Madal bribe case : ಟ್ರ್ಯಾಪ್‌ನಲ್ಲಿ ಲಾಕ್ ಆದ ಪ್ರಶಾಂತ್‌ಗೆ ಮತ್ತೊಂದು ಶಾಕ್..! ಮಾಡಾಳ್‌ಗೆ 'ಲೋಕಾ' ತಲಾಶ್

ಶಾಸಕನ ಪುತ್ರನ ನಿವಾಸದಲ್ಲಿ ಕೋಟಿ ಕೋಟಿ ಹಣ ಸಿಕ್ಕಿತ್ತು. ಲೋಕಾಯುಕ್ತ ಬೇಟೆಗೆ ಅಪ್ಪ ಮಗ ಸದ್ಯ ಥಂಡ ಹೊಡೆದಿದ್ರು. ಇದೇ ಕೇಸ್‌ನ ತನಿಖೆಯನ್ನ ಲೋಕಾಯುಕ್ತ ಚುರುಕುಗೊಳಿಸಿದೆ. ಮಗ ಜೈಲು ಪಾಲಾದ್ರೆ ಅಪ್ಪನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಮಧ್ಯೆ ಮತ್ತಷ್ಟು ಬೆಚ್ಚಿ ಬೀಳೊ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ. ಐಟಿ ಹಾಗೂ ಇಡಿ ಶಾಸಕರ ಕುಟುಂಬಸ್ಥರಿಗೆ ಶಾಕ್ ನೀಡಲು ಮುಂದಾಗಿದೆ.

Written by - VISHWANATH HARIHARA | Edited by - Krishna N K | Last Updated : Mar 4, 2023, 07:42 PM IST
  • ಟ್ರ್ಯಾಪ್‌ನಲ್ಲಿ ಲಾಕ್ ಆದ ಪ್ರಶಾಂತ್‌ಗೆ ಮತ್ತೊಂದು ಶಾಕ್.
  • ಪ್ರಶಾಂತ್ ಅಮಾನತು ಮಾಡಲು ಲೋಕಾಯುಕ್ತ ಪತ್ರ.
  • ಶಾಸಕ ವಿರುಪಾಕ್ಷಪ್ಪ ಪತ್ತೆಗೆ 'ಲೋಕಾ' ತಲಾಶ್.
Madal bribe case : ಟ್ರ್ಯಾಪ್‌ನಲ್ಲಿ ಲಾಕ್ ಆದ ಪ್ರಶಾಂತ್‌ಗೆ ಮತ್ತೊಂದು ಶಾಕ್..! ಮಾಡಾಳ್‌ಗೆ 'ಲೋಕಾ' ತಲಾಶ್ title=

ಬೆಂಗಳೂರು : ಶಾಸಕನ ಪುತ್ರನ ನಿವಾಸದಲ್ಲಿ ಕೋಟಿ ಕೋಟಿ ಹಣ ಸಿಕ್ಕಿತ್ತು. ಲೋಕಾಯುಕ್ತ ಬೇಟೆಗೆ ಅಪ್ಪ ಮಗ ಸದ್ಯ ಥಂಡ ಹೊಡೆದಿದ್ರು. ಇದೇ ಕೇಸ್‌ನ ತನಿಖೆಯನ್ನ ಲೋಕಾಯುಕ್ತ ಚುರುಕುಗೊಳಿಸಿದೆ. ಮಗ ಜೈಲು ಪಾಲಾದ್ರೆ ಅಪ್ಪನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಮಧ್ಯೆ ಮತ್ತಷ್ಟು ಬೆಚ್ಚಿ ಬೀಳೊ ವಿಚಾರ ತನಿಖೆಯಿಂದ ಬಹಿರಂಗಗೊಂಡಿದೆ. ಐಟಿ ಹಾಗೂ ಇಡಿ ಶಾಸಕರ ಕುಟುಂಬಸ್ಥರಿಗೆ ಶಾಕ್ ನೀಡಲು ಮುಂದಾಗಿದೆ.

