Money Remedies: ಮನೆಯ ಈ ಜಾಗದಲ್ಲಿ ಸಣ್ಣ ಬೆಳ್ಳಿಯ ತುಂಡು ಇಟ್ಟರೆ ನೀವು ಶ್ರೀಂಮತರಾಗುತ್ತೀರಿ..!

ಲಾಲ್ ಕಿತಾಬ್‌ನಲ್ಲಿ ಹಣಕಾಸಿನ ಸಮಸ್ಯೆಗೆ ಸಂಬಂಧಿಸಿದಂತೆ ಅನೇಕ ಖಚಿತ ಪರಿಹಾರಗಳನ್ನು ಹೇಳಲಾಗಿದೆ. ಇವುಗಳನ್ನು ಪಾಲಿಸುವುದರಿಂದ ತಾಯಿ ಲಕ್ಷ್ಮಿದೇವಿಯ ಅನುಗ್ರಹ ಪಡೆಯಬಹುದು. ಈ ಪರಿಹಾರಗಳು ನಿಮ್ಮ ಅದೃಷ್ಟವನ್ನು ಚಿಟಿಕೆಯಲ್ಲಿ ಬದಲಾಯಿಸುತ್ತವೆ ಎಂದು ಹೇಳಲಾಗಿದೆ.

Written by - Puttaraj K Alur | Last Updated : Nov 1, 2022, 04:40 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಕೆಟ್ಟ ಚಲನೆಯಿಂದ ವ್ಯಕ್ತಿಗೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ
  • ವ್ಯಕ್ತಿಯ ಹಣಕಾಸಿನ ಸಮಸ್ಯೆಗಳಿಗೆ ಲಾಲ್ ಕಿತಾಬ್‍ನಲ್ಲಿ ಪರಿಣಾಮಕಾರಿ ಸಲಹೆಗಳನ್ನು ನೀಡಲಾಗಿದೆ
  • ಮನೆಯ ತಿಜೋರಿಯಲ್ಲಿ ಚೌಕಾಕಾರದ ಬೆಳ್ಳಿ ತುಂಡು ಇರಿಸಿದ್ರೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ
Money Remedies: ಮನೆಯ ಈ ಜಾಗದಲ್ಲಿ ಸಣ್ಣ ಬೆಳ್ಳಿಯ ತುಂಡು ಇಟ್ಟರೆ ನೀವು ಶ್ರೀಂಮತರಾಗುತ್ತೀರಿ..! title=
Lal Kitab Money Remedies

ನವದೆಹಲಿ: ಅನೇಕ ಬಾರಿ ವ್ಯಕ್ತಿಯು ತನ್ನ ಶ್ರಮದ ಪೂರ್ಣ ಫಲವನ್ನು ಪಡೆಯುವುದಿಲ್ಲ.ಇದರಿಂದಾಗಿ ಆ ವ್ಯಕೆ ನಿರಾಶೆಯನ್ನು ಎದುರಿಸಬೇಕಾಗುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸಲು ಮತ್ತು ಹಣಕಾಸಿನ ಅಡಚಣೆ ನಿವಾರಿಸಲು ಅನೇಕ ಜ್ಯೋತಿಷ್ಯ ಪರಿಹಾರ ಮತ್ತು ಪೂಜೆಗಳನ್ನು ಮಾಡುತ್ತಾನೆ. ಇದರ ನಂತರವೂ ವ್ಯಕ್ತಿಯು ಕೆಲಸದಲ್ಲಿ ಯಶಸ್ಸು ಪಡೆಯುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯಿಂದ ವ್ಯಕ್ತಿಯು ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಕೆಟ್ಟ ಚಲನೆಯಿಂದ ವ್ಯಕ್ತಿಗೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲಾಲ್ ಕಿತಾಬ್‌ನ ಕೆಲವು ಪರಿಹಾರಗಳನ್ನು ಹೇಳಲಾಗಿದೆ. ಇದನ್ನು ಮಾಡುವುದರಿಂದ ವ್ಯಕ್ತಿಯ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಲಾಲ್ ಕಿತಾಬ್‌ನಲ್ಲಿ ಬೆಳ್ಳಿಯ ಸಣ್ಣ ತುಂಡಿನ ಬಗ್ಗೆ ಕೆಲವು ಪರಿಹಾರಗಳನ್ನು ಹೇಳಲಾಗಿದೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ.

ಇದನ್ನೂ ಓದಿ:  Zodiac Sign: ಈ ರಾಶಿಯವರು ತುಂಬಾ ಹಠಮಾರಿ! ಕಷ್ಟಪಟ್ಟು ದುಡಿಯುವ ಸ್ವಭಾವ ಇವರದ್ದು

ಅದೃಷ್ಟ ಬದಲಾಯಿಸುವ ಬೆಳ್ಳಿಯ ತುಂಡು  

ಲಾಲ್ ಕಿತಾಬ್‌ನಲ್ಲಿ ನೀಡಲಾದ ಪರಿಹಾರಗಳಲ್ಲಿ ಒಂದು ಬೆಳ್ಳಿಯ ತುಂಡಿಣ ಪರಿಹಾರವೂ ಇದೆ. ಇದನ್ನು ಮಾಡುವುದರಿಂದ ವ್ಯಕ್ತಿಯು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಇದಕ್ಕಾಗಿ ಬೆಳ್ಳಿಯ ಒಂದು ಚೌಕಾಕಾರದ ತುಂಡು ತೆಗೆದುಕೊಳ್ಳಿ. ಅದನ್ನು ಮನೆಯ ತಿಜೋರಿಯಲ್ಲಿ ಅಥವಾ ಹಣ ಇಡುವ ಸ್ಥಳದಲ್ಲಿರಿಸಿ. ಅಲ್ಮೇರಾದಲ್ಲಿ ಇರಿಸುವ ಈ ಬೆಳ್ಳಿಯು ಹಣವನ್ನು ಆಕರ್ಷಿಸುತ್ತದೆ ಮತ್ತು ಅದು ಎಂದಿಗೂ ಖಾಲಿಯಾಗುವುದಿಲ್ಲ. ಇದರಿಂದ ನಿಮ್ಮ ಮನೆಯು ಸಂಪತ್ತಿನಿಂದ ತುಂಬಿರುತ್ತದೆ ಮತ್ತು ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಅಲ್ಲದೆ ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ ಎಂದು ಹೇಳಲಾಗಿದೆ.

ಲಾಲ್ ಕಿತಾಬ್ ಪ್ರಕಾರ, ಬೆಳ್ಳಿಯ ತುಂಡಿನಿಂದ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅದ್ಭುತ ಯಶಸ್ಸು ಸಿಗುತ್ತದೆ. ಬೆಳ್ಳಿಯ ತುಂಡನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಕರ್ಮಭಾವದ ದೋಷಗಳು ನಿವಾರಣೆಯಾಗುತ್ತದೆ. ಇದಲ್ಲದೆ ವ್ಯಕ್ತಿಯು ಕರ್ಮಗಳ ಪ್ರಕಾರ ಫಲವನ್ನು ಪಡೆಯುತ್ತಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Dream Meaning: ಕನಸಿನಲ್ಲಿ ಈ ವಸ್ತು ಕಂಡ ಮರುದಿನವೇ ಹಣದ ಸುರಿಮಳೆಯಾಗುವುದು ನಿಶ್ಚಿತ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News