Guru Asnwini Gochar 2023: ಸುಖ-ಐಶ್ವರ್ಯಕಾರಕ ದೇವಗುರು ಬೃಹಸ್ಪತಿಯ ಅಶ್ವಿನಿ ನಕ್ಷತ್ರ ಪ್ರವೇಶ, ಈ ರಾಶಿಗಳ ಜನರಿಗೆ ಭರ್ಜರಿ ಲಾಭ!

Guru Ashwini Nakshatra Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 22 ರಂದು ದೇವ ಗುರು ಬೃಹಸ್ಪತಿ ಮಂಗಳನ ರಾಶಿಯಾಗಿರುವ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಇದೇ ದಿನ ಆತನ ಅಶ್ವಿನಿ ನಕ್ಷತ್ರ ಗೋಚರ ಕೂಡ ನೆರವೇರಲಿದೆ. ಗುರುವಿನ ಈ ನಕ್ಷತ್ರ ಗೋಚರದಿಂದ ಯಾರಿಗೆ ಲಾಭ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
 

Guru Ashwini Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿರ್ಧಿಷ್ಟ ಕಾಲಾಂತರದಲ್ಲಿ ತನ್ನ ರಾಶಿ ಹಾಗೂ ನಕ್ಷತ್ರವನ್ನು ಪರಿವರ್ತಿಸುತ್ತಲೆ ಇರುತ್ತವೆ. ಗ್ರಹಗಳ ಈ ಗೋಚರ ಮಾನವ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ದೇವ ಗುರು ಬೃಹಸ್ಪತಿ ತನ್ನ ರಾಶಿ ಪರಿವರ್ತಿಸುವುದರಿಂದ ಪ್ರತಿಯೊಂದು ರಾಶಿಗಳ ಮೇಲೆ ಅದರ ಶುಭ-ಅಶುಭ ಫಲಿತಾಂಶ ಗೋಚರಿಸುತ್ತವೆ. ಜೋತಿಷ್ಯ ಶಾತ್ರದಲ್ಲಿ ಗುರುವನ್ನು ಸೌಭಾಗ್ಯ, ಯಶಸ್ಸು, ವೈಭವ, ಧನ ಹಾಗೂ ಬುದ್ಧಿಯ ಕಾರಕ ಗ್ರಹ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ಯಾರ ಜಾತಕದಲ್ಲಿ ಗುರುವಿನ ಸ್ಥಾನ ಪ್ರಬಲವಾಗಿರುತ್ತದೆಯೋ ಅವರಿಗೆ ಸೌಭಾಗ್ಯ, ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಪ್ರಸ್ತುತ ಏಪ್ರಿಲ್ 22, 2023 ರಂದು ಬೆಳಗಿನ ಜಾವ 3 ಗಂಟೆ 33 ನಿಮಿಷಕ್ಕೆ ದೇವಗುರು ಬೃಹಸ್ಪತಿ ಅಶ್ವಿನಿ ನಕ್ಷತ್ರವನ್ನು ಪ್ರವೇಶಿಸಲಿದೆ. ಅಶ್ವಿನಿ ನಕ್ಷತ್ರದ ಪ್ರಥಮ ಭಾವದಲ್ಲಿ ಗುರುವಿನ ಈ ಗೋಚರ ನೆರವೇರಲಿದೆ. ಜೂನ್ 21, 2023ರ ಮಧ್ಯಾಹ್ನ 1 ಗಂಟೆ 19 ನಿಮಿಷಗಳವರೆಗೆ ಗುರು ಅಶ್ವಿನಿ ನಕ್ಷತ್ರದಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಗುರುವಿನ ಈ ಅಶ್ವಿನಿ ಗೋಚಾರದ ಕಾರಣ ಹಲವು ಜನರ ಜೀವನದಲ್ಲಿ ಸುಖವೋ-ಸುಖ ಹರಿದುಬರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ.

