"ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಇಂದು ಲಂಚ ರಿಂಗಣಿಸುತ್ತಿದೆ"

ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಇಂದು ಲಂಚ ರಿಂಗಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Written by - Zee Kannada News Desk | Last Updated : May 8, 2023, 05:19 PM IST
  • ಜನರ ಕಷ್ಟಗಳನ್ನು ಅವರ ಬವಣೆಗಳನ್ನು ಅರಿತುಕೊಳ್ಳುವಲ್ಲಿ ಮತ್ತು ಬಗೆಹರಿಸುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ.
  • ಜನರ ಕಷ್ಟವನ್ನು ನೀಗಿಸುವುದು ಸರ್ಕಾರದ ಕರ್ತವ್ಯವಾಗಬೇಕಿತ್ತು.
  • ಆದರೆ, ನಿರುದ್ಯೋಗ ನಿವಾರಣೆ, ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ ಆಗಿರುತ್ತದೆ.
"ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಇಂದು ಲಂಚ ರಿಂಗಣಿಸುತ್ತಿದೆ" title=
file photo

ಬೆಂಗಳೂರು: ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಇಂದು ಲಂಚ ರಿಂಗಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರು ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರೋಡ್ ಶೋದಲ್ಲಿ ಮಾತನಾಡುತ್ತಿದ್ದರು

ಇಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಕೊನೆಯ ದಿನದ ಬಹಿರಂಗ ಪ್ರಚಾರವಾಗಿದೆ. ಮೇ 10 ಮತದಾನದ ದಿನವಾಗಿದೆ. ಇದುವರೆಗಿನ ಪ್ರಚಾರದಲ್ಲಿ ಜನರ ಕಷ್ಟ ಮತ್ತು ಜನಸಾಮಾನ್ಯರು ಅನುಭವಿಸುತ್ತಿರುವ ಬವಣೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಬೆಳಕು ಚೆಲ್ಲಿದೆ ಮತ್ತು ಎಂದಿಗೂ ಅವರ ಪರ ಧ್ವನಿ ಎತ್ತಿದೆ.ಎಲ್ಲ ನಮ್ಮ ತಾಯಂದಿರಿಗೆ ಗೊತ್ತಿದೆ ಬೆಲೆಯೇರಿಕೆ ಎಷ್ಟು ಕಷ್ಟ ತಂದಿವೆ ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ. ಗ್ಯಾಸ್‌ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜನರಿಂದು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಜನರ ಕಷ್ಟಗಳನ್ನು ಅವರ ಬವಣೆಗಳನ್ನು ಅರಿತುಕೊಳ್ಳುವಲ್ಲಿ ಮತ್ತು ಬಗೆಹರಿಸುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ. ಜನರ ಕಷ್ಟವನ್ನು ನೀಗಿಸುವುದು ಸರ್ಕಾರದ ಕರ್ತವ್ಯವಾಗಬೇಕಿತ್ತು. ಆದರೆ, ನಿರುದ್ಯೋಗ ನಿವಾರಣೆ, ಜನರಿಗೆ ಉದ್ಯೋಗಾವಕಾಶಗಳನ್ನು  ಕಲ್ಪಿಸುವುದು ಸರ್ಕಾರದ ಕರ್ತವ್ಯ ಆಗಿರುತ್ತದೆ. ಆದರೆ ಇದು ಯಾವುದನ್ನು ಈ ಬಿಜೆಪಿ ಸರ್ಕಾರ ಮಾಡಿಲ್ಲ ಎಂದು ಟೀಕಿಸಿದರು.

ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಮ್ಮ ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಖರೀದಿಸಿ ಅವರಿಗೆ ಆಸೆ, ಆಮಿಷಗಳನ್ನು ಒಡ್ಡಿ ವಾಮ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿರುವಂತಹದು, ಇಂದು ಈ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ಹೆಸರಿದೆ. ರೈತರಿಗೆ, ಜನಸಾಮಾನ್ಯರಿಗೆ ಈ ಸರ್ಕಾರದಿಂದ ಏನೂ ಪ್ರಯೋಜನವಾಗಿಲ್ಲ. ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಇಂದು ಲಂಚ ರಿಂಗಣಿಸುತ್ತಿದೆ ಎಂದು ಕಿಡಿ ಕಾರಿದರು.

