Biggboss ಮುಗಿಯುತ್ತಿದ್ದಂತೆ ವಿನಯ್ ಗೆ ಜಾಕ್ ಪಾಟ್!ಕಿಚ್ಚ ಸುದೀಪನ ಟ್ವೀಟ್ ನಲ್ಲಿದೆ ಗುಡ್ ನ್ಯೂಸ್

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ವಿನಯ್ ಗೆ ಗುಡ್ ನ್ಯೂಸ್ ಸಿಕ್ಕಿದೆ. 

BBK 10 Vinay Gowda : ಬಿಗ್ ಬಾಸ್ ಸೀಸನ್ ೧೦ಕ್ಕೆ ತೆರೆ ಬಿದ್ದಿದೆ. ಈ ಸೀಸನ್ ನ ವಿನ್ನರ್ ಆಗಿ ಕಾರ್ತಿಕ್ ಹೊರ ಹೊಮ್ಮಿದ್ದಾರೆ. ವಿನ್ನರ್ ರೇಸ್ ನಲ್ಲಿದ್ದ ವಿನಯ್, ಸಂಗೀತಾ, ಟಾಪ್ 5 ನಲ್ಲಿ ಸ್ಥಾನ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಬಿಗ್ ಬಾಸ್ ಮನೆಯಲ್ಲಿ ಭಾರೀ ಸದ್ದು ಮಾಡಿದ್ದ ಸ್ಪರ್ಧಿ ಎಂದರೆ ಅದು ವಿನಯ್ ಗೌಡ. ಬಿಗ್ ಬಾಸ್ ಮನೆಯ ಆನೆ, ವಿಲನ್ ಎಂಬ ಹೆಸರುಗಳಿಂದ ಕರೆಸಿಕೊಂಡಿದ್ದಾರೆ.   

2 /7

ತನ್ನ ಸ್ನೇಹಿತರ ಬಳಗದಲ್ಲಿ ಅದ್ಭುತವಾಗಿ ಗುರುತಿಸಿಕೊಂಡಿದ್ದ ವಿನಯ್, ಟಾಪ್ ೫ನಲ್ಲಿ ಸ್ಥಾನ ಪಡೆದಿದ್ದರು. ವಿನ್ನರ್ ರೇಸ್ ನಲ್ಲಿದ್ದ ವಿನಯ್ ಟಾಪ್ 3 ಯಲ್ಲಿ ಸ್ಥಾನ ಪಡೆಯುವಲ್ಲಿ ಕೂಡಾ ವಿಫಲರಾದರು. 

3 /7

ವಿನಯ್ ಅವರ ಎಲಿಮಿನೇಶನ್ ಅವರ ಅಭಿಮಾನಿಗಳು ಮಾತ್ರವಲ್ಲದೆ, ಬಿಗ್ ಮನೆಯ ಕೆಲವು ಮಾಜಿ ಸ್ಪರ್ಧಿಗಳಿಗೂ ಶಾಕ್ ನೀಡಿತ್ತು.    

4 /7

ಬಿಗ್ ಬಾಸ್ ಪಟ್ಟ ಸೋತಿದ್ದರೂ ವಿನಯ್ ಕಿಚ್ಚನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಿಚ್ಚ ಕೂಡಾ ಅನೇಕ ಬಾರಿ ವಿನಯ್ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಆಡಿರುವುದು ಈ ಸೀಸನ್ ನಲ್ಲಿ ಕಂಡು ಬಂದಿದೆ.  

5 /7

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ವಿನಯ್ ಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು , ಅಮರನಾಥ ಗೌಡ ಎನ್ನುವವರು ವಿನಯ್ ಮತ್ತು ಕಿಚ್ಚ ಸುದೀಪನನ್ನು ಒಂದೇ ಸಿನಿಮಾದಲ್ಲಿ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ಈ ಆಸೆ ಈಡೇರುವುದು ಸಾಧ್ಯವೇ ಎನ್ನುವುದನ್ನು ಕಿಚ್ಚನಿಗೆ ಪ್ರಶ್ನಿಸಿದ್ದಾರೆ.   

6 /7

ಇದಕ್ಕೆ ಉತ್ತರಿಸಿರುವ ಕಿಚ್ಚ ಸುದೀಪ ಖಂಡಿತವಾಗಿಯೂ, ವಿನಯ್ ಅವರದ್ದು ಅದ್ಭುತ ವ್ಯಕ್ತಿತ್ವ ಎಂದು ಉತ್ತರಿಸಿದ್ದಾರೆ. ಕಿಚ್ಚನ ಈ ಉತ್ತರ ಈಗ ಭಾರೀ ವೈರಲ್ ಆಗುತ್ತಿದೆ.

7 /7

ಇವತ್ತಲ್ಲ ನಾಳೆ ಇವರಿಬ್ಬರು ಜೊತೆಯಾಗಿ ನಟಿಸಿಯೇ ನಟಿಸುತ್ತಾರೆ ಎನುವ ಮಾತು ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ.