ವಿದೇಶದಲ್ಲಿ ಮದ್ಯ ಮಾರಾಟ ಮಾಡಿ ಕೋಟಿಗಟ್ಟಲೆ ಸಂಪಾದಿಸಿದ ಭಾರತೀಯ ಮಹಿಳೆ!

Zoya Vora Shah: ಜೋಯಾ ವೋರಾ ಶಾ ಕೆಲವು ವರ್ಷಗಳ ಹಿಂದೆ ಭಾರತದಿಂದ ಯುಎಸ್‌ ಗೆ ವಲಸೆ ತೆರಳಿದ್ದರು. ಮೊದಲು ರೆಸ್ಟೋರೆಂಟ್‌ನಲ್ಲಿ ವೈನ್ ವ್ಯಾಪಾರ ಪ್ರಾರಂಭಿಸಿದ ಅವರು, ನಂತರ ಅರಿಜೋನಾದ ಸ್ಕಾಟ್ಸ್‌ ಡೇಲ್ ಪಟ್ಟಣದಲ್ಲಿ 'ದಿ ವೈನ್ ಕಲೆಕ್ಟಿವ್ ಆಫ್ ಸ್ಕಾಟ್ಸ್‌ ಡೇಲ್' ಅನ್ನು ಪ್ರಾರಂಭಿಸಿದರು

Written by - Bhavishya Shetty | Last Updated : Jul 3, 2023, 01:15 PM IST
    • ಜೋಯಾ ವೋರಾ ಶಾ ಕೆಲವು ವರ್ಷಗಳ ಹಿಂದೆ ಭಾರತದಿಂದ ಯುಎಸ್‌ ಗೆ ವಲಸೆ ತೆರಳಿದ್ದರು
    • ವೈನ್ ಉದ್ಯಮದಲ್ಲಿ ವಿಶೇಷ ಹೆಸರು ಮಾಡುತ್ತಿರುವ ಭಾರತೀಯ ಮಹಿಳೆಯ ಯಶೋಗಾಥೆ
    • ಈ ವೈನ್ ಕಲೆಕ್ಟಿವ್ ಈಗ ನಗರವಾಸಿಗಳ ಕೆರಾಫ್ ಅಡ್ರೆಸ್ ಆಗಿ ಮಾರ್ಪಟ್ಟಿದೆ
ವಿದೇಶದಲ್ಲಿ ಮದ್ಯ ಮಾರಾಟ ಮಾಡಿ ಕೋಟಿಗಟ್ಟಲೆ ಸಂಪಾದಿಸಿದ ಭಾರತೀಯ ಮಹಿಳೆ!  title=
Zoya Vora Shah

Zoya Vora Shah: ಸಾಮಾನ್ಯವಾಗಿ ಮದ್ಯ ಮಾರಾಟ ಕ್ಷೇತ್ರವನ್ನು ಮಹಿಳೆಯರಿಗೆ ವಿರುದ್ಧವಾದ ಕ್ಷೇತ್ರ ಎಂದು ಹೇಳಲಾಗುತ್ತದೆ. ಆದರೆ, ಆ ಕ್ಷೇತ್ರವನ್ನೇ ತನ್ನ ವೃತ್ತಿಯನ್ನಾಗಿ ಆರಿಸಿಕೊಂಡ ಮಹಿಳೆಯೊಬ್ಬರು ಸದ್ಯ ಮಾದರಿಯಾಗಿ ನಿಂತಿದ್ದಾರೆ. ಇದು ಅಮೆರಿಕದ ವೈನ್ ಉದ್ಯಮದಲ್ಲಿ ವಿಶೇಷ ಹೆಸರು ಮಾಡುತ್ತಿರುವ ಭಾರತೀಯ ಮಹಿಳೆಯ ಯಶೋಗಾಥೆ.

ಇದನ್ನೂ ಓದಿ: ಕಡಿಮೆ ಬೆಲೆಯ ಪುಟ್ಟ Window AC!ಬಿಸಿಲಿನಲ್ಲಿ ತಂಪಾಗಿಸುತ್ತದೆ, ಚಳಿಯಲ್ಲಿ ಬೆಚ್ಚಗಿಡುತ್ತದೆ

ಜೋಯಾ ವೋರಾ ಶಾ ಕೆಲವು ವರ್ಷಗಳ ಹಿಂದೆ ಭಾರತದಿಂದ ಯುಎಸ್‌ ಗೆ ವಲಸೆ ತೆರಳಿದ್ದರು. ಮೊದಲು ರೆಸ್ಟೋರೆಂಟ್‌ನಲ್ಲಿ ವೈನ್ ವ್ಯಾಪಾರ ಪ್ರಾರಂಭಿಸಿದ ಅವರು, ನಂತರ ಅರಿಜೋನಾದ ಸ್ಕಾಟ್ಸ್‌ ಡೇಲ್ ಪಟ್ಟಣದಲ್ಲಿ 'ದಿ ವೈನ್ ಕಲೆಕ್ಟಿವ್ ಆಫ್ ಸ್ಕಾಟ್ಸ್‌ ಡೇಲ್' ಅನ್ನು ಪ್ರಾರಂಭಿಸಿದರು.