ಜಿಎಸ್ಟಿಯಿಂದಾಗಿ ಇಂದು ಸಣ್ಣ ಉದ್ದಿಮೆದಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂದು ಯಾರ ಉದ್ಯಮವು ಅಭಿವೃದ್ಧಿಯಾಗಿಲ್ಲ. ಇಂದು ಜನಸಾಮಾನ್ಯನಿಂದ ಲಂಚವನ್ನು ನೇರವಾಗಿ ತೆಗೆಯದ ಪರಿಣಾಮ ಜಿಎಎಸ್ಟಿ ಮೂಲಕ ಸರ್ಕಾರ ಲಂಚ  ತೆಗೆಯುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಬೆಂಗಳೂರಿನಲ್ಲಿ 30 ಜನ ರಸ್ತೆಗುಂಡಿಗಳಿಗೆ ಬಿದ್ದು ಸಾವನ್ನಿಪ್ಪಿದ್ದಾರೆ. ಆದರೆ ಕಾಂಗ್ರೆಸ್‌ ಸರ್ಕಾರದಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 10000 ಕೋಟಿ ರೂ. ಅನುದಾನವನ್ನು ಕೊಟ್ಟಿದೆ ಎಂದು ಹೇಳಿದರು.

ಸರ್ಕಾರದಲ್ಲಿರುವ ಮಂತ್ರಿಗಳಿಗೆ ಲಂಚ, ಹಣ ಮಾಡೋದರ ಬಗ್ಗೇನೆ ಇದೆ ಆದರೆ ಜನರ ಬಗ್ಗೆ ಚಿಂತನೆಯೇ ಇಲ್ಲ.  ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಮಾಡೋದು, ಸಚಿವರು ಹಣ ಮಾಡೋದರಲ್ಲಿ ಮಾತ್ರ ಚಿಂತೆಯೇ ಹೊರತು ಜನರ ಬಗ್ಗೆ ಯಾವುದೇ ಚಿಂತೇನೆ ಇಲ್ಲ ಈ ಸರ್ಕಾರಕ್ಕೆ ಇಲ್ಲ. ಈ ಬಿಜೆಪಿ ಸರ್ಕಾರದ ಆಡಳಿತ ಯಾವುದೇ ಕಾರಣಕ್ಕೂ ಸರಿಗಿಲ್ಲ, ಅದು ನಿಮ್ಮ ಅನುಭವಕ್ಕೆ ಬಂದಿದೆ ಎಂದರು.

