Sankranti 2023 : ಮಕರ ಸಂಕ್ರಾಂತಿ ದಿನ ಈ ಕೆಲಸಗಳಿಂದ ದೂರ ಉಳಿಯಬೇಕು.!

ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು.

Sankranti 2023 : ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಪ್ರತಿ ವರ್ಷ ಜನವರಿ 14 ರಂದು ಬರುತ್ತದೆ. ಈ ಬಾರಿ ಸೂರ್ಯ ದೇವರು ರಾತ್ರಿ 8.14 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಹೀಗಾಗಿ  ಜನವರಿ 15 ರಂದು ಉದಯ ತಿಥಿಯ ಕಾರಣ ಮಕರ ಸಂಕ್ರಾಂತಿಯನ್ನು ಆಚರಿಸಲಾಗುವುದು. ಇನ್ನು ಮಕರ ಸಂಕ್ರಾಂತಿ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಕರ ಸಂಕ್ರಾಂತಿಯ ದಿನದಂದು ಮದ್ಯ ಸೇವಿಸಬಾರದು. ಈ ದಿನ ಮದ್ಯ ಸೇವಿಸಿದರೆ ಮನೆಯಲ್ಲಿ ಋಣಾತ್ಮಕ ಶಕ್ತಿಯು ಪರಿಚಲನೆಗೊಳ್ಳಲು ಪ್ರಾರಂಭಿಸುತ್ತದೆ. ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

2 /5

ಮಕರ ಸಂಕ್ರಾಂತಿಯ ದಿನದಂದು ತಾಮಸಿಕ ಆಹಾರ ಸೇವನೆಯಿಂದ ದೂರವಿರಬೇಕು. ಮಾಘ ಮಾಸದಲ್ಲಿ ತಾಮಸಿಕ, ಮಾಂಸಾಹಾರ ಸೇವಿಸುವುದನ್ನು ತಪ್ಪಿಸಬೇಕು. ಒಂದೊಮ್ಮೆ ಇವುಗಳನ್ನು ಸೇವಿಸಿದರೆ ದೇವರ ಕೃಪೆ ಸಿಗುವುದಿಲ್ಲ.   

3 /5

ಮಕರ ಸಂಕ್ರಾಂತಿಯ ದಿನದಂದು ಶುದ್ಧ ಆಹಾರವನ್ನು ಸೇವಿಸುವುದು ಉತ್ತಮ. ಬೆಳಿಗ್ಗೆಯಿಂದ ಸಂಜೆಯವರೆಗೆ ಸಾತ್ವಿಕ ಆಹಾರವನ್ನೇ ಸೇವಿಸಿ. ಅಷ್ಟೇ ಅಲ್ಲ ಬೆಳ್ಳುಳ್ಳಿ, ಈರುಳ್ಳಿಯನ್ನು ಕೂಡ ಆಹಾರದಲ್ಲಿ ಬಳಸಬಾರದು.

4 /5

ಈ ಶುಭದಿನದಂದು ನಿರ್ಗತಿಕರು ಅಥವಾ ಭಿಕ್ಷುಕರು ಮನೆಗೆ ಬಂದರೆ ಅವರನ್ನು ಬರಿಗೈಯಲ್ಲಿ ಹಿಂತಿರುಗಿಸಬೇಡಿ. ಅವರು ಬರಿಗೈಯ್ಯಲ್ಲಿ ಹಿಂತಿರುಗಿದರೆ ದೇವರು ನಿಮ್ಮ ಮೇಲೆ ಕೋಪಗೊಳ್ಳಬಹುದು.  ಹಾಗಾಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ  ದಾನ ಮಾಡಿ. 

5 /5

ಮಕರ ಸಂಕ್ರಾಂತಿಯ ದಿನದಂದು ಬಡವರು ಮತ್ತು ಅಸಹಾಯಕರಿಗೆ  ತೊಂದರೆ ಕೊಡಬಾರದು. ಬಡವರಿಗೆ ತೊಂದರೆ ಕೊಡುವ ಮೂಲಕ ನೀವೇ ತೊಂದರೆಗೆ ಸಿಲುಕಿಕೊಳ್ಳಬಹುದು.  ( ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)