Health Tips: ಕಾಲಕ್ಕೆ ತಕ್ಕಂತೆ ನಿಮ್ಮ ಜೀವನಶೈಲಿಯೂ ಬದಲಾಗಲಿ

ಬೆಳಗ್ಗಿನ ಉಪಹಾರದ ಸಮಯಕ್ಕೆ ಯಾವ ತಿಂಡಿಯಾದರೂ ಸರಿ ಅದರ ಜೊತೆಗೆ ಸೌತೆಕಾಯಿ, ಟೋಮ್ಯಾಟೋ, ಈರುಳ್ಳಿ, ಮೊಟ್ಟೆ ಹೀಗೆ ಹಸಿ ತರಕಾರಿಗಳಿರಲಿ.

Written by - PRATIBHA ANAND | Edited by - Puttaraj K Alur | Last Updated : Mar 25, 2022, 09:32 PM IST
  • ಆದಷ್ಟು ಬೆಳಗ್ಗೆ ಬೇಗ ಎದ್ದೇಳುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ
  • ಹಣ್ಣು, ಹಸಿ ತರಕಾರಿ, ಸಲಾಡ್, ಹಣ್ಣುಗಳ ಮಿಲ್ಕ್ ಶೇಕ್ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು
  • ಊಟಕ್ಕೆ ಆದಷ್ಟು ಮುದ್ದೆ ಅಥವಾ ಚಪಾತಿ ಇರುವಂತೆ ನೋಡಿಕೊಳ್ಳಬೇಕು
Health Tips: ಕಾಲಕ್ಕೆ ತಕ್ಕಂತೆ ನಿಮ್ಮ ಜೀವನಶೈಲಿಯೂ ಬದಲಾಗಲಿ title=
ಉತ್ತರ ಆಹಾರ ಕ್ರಮ ರೂಢಿಸಿಕೊಳ್ಳಿರಿ

ನವದೆಹಲಿ: ಇತ್ತೀಚಿಗೆ ಕಾಡುವ ಪ್ರತಿಯೊಂದು ಸಮಸ್ಯೆಗೂ ನಮ್ಮ ಬದಲಾದ ಜೀವನ ಶೈಲಿ(​Healthy Lifestyle)ಯೇ ಪ್ರಮುಖ ಕಾರಣ. ಹೌದು, ಹಿಂದೆಲ್ಲ ನಮ್ಮ ಪೂರ್ವಜರು ಮುಂಜಾನೆ 4 ಅಥವಾ 5 ಗಂಟೆಗೆ ತಮ್ಮ ದೈನಂದಿನ ಚಟುವಟಿಕೆಯ ಕಡೆ ಗಮನ ಕೊಡುತ್ತಿದ್ದರು. ಜೊತೆಗೆ ಪ್ರತಿನಿತ್ಯ ಸೇವಿಸುವ ಆಹಾರದಲ್ಲೂ ಒಂದು ಸರಿಯಾದ ಕ್ರಮವನ್ನು ಅನುಸರಿಸುತ್ತಿದ್ದರು. ಇಂದಿನ ಪಿಳೀಗೆಯ ಮಹಾಶಯರಾದ ನಮಗೆ ಬೆಳಗ್ಗೆ ಎಳುವುದಕ್ಕೂ ಸರಿಯಾದ ಕ್ರಮವಿಲ್ಲ. ಕೆಲಸದ ಒತ್ತಡಕ್ಕೆ ಮಣಿದು ಶಿಫ್ಟ್‍ ಗಳಲ್ಲಿ ಕೆಲಸ ಮಾಡುವ ನಾವು ಸರಿಯಾದ ರೀತಿ ಜೀವನ ರೂಢಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಇರುವ ಸಮಯದಲ್ಲಿಯೇ ನಮ್ಮ ಆಹಾರ ಕ್ರಮ(Food Healthy Lifestyle) ಹೇಗಿರಬೇಕೆಂಬುದರ ಬಗ್ಗೆ ಗಮನಹರಿಸಬೇಕು. ಸ್ವಲ್ಪ ಮಟ್ಟಿಗಾದರೂ ನಮ್ಮ ಆರೋಗ್ಯವನ್ನು ಹೇಗೆ ಸುಧಾರಿಸಿಕೊಳ್ಳಬಹುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ಬೆಳಗ್ಗೆಯ ಆಹಾರ ಕ್ರಮ ಹೀಗಿರಲಿ