ಹಣ.. ಹಣ.. ಹಣ.. ಮೇಲಿಂದ ಊದರ್ಲಿಲ್ಲ. ದಿಢೀರ್ ಅಂತಾ ಪ್ರತ್ಯಕ್ಷವೂ ಆಗಿಲ್ಲ. ಮಾಟ ಮಂತ್ರಕ್ಕೆ ಉದ್ಭವವೂ ಆಗಿಲ್ಲ.. ಹಾಗಂತ ಇದು ಬೆವರು ಸುರಿಸಿ ದುಡಿದ ದುಡ್ಡಂತೂ ಅಲ್ಲ.. ಚನ್ನಗಿರಿ ಶಾಸಕ ವಿರೂಪಾಕ್ಷಪ್ಪ ಪುತ್ರನ ಖಜಾನೆಯಲ್ಲಿ ಗರಿ ಗರಿ ನೋಟು ಸಿಕ್ಕಿತ್ತು. ಟ್ರ್ಯಾಪ್ ಮಾಡಿ‌ ತಲಾಶ್ ನಡೆಸಿ ಲೋಕಾಯುಕ್ತ ಅಧಿಕಾರಿಗಳಿಗೆ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರನಿಗೆ ಸೇರಿದ್ದ 8.12 ಕೋಟಿ ಹಣ ಸಿಕ್ಕಿತ್ತು. ಇದೆಲ್ಲವೂ ಕೊಳ್ಳೆ ಹೊಡೆದ ಕಮಿಷನ್ ಹಣ ಅನ್ನೋದೆ ಅಸಲಿ ಸತ್ಯ. ಇದೇ ಕೇಸ್‌ನ ಹಿಂದೆ ಬಿದ್ದ ಲೋಕಾಯುಕ್ತ ಪೊಲೀಸರು ಬೆಚ್ಚಿ ಬೀಳೋ ಸಂಗತಿಯನ್ನೇ ಬಯಲಿಗೆ ಎಳೆದಿದ್ದಾರೆ.

ಇದನ್ನೂ ಓದಿ: Madal Virupaksha: ಪ್ರಶಾಂತ್ ಮೇಲೆ ಲೋಕಾಯುಕ್ತ ದಾಳಿ ನಡೆಸುತ್ತಿದ್ದಂತೆ  ಅಪ್ಪ  ಮಾಡಾಳ್ ವಿರೂಪಾಕ್ಷ ಪರಾರಿ!

ಹೌದು.. ಫೆಬ್ರವರಿ ಎರಡರ ಸಂಜೆ. ಕ್ರೆಸೆಂಟ್ ರಸ್ತೆಯ ಕಚೇರಿಯಲ್ಲಿ ಕಮಿಷನ್ ಹಣ ಪಡೆಯುವಾಗ ಚನ್ನಗಿರಿ ಶಾಸಕ ಪುತ್ರ ಪ್ರಶಾಂತ್ ಕಮಿಷನ್ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ. ಮನೆಯಲ್ಲಿ ಹುಡುಕಾಟ ನಡೆಸಿದ ಲೋಕಾಯುಕ್ತಕ್ಕೆ ಒಟ್ಟು 8.12 ಕೋಟಿ ಹಣ ಸಿಕ್ಕಿತ್ತು. ಈ ಹಿನ್ನೆಲೆ ಬಂಧಿಸಿ ಜೈಲಿಗಟ್ಟಿದ್ದು ಕೆಎಎಸ್ ಅಧಿಕಾರಿ ಪ್ರಶಾಂತ್ ನನ್ನ ಕೆಲಸದಿಂದ ಅಮಾನತ್ತು ಮಾಡುವಂತೆ ಸರ್ಕಾರದ ಹಣಕಾಸು ವಿಭಾಗದ ಎಸಿಎಸ್ ಗೆ ಲೋಕಾಯುಕ್ತ ಅಧಿಕಾರಿಗಳು ವಿವರಣೆಯೊಂದಿಗೆ ಪತ್ರ ಬರೆದಿದ್ದಾರೆ.

ಇನ್ನೂ ಶಾಸಕ ವಿರೂಪಾಕ್ಷಪ್ಪ ಕೆಎಸ್ ಡಿ ಎಲ್ ಅಧ್ಯಕ್ಷರಾಗಿದ್ರು.ಇದೇ ಇಲಾಖೆಯ ಟೆಂಡರ್ ವಿಚಾರವಾಗಿ ಕಮಿಷನ್ ಹಣ ಕೇಳಿದ್ರು ಅನ್ನೋ ಆರೋಪ ಇದೆ. ಪುತ್ರ ಲಾಕ್ ಆಗ್ತಿದ್ದಂತೆ ಪರಾರಿ ಆಗಿರೋ ಶಾಸಕ ವಿರೂಪಾಕ್ಷಪ್ಪ ಪತ್ತೆಗೆ ಓರ್ವ ಡಿವೈಎಸ್ ಪಿ, ಇಬ್ಬರು ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿದ್ದು, ಬೆಂಗಳೂರು, ದಾವಣಗೆರೆ ಸೇರಿದಂತೆ ಹಲವೆಡೆ ತಲಾಶ್ ನಡೆಸಲಾಗ್ತಿದೆ. ಅಲ್ಲದೇ ಶಾಸಕರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅಲ್ಲದೇ ಹಣದ ವಿವರಣೆ ಕೇಳಲು ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಈ ನಡುವೆ ಶಾಸಕರನ್ನು ಬಂಧಿಸದಂತೆ ರಾಜಕೀಯ ಒತ್ತಡ ಕೂಡ ಹೆಚ್ಚಾಗ್ತಿದೆಯಂತೆ.

