Budget 2023: ಈ ಬಾರಿಯ ಬಜೆಟ್ ಮೇಲಿದೆ NRIಗಳ ಕಣ್ಣು: ಈ ಬೇಡಿಕೆಗಳು ಈಡೇರುತ್ತಾ?

NRI Budget Demand: ಪ್ರತಿ ವರ್ಷದಂತೆ ಯುಎಇಯಲ್ಲಿರುವ ಭಾರತೀಯ ವಲಸಿಗರು ಈ ಬಜೆಟ್‌ನಲ್ಲಿ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ. ತೆರಿಗೆಗಳನ್ನು ಉಳಿತಾಯ ಮತ್ತು ಹಣ ಸಂಗ್ರಹಣೆಗೆ ಸಹಾಯವಾಗುವಂತಹ ಕೆಲವು ಯೋಜನೆಗಳು ಅನುಷ್ಠಾನಕ್ಕೆ ಬರಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

Written by - Bhavishya Shetty | Last Updated : Jan 18, 2023, 08:08 PM IST
    • ಯೂನಿಯನ್ ಬಜೆಟ್ 2023 ಅನ್ನು ಫೆಬ್ರವರಿ 1 ರಂದು ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ
    • ಭಾರತೀಯ ವಲಸಿಗರು ಈ ಬಜೆಟ್‌ನಲ್ಲಿ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ
    • ಈ ವರ್ಷದ ಕೇಂದ್ರ ಬಜೆಟ್ ಮಂಡನೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ
Budget 2023: ಈ ಬಾರಿಯ ಬಜೆಟ್ ಮೇಲಿದೆ NRIಗಳ ಕಣ್ಣು: ಈ ಬೇಡಿಕೆಗಳು ಈಡೇರುತ್ತಾ? title=
Budget 2023

NRI Budget Demand: ಈ ವರ್ಷದ ಕೇಂದ್ರ ಬಜೆಟ್ ಮಂಡನೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ಬಾರಿ ಯುಎಇಯಲ್ಲಿರುವ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಭಾರತೀಯ ಯೂನಿಯನ್ ಬಜೆಟ್ 2023 ಅನ್ನು ಫೆಬ್ರವರಿ 1 ರಂದು ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಇದನ್ನೂ ಓದಿ: “ಅಮೆರಿಕಾದಲ್ಲಿ ‘RRR’ ವೀಕ್ಷಿಸಿದವರು ಭಾರತೀಯರ ಸ್ನೇಹಿತರು ಎಂದೆನಿಸಿತ್ತು”: ರಾಜಮೌಳಿ ಹೀಗಂದಿದ್ದೇಕೆ?

ಪ್ರತಿ ವರ್ಷದಂತೆ ಯುಎಇಯಲ್ಲಿರುವ ಭಾರತೀಯ ವಲಸಿಗರು ಈ ಬಜೆಟ್‌ನಲ್ಲಿ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ. ತೆರಿಗೆಗಳನ್ನು ಉಳಿತಾಯ ಮತ್ತು ಹಣ ಸಂಗ್ರಹಣೆಗೆ ಸಹಾಯವಾಗುವಂತಹ ಕೆಲವು ಯೋಜನೆಗಳು ಅನುಷ್ಠಾನಕ್ಕೆ ಬರಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

  • NRI ಗಳ ಮೇಲೆ ವಿಧಿಸಲಾದ Tax Deducted at Source (TDS) ಮೇಲೆ ವಿನಾಯಿತಿ
  • ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ ಡಿಜಿಟಲ್ ಆಸ್ತಿಗಳನ್ನು ಗುರುತಿಸುವುದು ಕಾನೂನು ಸ್ಥಾನಮಾನವನ್ನು ಪಡೆದುಕೊಂಡಿದೆ ಎಂದರ್ಥವೇ? ಎಂಬುದನ್ನು ಸ್ಪಷ್ಟೀಕರಣ ನೀಡುವುದು
  • ಎನ್‌ಆರ್‌ಐಗಳಿಗೆ ಎನ್‌ಕಮ್ ಟ್ಯಾಕ್ಸ್ 'ಸ್ಲ್ಯಾಬ್ ದರಗಳನ್ನು' ಮರುಪರಿಶೀಲಿಸುವುದು
  • ಹಿಂದಿನ ಬಜೆಟ್‌ಗಳಲ್ಲಿ ಪರಿಚಯಿಸಲಾದ ಹೊಸ ಸ್ಲ್ಯಾಬ್ ವ್ಯವಸ್ಥೆಯು ತೆರಿಗೆದಾರರಲ್ಲಿ ಹೆಚ್ಚು ಜನಪ್ರಿಯವಾಗಿಲ್ಲ ಮತ್ತು ಹೊಸ ಸ್ಲ್ಯಾಬ್ ವ್ಯವಸ್ಥೆಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಮೂಲ ವಿನಾಯಿತಿ ಮಿತಿಯನ್ನು ವರ್ಷಕ್ಕೆ ಕೇವಲ Rs 250,000 (Dh11,242) ರಿಂದ ಹೆಚ್ಚಿಸಬೇಕಾಗಿದೆ.
  • NRI ಹೂಡಿಕೆಗಳಿಗೆ ಲಿಂಕ್ ಮಾಡಲಾದ ಕಡಿತಗಳ ಮಿತಿಯಲ್ಲಿ ಹೆಚ್ಚಳ ಮಾಡುವುದು
  • ವಿನಿಮಯ ಕಾನೂನಿನ ಅಡಿಯಲ್ಲಿ, ಎನ್‌ಆರ್‌ಐ ಆಗಿ, ನೀವು ಅಗತ್ಯ ದಾಖಲೆ ಪುರಾವೆಗಳನ್ನು ಒದಗಿಸಿದ ನಂತರ ನಿಮ್ಮ ಅನಿವಾಸಿ ಖಾತೆಯಿಂದ $1 ಮಿಲಿಯನ್ (Dh3.67 ಮಿಲಿಯನ್) ವರೆಗೆ ರವಾನೆ ಮಾಡಲು ನಿಮಗೆ ಅನುಮತಿಸಲಾಗಿದೆ. $1 ಮಿಲಿಯನ್‌ಗಿಂತ ಹೆಚ್ಚಿನ ಹಣ ರವಾನೆಗೆ ಭಾರತೀಯ ಕೇಂದ್ರ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿಶೇಷ ಅನುಮತಿಯ ಅಗತ್ಯ ನೀಡುವುದು

ಇದನ್ನೂ ಓದಿ: NRI News: ಕ್ಯಾನ್ಸರ್ ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಿ ಎಂದಿದಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿ!

ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಎನ್ ಆರ್ ಐಗಳು ಇಟ್ಟಿದ್ದು, ಕೇಂದ್ರ ಬಜೆಟ್ ನಲ್ಲಿ ಈಡೇರಿಕೆ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News