 

ಇದನ್ನೂ ಓದಿ-Solar Eclipse 2023: 84 ವರ್ಷಗಳ ಬಳಿಕ ನಾಳೆ 'ಹಂಸ ರಾಜ ಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /4

ಮೇಷ ರಾಶಿ: ಗುರುವಿನ ಈ ಅಶ್ವಿನಿ ನಕ್ಷತ್ರ ಗೋಚರ ಮೇಷ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಗುರುವಿನ ಈ ಗೋಚರ ಸಂಭವಿಸಲಿದೆ. ಹೀಗಿರುವಾಗ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ, ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಾಮಾನ್ಯವಾಗಿ ಅಶ್ವಿನಿ ನಕ್ಷತ್ರಕ್ಕೆ ಕೇತು ಅಧಿಪತಿಯಾಗಿದ್ದಾನೆ. ಹೀಗಾಗಿ ಕೇತುವಿನ ಮನೆಯಲ್ಲಿ ಗುರು ನಿಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ಅಡೆತಡೆಗಳಿಗೆ ಕಾರಣನಾಗಲಿದ್ದಾನೆ. ತಾಳ್ಮೆವಹಿಸಿ ನಿಮಗೆ ಒಳ್ಳೆಯ ಸಮಯ ಕಾದಿದೆ.   

2 /4

ಮಿಥುನ ರಾಶಿ: ಬೃಹಸ್ಪತಿಯ ಅಶ್ವಿನಿ ನಕ್ಷತ್ರ ಗೋಚರ ನಿಮ್ಮ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಗುರು ವಿರಾಜಮಾನನಾಗಿದ್ದಾನೆ. ಹೀಗಿರುವಾಗ ನಿಮಗೆ ನೌಕರಿ ಹಾಗೂ ಬಿಸ್ನೆಸ್ ನಲ್ಲಿ ಯಶಸ್ಸು ಸಿಗಲಿದೆ. ತೃತ್ತಿಜೀವನದಲ್ಲಿ ಬಡ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಮಹತ್ವಪೂರ್ಣ ಕೆಲಸಗಳಿಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವ ಸಮಯವಿದು. ಸದುಪಯೋಗಪಡಿಸಿಕೊಳ್ಳಿ.  

3 /4

ಧನು ರಾಶಿ: ಗುರುವಿನ ಅಶ್ವಿನಿ ಗೋಚರ ನಿಮ್ಮ ಪಾಲಿಗೆ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ನೌಕರವರ್ಗದ ಜನರಿಗೆ ನೌಕರಿಯಲ್ಲಿ ಪದೋನ್ನತಿ, ಇಂಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ನಿರುದ್ಯೋಗಿಗಳ ಉದ್ಯೋಗ ಹುಡುಕಾಟಕ್ಕೆ ತೆರೆ ಬೀಳುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಪಾರ ಲಾಭ ಸಿಗುವ ಸಾಧ್ಯತೆ ಇದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.  

4 /4

ಮಕರ ರಾಶಿ: ಬೃಹಸ್ಪತಿಯ ಅಶ್ವಿನಿ ಗೋಚರ ನಿಮ್ಮ ಜಾತಕದವರ ಪಾಲಿಗೆ ಶುಭ ಫಲದಾಯಿ ಸಾಬೀತಾಗಲಿದೆ. ನಿಮ್ಮ ಜಾತಕದ ದ್ವಾದಶ ಭಾವದ ಮೇಲೆ ಗುರುವಿನ ದೃಷ್ಟಿ ನೆಟ್ಟಿದೆ. ಹೀಗಿರುವಾಗ ಅಶ್ವಿನಿ ನಕ್ಷತ್ರದಲ್ಲಿ ಗುರುವಿನ ಪ್ರವೇಶ ನಿಮಗೆ ಸಾಕಷ್ಟು ಲಾಭ ತಂದುಕೊಡಲಿದೆ. ನೌಕರಿಯಲ್ಲಿ ಪ್ರಮೋಷನ್, ಇಂಕ್ರಿಮೆಂಟ್ ಸಿಗುವ ಸಾಧ್ಯತೆಗಳಿವೆ. ಇದಲ್ಲದೆ ನಿಮ್ಮ ಕೆಲಸಕ್ಕೆ ಪ್ರಶಂಸೆ ಕೂಡ ವ್ಯಕ್ತವಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಮತ್ತೆ ಗತಿಯನ್ನು ಪಡೆದುಕೊಳ್ಳಲಿವೆ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿವೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)