ಇದು ವಿವಿಧ ವೈನರಿಗಳನ್ನು ಹೊಂದಿದೆ. ಈ ವೈನ್ ಕಲೆಕ್ಟಿವ್ ಈಗ ನಗರವಾಸಿಗಳ ಕೆರಾಫ್ ಅಡ್ರೆಸ್ ಆಗಿ ಮಾರ್ಪಟ್ಟಿದೆ. ಎಲ್ಲಾ ರೀತಿಯ ವೈನ್ ರುಚಿ ಇಲ್ಲಿ ಸಿಗುತ್ತದೆ. ಜೋಯಾ 20 ವರ್ಷಗಳ ಹಿಂದೆ ಫ್ಲೋರಿಡಾದ ಜಾಕ್ಸನ್‌ ವಿಲ್ಲೆಯಲ್ಲಿರುವ ರೆಸ್ಟೋರೆಂಟ್‌ ನಲ್ಲಿ ಕೆಲಸ ಮಾಡುವಾಗ ವೈನ್ ತಯಾರಿಕೆಯ ಬಗ್ಗೆ ಕಲಿತುಕೊಂಡರು. ನಂತರ ವೈನ್ ಮತ್ತು ಮದ್ಯ ಮಾರಾಟದ ಪ್ರತಿನಿಧಿಯಾದರು. ಈ ಬೆಳವಣಿಗೆಯ ಮೂಲಕವೇ ಜೋಯಾ ವಾಷಿಂಗ್ಟನ್ DC ಯಲ್ಲಿ ಮೊಯೆಟ್ ಹೆನ್ನೆಸ್ಸಿ ಮತ್ತು ಡಿಯಾಜಿಯೊದಿಂದ ಪೋರ್ಟ್ಫೋಲಿಯೊಗಳನ್ನು ಪ್ರತಿನಿಧಿಸಲು ಅಪರೂಪದ ಅವಕಾಶವನ್ನು ಪಡೆದರು. ಆ ಸಮಯದಲ್ಲಿ ಅವರು ಶಾಂಪೇನ್‌ ನಲ್ಲಿ ತಮ್ಮ ಪರಿಣತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿದ್ದರು.

ವೈನ್ ಉದ್ಯಮವು ಸವಾಲುಗಳಿಂದ ತುಂಬಿದೆ. ಆದರೆ, ಅದರಲ್ಲಿ ಜೋತಾ ಸಾಧನೆ ಗಮನಾರ್ಹವಾಗಿದೆ. ಇದಕ್ಕೆ ಮುಖ್ಯ ಕಾರಣ, ತಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಆಕೆಗೆ ಇರುವ ನಿಖರತೆ ಮತ್ತು ಉತ್ಸಾಹ ಎನ್ನಬಹುದು. ಭಾರತವನ್ನು ತೊರೆದು ಈ ಉದ್ಯಮ ಆಯ್ಕೆ ಮಾಡಿಕೊಂಡಿದ್ದಕ್ಕೆ ಅನೇಕರು ತೀವ್ರವಾಗಿ ಟೀಕಿಸಿದ್ದರಂತೆ. ಆದರೆ ಇದೆಲ್ಲಾ ಟೀಕೆಗಳಿಗೆ ಸೆಡ್ಡು ಹೊಡೆದ ಜೋಯಾ, ಪರಿಶ್ರಮದಿಂದ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ. 

ಇದನ್ನೂ ಓದಿ: Top 10 Jobs: ಮುಂದಿನ ಐದು ವರ್ಷಗಳಲ್ಲಿ ಅತಿ ಹೆಚ್ಚು ಮತ್ತು ವೇಗವಾಗಿ ವೇತನವನ್ನು ಹೆಚ್ಚಿಸುವ ನೌಕರಿಗಳ ಪಟ್ಟಿ ಇಲ್ಲಿದೆ

ಟೀಕಾಕಾರರ ಮಾತನ್ನು ನಿರ್ಲಕ್ಷಿಸಿ ಮುನ್ನಡೆದ ಜೋಯಾ, ತನ್ನ ಯಶಸ್ಸಿಗೆ ಪತಿಯ ಬೆಂಬಲವೇ ಮುಖ್ಯ ಕಾರಣ ಎಂದು ಹೇಳಿದ್ದಾರೆ. “ಕೆಲವು ಸ್ನೇಹಿತರು ನನ್ನನ್ನು ಬೆಂಬಲಿಸಿದರು. ಅವರೆಲ್ಲರ ಪ್ರೋತ್ಸಾಹ, ಪರಿಶ್ರಮದಿಂದ ಇಂದು ವೈನ್ ಇಂಡಸ್ಟ್ರಿಯಲ್ಲಿ ವಿಶೇಷ ಹೆಸರು ಮಾಡುತ್ತಿದ್ದೇನೆ” ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3COfPCC 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News