ಇಂದು ಹನೂರಿಗೆ ಪ್ರಿಯಾಂಕಾ ಗಾಂಧಿ- ಮಹಿಳೆಯರೊಂದಿಗೆ ಸಂವಾದ, ಚುನಾವಣಾ ಪ್ರಚಾರ

Karnataka assembly Election: ಇಂದು ಚಾಮರಾಜನಗರದ ಹನೂರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಲಿದ್ದು, ಈ ಭಾಗದ ಗಿರಿಜನ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ‌‌. 

Written by - Yashaswini V | Last Updated : Apr 25, 2023, 06:56 AM IST
  • ರಾಜ್ಯ ಚುನಾವಣಾ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ
  • ಇಂದಿನಿಂದ ಕೈ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿರುವ ಪ್ರಿಯಾಂಕಾ ಗಾಂಧಿ
  • ಈ ವೇಳೆ ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ಸಂವಾದ
ಇಂದು ಹನೂರಿಗೆ ಪ್ರಿಯಾಂಕಾ ಗಾಂಧಿ- ಮಹಿಳೆಯರೊಂದಿಗೆ ಸಂವಾದ, ಚುನಾವಣಾ ಪ್ರಚಾರ title=

Karnataka assembly Election 2023: ಕಿತ್ತೂರು ಕರ್ನಾಟಕ ಭಾಗದಲ್ಲಿ ಸಹೋದರ ರಾಹುಲ್ ಗಾಂಧಿ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಈಗ ರಾಜ್ಯ ಚುನಾವಣಾ ಅಖಾಡಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ ಕೊಡುತ್ತಿದ್ದು ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರಿಗೆ ಮಧ್ಯಾಹ್ನ 2.30 ರ ಸುಮಾರಿಗೆ ಬರಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಗಿರಿಜನ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ‌‌. ಗಿರಿಜನ ಮಹಿಳೆಯರ ಅಭಿವೃದ್ಧಿಗೆ ಕಾಂಗ್ರೆಸ್ ನೀತಿ, ಕಾರ್ಯಕ್ರಮಗಳ ಬಗ್ಗೆ ಪ್ರಿಯಾಂಕಾ ತಿಳಿಸಲಿದ್ದಾರೆ.

ಇದನ್ನೂ ಓದಿ- ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ನೇರ ಮತದಾನಕ್ಕೆ ಅವಕಾಶ..!

ಇನ್ನು, ಸಂವಾದದ ಬಳಿಕ ಜಿಲ್ಲೆಯ ನಾಲ್ಕು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಿಯಾಂಕಾ ಗಾಂಧಿ ಚುನಾವಣಾ ಭಾಷಣ ಮಾಡಲಿದ್ದು ಈಗಾಗಲೇ ಹನೂರಿನಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ- Karnataka Election 2023: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮೇಲೆ ಜನರಿಗೆ ವಿಶ್ವಾಸವಿಲ್ಲ - ಸಿಎಂ ಬೊಮ್ಮಾಯಿ

ಸೋಮವಾರವಷ್ಟೇ ಗುಂಡ್ಲುಪೇಟೆಯಲ್ಲಿ ಅಮಿತ್ ಷಾ ರೋಡ್ ಶೋ ಮಾಡಿ ಕಮಲಪಡೆಗೆ ರಣೋತ್ಸಾಹ ತುಂಬಿದ್ದರು. ಈಗ ಕೈ ನಾಯಕಿ ಎಂಟ್ರಿ ಕೊಡುತ್ತಿದ್ದು ಕೈ ಪಡೆಗೆ ಶಕ್ತಿ ತುಂಬಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News