ಇದನ್ನೂ ಓದಿ: ಕಿಡಿಗೇಡಿಗಳಿಂದ ಗಲಾಟೆ, ತಾಲೂಕು ಅಧ್ಯಕ್ಷನ ಮೇಲೆ ಹಲ್ಲೆ ಯತ್ನ

ಇಂದು ಚುನಾವಣಾ ಪ್ರಚಾರದ ಕೊನೆಯ ದಿನ. ಬಹಳಷ್ಟು ಸಲ ನಾವು ಸರ್ಕಾರವನ್ನು,  ಪ್ರಧಾನಿ, ಗೃಹ ಸಚಿವವರನ್ನು ಚರ್ಚೆ ಮಾಡೋಣ ಬನ್ನಿ ಅಂತ ಕರೆದಿದ್ದೇವೆ ಆದರೆ ಅವರು ಇದುವರೆಗೂ ಬಂದಿಲ್ಲ. ಬೆಲೆಯೇರಿಕೆ, ನಿರುದ್ಯೋಗದ ಜನರ ಕಷ್ಟಗಳ ಬಗ್ಗೆ ಮಾತನಾಡದೇ, ನಿಮ್ಮ ಭಾವನೆಗಳನ್ನು ಕೆರಳಿಸುವ, ಧರ್ಮಗಳ ಬಗ್ಗೆ ಒಡಕು ಮೂಡಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಲೇ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸಹೋದರಿಯರಿಗೆ ಇಡೀ ಕರ್ನಾಟಕದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಬಸ್ಸು ಪ್ರಯಾಣ ಉಚಿತವಾಗಿ ಮಾಡಿದ್ದೇವೆ. ಮನೆಯೊಡತಿಗೆ ಪ್ರತಿತಿಂಗಳು 2000 ರೂ. ನಿರುದ್ಯೋಗಿ ಯುವಕರಿಗೆ ಭತ್ಯೆ ಸೇರಿದಂತೆ ಪ್ರಮುಖ ಗ್ಯಾರಂಟಿಗಳನ್ನುಈಡೇರಿಸುತ್ತೇವೆ. ಬೆಂಗಳೂರು ನಗರದಲ್ಲಿ  ನಮ್ಮ ಕನಸು 10 ಲಕ್ಷ ಉದ್ಯೋಗವನ್ನು ಸೃಷ್ಟಿ ಮಾಡುತ್ತೇವೆ. ಹುಬ್ಭಳ್ಳಿ,ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರವನ್ನು ಬೆಂಗಳೂರಿನ ತರ ಮಾಡಬೇಕೆಂಬುದು ನಮ್ಮ ಕಲ್ಪನೆ ಎಂದು ಭರವಸೆ ನೀಡಿದರು.

ರಾಜ್ಯದ ಯುವಕರಿಗೆ ಸ್ಟ್ರಾಟ್‌ ಆಪ್‌ ಯೋಜನೆಗೆ ರಾಜ್ಯದ ಪ್ರತಿ ವಿಧಾನಸಭೆಯಲ್ಲಿ 10 ಕೋಟಿಯನ್ನು ಅದಕ್ಕೆ ಬೇಕಾಗಿ ನಾವು ಮೀಸಲು ಇಡುತ್ತೇವೆ. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಬೀದರ್‌ ನಿಂದ ಚಾಮರಾಜನಗರದ ವರೆಗೆ ಕೈಗಾರಿಕ ಕಾರಿಡರ್‌ ನಾವು ಮಾಡುತ್ತೇವೆ. ಉದ್ಯೋಗ ಸೃಷ್ಟಿ ಆಗುವ ರೀತಿಯಲ್ಲಿ ನಾವು ಪ್ರಯುತ್ನ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Karnataka Election: ವಿಧಾನಸಭೆ ಚುನಾವಣೆ ಹಿನ್ನೆಲೆ ಮೆಟ್ರೋ ಸೇವೆ ವಿಸ್ತರಣೆ: ವಿವರ ಹೀಗಿದೆ ನೋಡಿ..

ನಿಮಗೆಲ್ಲ ಸತ್ಯ ಮತ್ತು ವಿಚಾರ ಗೊತ್ತಿದೆ. ನಿಮಗೆ ಆದ ರೀತಿಯಲ್ಲೂ ನಿರ್ಧಾರ ತೆಗೆಯುವ ಶಕ್ತಿ ನಿಮ್ಮಲ್ಲಿ ಇದೆ. ಮುಂದಿನ ಐದು ವರ್ಷಗಳ ಕಾಲ ಯಾವ ಸರ್ಕಾರ ಅಭಿವೃದ್ಧಿ ಮಾಡುವ ಸರ್ಕಾರ ಬೇಕೋ ಎಂಬುದರ ಕುರಿತು ನೀವು ಪ್ರಯತ್ನ ಮಾಡಬೇಕಾಗುತ್ತದೆ, ಈಗಾಗಲೇ ಜನರಿಗೆ ಸಂಕಷ್ಟದಿಂದ ತೊಂದರೆ ಆಗಿದೆ. ಈಗ ಚುನಾವಣೆಯ ಸಮಯ ಬಂದಿದೆ. ನಿಮ್ಮ ಕೈಯಲ್ಲಿ ಭವಿಷ್ಯವನ್ನು ನಿರ್ಧಾರ ಮಾಡುವ ಶಕ್ತಿ ನಿಮ್ಮಲ್ಲಿದೆ. ನಾವು ಓಳ್ಳೆಯ ನಿರ್ಧಾರ ಮಾಡುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News