ಆದಷ್ಟು ಬೆಳಗ್ಗೆ ಬೇಗ ಎದ್ದೇಳುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಇನ್ನೂ ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಬಿಸಿನೀರು ಅಥವಾ ಜೀರಿಗೆ ನೀರು, ಸಾಂಬಾರ ಪದಾರ್ಥಗಳ ಕಷಾಯ ಸೇವನೆ ಒಳ್ಳೆಯದು. ಒಂದು ವೇಳೆ ನೀವು ಜೀಮ್, ಯೋಗ, ವಾಕಿಂಗ್, ಎಕ್ಸೆಸೈಜ್ ಮಾಡುವವರಾಗಿದ್ದರೆ ಮುಂಚಿತವಾಗಿಯೇ ಪ್ರೊಟೀನ್ ಭರಿತ ಜ್ಯೂಸ್ ಸೇವನೆ ಇರಲಿ. ಉದಾಹರಣೆಗೆ ರಾಗಿ ಗಂಜಿ, ಪಾಲಾಕ್ ಸ್ಮೂದಿ, ಕ್ಯಾರೆಟ್ ಅಥವಾ ಬೀಟ್ರೂಟ್ ಜ್ಯೂಸ್, ಮೊಳಕೆ ಕಾಳುಗಳ ಸಲಾಡ್ ಸೇವಿಸಿ ನಿಮ್ಮ ಕೆಲಸ ಶುರು ಮಾಡಿ. ನಂತರ ಬೆಳಗ್ಗಿನ ಉಪಹಾರ(Balanced Diet Food)ದ ಸಮಯಕ್ಕೆ ಯಾವ ತಿಂಡಿಯಾದರೂ ಸರಿ ಅದರ ಜೊತೆಗೆ ಸೌತೆಕಾಯಿ, ಟೋಮ್ಯಾಟೋ, ಈರುಳ್ಳಿ, ಮೊಟ್ಟೆ ಹೀಗೆ ಹಸಿ ತರಕಾರಿಗಳಿರಲಿ.

ಇದನ್ನೂ ಓದಿ: Health Tips: ನೀವೂ ಬೆಳಗ್ಗೆ ಎದ್ದಾಕ್ಷಣ ಚಹಾ ಸೇವಿಸುತ್ತೀರಾ? ಈ ಲೇಖನ ಮೊದಲು ಓದಿ

ಉಪಹಾರದ ನಂತರ ಸ್ನಾಕ್ ಹೀಗಿರಲಿ

ಆದಷ್ಟು ಸೀಸನಲ್ ಫ್ರೂಟ್ ಗಳ ಬಳಕೆಯಿರಲಿ, ಏಕೆಂದರೆ ನಮ್ಮ ಪ್ರಕೃತಿ ತನ್ನದೇಯಾದ ವೈಶಿಷ್ಟ್ಯತೆ ಹೊಂದಿದ್ದು, ಆಯಾ ಹವಮಾನಕ್ಕೆ ಅನುಗುಣವಾಗಿ ತನ್ನ ಪ್ರಕರತೆಯನ್ನು ಉತ್ತೇಜಿಸುತ್ತದೆ. ಹೀಗಿರುವಾಗ ಆದಷ್ಟು ಮಾನ್ಸೂನ್ ಬೇಳೆಗಳ ಬಳಕೆ ಹೆಚ್ಚಾಗಿರಲಿ. ಇನ್ನೂ ಸ್ನಾಕ್ ಟೈಮ್ಗೆ ಒಂದು ಬೌಲ್ ಹಣ್ಣು, ಹಸಿ ತರಕಾರಿಗಳು, ಸಲಾಡ್, ಹಣ್ಣುಗಳ ಮಿಲ್ಕ್ ಶೇಕ್ ಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ(Nutritious Food0ಕ್ಕೆ ಒಳ್ಳೆಯ ರೀತಿ ಪರಿಣಾಮ ಬೀರುತ್ತದೆ.