ಇದನ್ನೂ ಓದಿ: Bribe case: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗಾಗಿ ತೀವ್ರ ಹುಡುಕಾಟ!

ಹೌದು ಪ್ರಶಾಂತ್ ಸಹೋದರ ಮಲ್ಲಿಕಾರ್ಜುನ ಹೆಸರಿನಲ್ಲಿ, ಬಿಎಸ್  ಸಣ್ಣಗೌಡರ್ ಅಂಡ್ ಬ್ರದರ್ಸ್ ಮತ್ತು ಸಿದ್ದಲಿಂಗೇಶ್ವರ ಎಂಟರ್ ಪ್ರೈಸಸ್ ಎಂಬ ಕಂಪನಿ ಇದ್ದು ಇದೇ ಕಂಪನಿ ಖಾತೆಗೆ ಬಂಧನವಾದ ಪ್ರಶಾಂತ್ 94 ಕೋಟಿ ಹಣ ವರ್ಗಾವಣೆ ಮಾಡಿದ್ದಾರೆ. ಹಾಗಾಗಿ ಮಲ್ಲಿಕಾರ್ಜುನಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಿರುವ ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್ ಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನ ಫ್ರೀಜ್ ಮಾಡಿದ್ದಾರೆ. ಬ್ಯಾಂಕ್ ಖಾತೆಯಲ್ಲೂ ಕೋಟಿ ಕೋಟಿ ಹಣವಿದೆ ಎನ್ನಲಾಗ್ತಿದೆ.

ಸದ್ಯ ಲೋಕಾಯುಕ್ತ ಇಕ್ಕಳದಲ್ಲಿ ಸಿಕ್ಕಿಹಾಕಿಕೊಂಡಿರೊ ವಿರೂಪಾಕ್ಷಪ್ಪ ತೆರೆಮರೆಯಲ್ಲಿ ನಿರೀಕ್ಷಣ ಜಾಮೀನು ಪಡೆದುಕೊಳ್ಳಲು ಸಿದ್ಧತೆ ಮಾಡಿಕೊಳ್ತಾರೆ. ವಕೀಲರ ಮೀಲಕ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗ್ತಿದೆ. ನಾಳೆ ಭಾನುವಾರ ಆಗಿರೋದ್ರಿಂದ ಸೋಮವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗ್ತಿದೆ

ಯೆಸ್.. ಸದ್ಯ ಶಾಸಕರ ಪುತ್ರನ ಮನೆಯಲ್ಲಿ ಕೋಟಿ ಕೋಟಿ ನಗದು ಹಣ ಸಿಕ್ಕಿದ್ದು,ಇಡಿ ಮತ್ತು ಐಟಿ ಇಲಾಖೆ ಲೋಕಾಯುಕ್ತದಿಂದ ಮಾಹಿತಿ ಪಡೆದಿದೆ.ಇಡಿ ಪಿಎಂಎಲ್ಎ ಆ್ಯಕ್ಟ್ ಅಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಹಣದ ಮೂಲದ ಬಗ್ಗೆ ಮಾಹಿತಿ ಕೇಳಿ ಬೆಂಡೆತ್ತಲಿದೆ.ಅಲ್ಲದೆ ಐಟಿ ಕೂಡ ವಿಚಾರಣೆಗೆ ಸಿದ್ಧತೆ ಮಾಡಿಕೊಳ್ತಿದೆ. ಸದ್ಯ ಶಾಸಕನ ಪುತ್ರನ ಬಳಿಯಿಂದ ಕೋಟಿ ಕೋಟಿ ಹಣ,ಚಿನ್ನಾಭರಣ,ವಶಕ್ಕೆ ಪಡೆಯಲಾಗಿದ್ದು,ಅದರ ಲೆಕ್ಕ ಕೇಳಲಿದ್ದಾರೆ‌‌.ಸೂಕ್ತ ದಾಖಲೆ ಕೊಡದೇ ಇದ್ದರೆ ಸಂಕಷ್ಟ ಕಟ್ಟಿಟ್ಟಬುತ್ತಿ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News