Guess: ಈ ಫೋಟೋದಲ್ಲಿರುವ ಬಾಲಕ ಯಾರೆಂದು ಗುರುತಿಸಬಲ್ಲಿರಾ? ಟೀಂ ಇಂಡಿಯಾ ಲೆಜೆಂಡರಿ ಆಟಗಾರನೀತ!!

Guess This Team India Cricketer: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಖ್ಯಾತ ಸೆಲೆಬ್ರಿಟಿಗಳು ಹಾಗೂ ದಿಗ್ಗಕ ಕ್ರಿಕೆಟಿಗರ ಬಾಲ್ಯದ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ.. ಅದೇ ರೀತಿ ಇದೀಗ ಕ್ರಿಕೆಟ್‌ ಪ್ರಿಯರ ಆಲ್‌ಟೈಂ ಫೇವರೆಟ್‌ ಟೀಂ ಇಂಡಿಯಾ ಆಟಗಾರನ ಚೈಲ್ಡ್‌ಹುಡ್‌ ಪೋಟೋವೊಂದು ಸಖತ್‌ ಸದ್ದು ಮಾಡುತ್ತಿದೆ.. ಹಾಗಾದ್ರೆ ಈ ಪೋಟೋದಲ್ಲಿ ಬಾಲಕ ಯಾರೆಂದು ಗುರುತಿಸಿ.. 
 

1 /5

ರೋಹಿತ್ ಶರ್ಮಾ.. ಯಾವುದೇ ಪರಿಚಯ ಅಗತ್ಯವಿಲ್ಲದ ಹೆಸರು. ಕ್ರಿಕೆಟ್ ಲೋಕಕ್ಕಷ್ಟೇ ಅಲ್ಲ.. ಈ ಹೆಸರು ಗೊತ್ತಿಲ್ಲದವರೇ ಇಲ್ಲ. ಅಭಿಮಾನಿಗಳು ಅವರನ್ನು ಹಿಟ್ ಮ್ಯಾನ್ ಎಂದು ಕರೆಯುವ.. ಕ್ರಿಕೆಟ್‌ನಲ್ಲಿ ಭಾರತದ ಶ್ರೀಮಂತ ಪರಂಪರೆಯನ್ನು ಮುನ್ನಡೆಸುತ್ತಿರುವ ತಂಡದ ನಾಯಕ.. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟನ್‌ಗಟ್ಟಲೆ ರನ್‌ಗಳನ್ನು ಗಳಿಸುತ್ತಿರುವ ಡ್ಯಾಶಿಂಗ್ ಓಪನರ್..   

2 /5

ಅಭಿಮಾನಿಗಳಿಂದ ಹಿಟ್‌ಮ್ಯಾನ್ ಎಂದೇ ಕರೆಯಲ್ಪಡುವ ರೋಹಿತ್ ಶರ್ಮಾ ಇತ್ತೀಚೆಗಷ್ಟೇ 36 ನೇ ವರ್ಷಕ್ಕೆ ಕಾಲಿಟ್ಟರು. ರೋಹಿತ್ 1987 ರ ಏಪ್ರಿಲ್ 30 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು.. ಇವರು ಮೈದಾನಕ್ಕಿಳಿದು ಮೊದಲು ಬ್ಯಾಟ್‌ ಹಿಡಿದಿದ್ದು 1999 ರಲ್ಲಿ 2006 ರ ಹೊತ್ತಿಗೆ, ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು.  

3 /5

 ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಅವರು ಎಲ್ಲಾ ಸ್ವರೂಪಗಳಲ್ಲಿಯೂ ಆಡಿ ಒಟ್ಟು 18,820 ರನ್ ಗಳಿಸಿದರು. ಇದರಲ್ಲಿ ODI- 10,709 ರನ್, ಟೆಸ್ಟ್- 4,137, T20 ಅಂತರಾಷ್ಟ್ರೀಯ- 3,974 ರನ್ಗಳು ಸೇರಿವೆ.   

4 /5

ರೋಹಿತ್ ಶರ್ಮಾ 48 ಶತಕಗಳನ್ನು ಭಾರಿಸಿದ್ದು, 597 ಸಿಕ್ಸರ್‌ಗಳನ್ನು ಹೊಡೆದ ದಾಖಲೆಯನ್ನು ಹೊಂದಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ 6,522 ರನ್ ಗಳಿಸಿದ್ದಾರೆ.   

5 /5

ರೋಹಿತ್ ಶರ್ಮಾ ಒಂದೇ ಐಸಿಸಿ ವಿಶ್ವಕಪ್ ಆವೃತ್ತಿಯಲ್ಲಿ ಐದು ಶತಕಗಳನ್ನು ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ, ಅವರು ಐಸಿಸಿ ವಿಶ್ವಕಪ್ 2023 ರಲ್ಲಿ ಅದ್ಭುತವಾಗಿ ಆಡಿದ್ದರು. ಅವರು 125.9 ಸ್ಟ್ರೈಕ್ ರೇಟ್‌ನಲ್ಲಿ 597 ರನ್ ಗಳಿಸಿದರು.