಲಾ ಹಲವು ನಾಮಗಳಿಂದ ಸ್ಮರಿಸಲ್ಪಡುವ ಬೆಣ್ಣೆ ಕೃಷ್ಣ ಸೌತೆಕಾಯಿಯಿಂದ ಹುಟ್ಟಿರುವನೆಂದು ನಂಬಲಾಗಿದೆ. ಹಾಗಾಗಿಯೇ, ಕೃಷ್ಣ ಜನ್ಮಾಷ್ಟಮಿಯ ದಿನ ಶ್ರೀ ಕೃಷ್ಣನ ಆರಾಧನೆ ವೇಳೆ ಭಕ್ತರು ಕೃಷ್ಣನ ವಿಗ್ರಹದ ಬಳಿ ಸೌತೆಕಾಯಿಯನ್ನು ಇಟ್ಟು ಮಧ್ಯರಾತ್ರಿ 12 ಗಂಟೆಗೆ ಸೌತೆಕಾಯಿಯನ್ನು ಕಾಂಡದಿಂದ ಬೇರ್ಪಡಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜೆಯಲ್ಲಿ ಇದಕ್ಕೆ ಹೊಕ್ಕುಳಬಳ್ಳಿಯ ಚುಚ್ಚುವಿಕೆ ಎಂದು ಕರೆಯಲಾಗುತ್ತದೆ. 

ಏನಿದು ಹೊಕ್ಕುಳಬಳ್ಳಿ ಚುಚ್ಚುವಿಕೆ? 
ತಾಯಿಯ ಗರ್ಭದಿಂದ ಮಗು ಹೊರಬಂದಾಗ ಹೊಕ್ಕುಳಬಳ್ಳಿಯಿಂದ ಮಗುವನ್ನು ಹೇಗೆ ಬೇರ್ಪಡಿಸಲಾಗುತ್ತದೆಯೋ ಅದೇ ರೀತಿ ಕಾಂಡದಿಂದ ಸೌತೆಕಾಯಿಯನ್ನು ಶೀತದಿಂದ ಬೇರ್ಪಡಿಸಲಾಗುತ್ತದೆ. ಇದಕ್ಕೆ ಹೊಕ್ಕುಳಬಳ್ಳಿಯ ಚುಚ್ಚುವಿಕೆ ಎಂದು ಹೇಳಲಾಗುತ್ತದೆ. ಇದು ಹೊಕ್ಕುಳಬಳ್ಳಿಯಿಂದ ಪ್ರತ್ಯೇಕತೆಯ ಸಂಕೇತ ಎಂತಲೂ ಹೇಳಲಾಗುತ್ತದೆ.  ಇದನ್ನು ಶ್ರೀಕೃಷ್ಣನು ಮಾತೆ ದೇವಕಿಯ ಗರ್ಭದಿಂದ ತೆಗೆದು ಹಾಕಿದ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿಯೇ ಸೌತೆಕಾಯಿ ಇಲ್ಲದೆ ಕೃಷ್ಣನ ಪೂಜೆ ಅಪೂರ್ಣ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಸಿಲಿಕಾನ್ ಸಿಟಿ ಜನರ ಸಿದ್ಧತೆ

ಪೂಜಾ ಕೈಂಕರ್ಯಗಳು ಪೂರ್ಣಗೊಂಡ ಬಳಿಕ ಈ ಸೌತೆಕಾಯಿಯನ್ನು ಕತ್ತರಿಸಿ ಮಹಿಳೆಯರಿಗೆ ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಪ್ರಸಾದವಾಗಿ ನೀಡುವುದು ತುಂಬಾ ಶ್ರೇಷ್ಠ ಎಂಬ ನಂಬಿಕೆಯೂ ಇದೆ. 

ಇದಲ್ಲದೆ, ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಪೂಜೆಯ ವೇಳೆ ಸೌತೆಕಾಯಿಯನ್ನು ಬಳಸುವುದರಿಂದ ಶ್ರೀ ಕೃಷ್ಣ ಪರಮಾತ್ಮನು ಬಹಳ ಬೇಗ ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಅವರ ಎಲ್ಲಾ ಕಷ್ಟಗಳನ್ನು ಶಮನಗೊಳಿಸುತ್ತಾನೆ ಎಂತಲೂ ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News