Health Benefits of Guava: ಸೀಬೆ ಹಣ್ಣು ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ

Health Benefits of Guava: ಪೇರಳೆ ಅಥವಾ ಸೀಬೆ ಹಣ್ಣು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದಲ್ಲದೇ, ದೇಹದ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

Health Benefits of Guava: ಪೇರಳೆ ಅಥವಾ ಸೀಬೆ ಹಣ್ಣು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಇದು ಕೇವಲ 37 ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ಡಯಟ್‍ನಲ್ಲಿ ಸೇರಿಸಿಕೊಳ್ಳಬಹುದು. ಇದರಲ್ಲಿನ ಫೈಬರ್ ಸೇವನೆಯು ದೇಹಕ್ಕೆ ಅತ್ಯುತ್ತಮವಾಗಿದ್ದು, ಜೀವಸತ್ವ ಮತ್ತು ಖನಿಜಗಳಿಂದ ತುಂಬಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವುದಲ್ಲದೇ, ದೇಹದ ತೂಕವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪೇರಳೆ ಅಥವಾ ಸೀಬೆ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಪೇರಳೆಯಲ್ಲಿರುವ ವಿಟಮಿನ್ ‘C’ ಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ ‘A’ ಹೆಚ್ಚಿರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

2 /5

ಸೀಬೆಹಣ್ಣು ಮಳೆಗಾಲದಲ್ಲಿ ಬರುವ ಶೀತ, ನೆಗಡಿ & ಕೆಮ್ಮು ದೂರಮಾಡುತ್ತದೆ. ವಿಟಮಿನ್ ‘ಸಿ’ಗೆ ಕ್ಯಾನ್ಸರ್ ಕಾರಕಗಳನ್ನು ದೂರ ಮಾಡುವ ಶಕ್ತಿಯೂ ಇದೆ. ಸೀಬೆ ಹಣ್ಣಿನ ಬೀಜದ ಸತ್ವವು ಥೈರಾಯಿಡ್ ಗ್ರಂಥಿಗೆ ಆರೋಗ್ಯಕಾರಿಯಾಗಿದೆ.

3 /5

ಸೀಬೆಕಾಯಿಗೆ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಇದ್ದು, ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣ ಜೀರ್ಣಾಶಯವನ್ನು ಆರೋಗ್ಯದಿಂದಿಡುತ್ತದೆ. ಪೇರಳೆಯನ್ನು ತಿನ್ನುವುದರಿಂದ ದೇಹದಲ್ಲಿ ಪೊಟಾಶಿಯಂ, ಸೋಡಿಯಂ ಸಮತೋಲನದಲ್ಲಿರುತ್ತದೆ.

4 /5

ಸೀಬೆ ಹಣ್ಣು ಸೇವಿಸುವುದರಿಂದ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ತಗ್ಗುತ್ತದೆ. ಅಜೀರ್ಣವಿದ್ದಾಗ, ವಾಂತಿ ಇರುವಾಗ 4 ಸೀಬೆ ಮರದ ಎಲೆಗಳನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಕುದಿಸಿ ಕುಡಿದರೆ ನಿರಾಳರಾಗುತ್ತೀರಿ. ಹಲ್ಲುಗಳ ನಡುವೆ ಕಾಡುವ ಇನ್ಫೆಕ್ಷನ್ ಅನ್ನು ಪರಿಹರಿಸುತ್ತದೆ.

5 /5

ಸೀಬೆಯಲ್ಲಿನ ಆಂಟಿ ಆಕ್ಸಿಡೆಂಟ್‍ಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ಒಂದು ಸೀಬೆ ತಿಂದರೆ ಚರ್ಮವೂ ಆರೋಗ್ಯವಾಗಿರುತ್ತದೆ.  ಸೀಬೆ ಮರದ ಎಲೆಗಳಿಂದ ತಯಾರಿಸುವ ಟೀ ಕುಡಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಒಂದೇ ಹದದಲ್ಲಿ ಇರುತ್ತದೆ. ಬಾಯಿಯಲ್ಲಿನ ಅಲ್ಸರ್, ಹುಣ್ಣುಗಳಂತಹ ಅನಾರೋಗ್ಯಗಳನ್ನು ದೂರ ಇಡುವಲ್ಲಿಯೂ ಇದು ಸಹಕಾರಿ.