ಮಧ್ಯಾಹ್ನದ ಊಟದ ಕ್ರಮ ಹೀಗಿರಲಿ

ಇನ್ನೂ ಊಟಕ್ಕೆ ಆದಷ್ಟು ಮುದ್ದೆ ಅಥವಾ ಚಪಾತಿ ಇರುವಂತೆ ನೋಡಿಕೊಳ್ಳಿ. ಏಕೆಂದರೆ ನೀವು ಸೇವಿಸುವ ಆಹಾರದಲ್ಲಿ ಎಷ್ಟು ಪ್ರಮಾಣದ ಕ್ಯಾಲೋರಿ ಇದೆ ಎನ್ನುವುದು ಸಹ ಮುಖ್ಯವಾಗುತ್ತದೆ. ಊಟದಲ್ಲಿ ಮುದ್ದೆ ಅಥವಾ ಚಪಾತಿ ಜೊತೆಗೆ ಒಂದು ಕಪ್ ಅನ್ನ ತಿನ್ನಬಹುದು ಹಾಗೂ ಯಾವುದಾದರೂ ತರಕಾರಿ ಪಲ್ಯ, ಮೊಟ್ಟೆ, ಸೊಪ್ಪಿನ ಪಲ್ಯ ಅಥವಾ ಕಾಳುಗಳ ಪಲ್ಯ(Balanced Diet)ವನ್ನು ಸೇವಿಸಿದರೆ ಉತ್ತಮ. ಜೊತೆಗೆ ಕೊನೆಗೆ ಒಂದು ಲೋಟ ಮಜ್ಜಿಗೆಯನ್ನು ಉಪ್ಪಿಲ್ಲದೆ ಕುಡಿಯಿರಿ. ಇದರಿಂದ ನಿಮ್ಮ ಆಹಾರದಲ್ಲಿರುವ ಉಪ್ಪಿನ ಅಂಶವನ್ನು ಸಮೋತೊಲನದಲ್ಲಿಡಬಹುದು.

ಇದನ್ನೂ ಓದಿ: ಹೀಗೆ ಮಾಡಿದರೆ ಸುಲಭವಾಗಿ ಸಿಗುತ್ತದೆ ಸೊಳ್ಳೆಗಳ ಕಾಟದಿಂದ ಮುಕ್ತಿ

ಸಂಜೆಯ ಸ್ನಾಕ್ ಹೀಗಿರಲಿ

ಇನ್ನೂ ಕೆಲವರಿಗೆ ಸಂಜೆಯ ಹೊತ್ತಲ್ಲಿ ಕಾಫಿ, ಟೀ, ಹಾಲು ಅಥವಾ ಗ್ರೀನ್ ಟೀ(Green Tea) ಕುಡಿಯುವ ಅಭ್ಯಾಸವಿರುತ್ತದೆ. ಈ ಟೈಮ್ನಲ್ಲಿ ಒಂದಷ್ಟು ಡ್ರೈ ಫ್ರೂಟ್ಸ್ ಹಾಗೂ ಮಾರಿಲೈಟ್ ಬಿಸ್ಕೆಟ್ ತಿನ್ನಬಹುದು.

ರಾತ್ರಿಯ ಊಟದ ಕ್ರಮ ಹೀಗಿರಲಿ

ರಾತ್ರಿ ಊಟವನ್ನು ಆದಷ್ಟು ಲೈಟ್ ಆಗಿರುವಂತೆ ನೋಡಿಕೊಳ್ಳಿ. ಏಕೆಂದರೆ ರಾತ್ರಿ ಊಟದ ಬಳಿಕ ನಾವೂ ಜಾಸ್ತಿ ದೈಹಿಕ ಚಟುವಟಿಕೆಯನ್ನು ಮಾಡುವುದಿಲ್ಲ. ಇದರಿಂದ ನಾವು ತಿಂದ ಆಹಾರದಲ್ಲಿರುವ ಕೊಬ್ಬಿನ ಅಂಶ ಕರಗದೆ ದೇಹದ ತೂಕ ಹೆಚ್ಚಾಗಬಹುದು. ಇನ್ನೂ ರಾತ್ರಿಯ ಊಟದಲ್ಲಿ ಚಪಾತಿ, ಮುದ್ದೆ, ಪಲ್ಯ, ಸೊಪ್ಪಿನ ಅಂಶವಿರುವಂತೆ ನೋಡಿಕೊಳ್ಳಿ.

ಇನ್ನೂ ಬೆಳಗ್ಗಿನ ಉಪಹಾರ(BreakFast)ದ ಸಮಯ 10 ಗಂಟೆಯ ಒಳಗಿರಲಿ. ಮಧ್ಯಾಹ್ನದ ಊಟ 1 ಗಂಟೆಯಿಂದ 2ರೊಳಗೆ ಮುಗಿಸಿ. ರಾತ್ರಿಯ ಊಟವನ್ನು 8 ಗಂಟೆಯ ಒಳಗೆ ಮುಗಿಸಿಕೊಳ್ಳಿ. ಇನ್ನೂ ಸ್ನಾಕ್ ಸಮಯವನ್ನು ನಿಮಗೆ ಹಸಿವಾದಾಗ ಸೇವಿಸಬಹುದು. ಹೀಗೆ ನಿಮ್ಮ ದಿನನಿತ್ಯದ ಆಹಾರ ಸೇವನೆಯನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮುಂದೆ ಎದುರಾಗಬಹುದಾದ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ದೂರವಿರಲು ಸಹಕಾರಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News