ಶೀಘ್ರದಲ್ಲೇ ಭಾರತಕ್ಕೆ ವಿಜಯ್ ಮಲ್ಯ

ಮದ್ಯದ ದೊರೆ ವಿಜಯ್ ಮಲ್ಯ ಅವರು ದೇಶದ 17 ಬ್ಯಾಂಕುಗಳಿಂದ ಒಂಬತ್ತು ಸಾವಿರ ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅವರು ಮಾರ್ಚ್ 2, 2016 ರಂದು ಭಾರತವನ್ನು ತೊರೆದು ಬ್ರಿಟನ್‌ಗೆ ಪಲಾಯನ ಮಾಡಿದರು.  

Last Updated : Jun 4, 2020, 07:00 AM IST
ಶೀಘ್ರದಲ್ಲೇ ಭಾರತಕ್ಕೆ ವಿಜಯ್ ಮಲ್ಯ  title=

ನವದೆಹಲಿ: ರಾಜತಾಂತ್ರಿಕ ರಂಗದಲ್ಲಿ ಭಾರತ ಉತ್ತಮ ಯಶಸ್ಸನ್ನು ಸಾಧಿಸಿದ್ದು ಭಾರತದ ಬ್ಯಾಂಕುಗಳಿಂದ ಸಾವಿರಾರು ಕೋಟಿ ಹಣ ಪಡೆದು ಪರಾರಿಯಾಗಿದ್ದ ಮದ್ಯ ಉದ್ಯಮಿ ವಿಜಯ್ ಮಲ್ಯ (Vijay Mallya)  ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ. 

ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಬ್ರಿಟಿಷ್ ನ್ಯಾಯಾಲಯ ಈಗಾಗಲೇ ಮುದ್ರೆ ಹಾಕಿದೆ. ಮಲ್ಯ 9 ಸಾವಿರ ಕೋಟಿ ರೂ.ಗಳನ್ನು ಬ್ಯಾಂಕ್‌ಗಳಿಗೆ ಹಿಂದಿರುಗಿಸಲಿಲ್ಲ ಎಂಬ ಆರೋಪವಿದೆ. ಮಲ್ಯ ಬ್ಯಾಂಕ್ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳನ್ನು ಎದುರಿಸುತ್ತಿದ್ದು ಈ ಸಂಬಂಧ  ಬ್ರಿಟನ್‌ನಲ್ಲಿ ಎಲ್ಲಾ ಕಾನೂನು ವಿಧಿವಿಧಾನಗಳು ಪೂರ್ಣಗೊಂಡಿವೆ. ಹೀಗಾಗಿ ವಿಜಯ್ ಮಲ್ಯ ಅವರನ್ನು ಯಾವುದೇ ಸಮಯದಲ್ಲಿ ಭಾರತಕ್ಕ ಮರಳಿ ತರಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ವೈದ್ಯಕೀಯ ತಂಡವು ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಸಲಿದೆ:
ಪರಾರಿಯಾದ ಉದ್ಯಮಿ ಜೊತೆ ಕೇಂದ್ರ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇರುತ್ತಾರೆ. ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ವೈದ್ಯಕೀಯ ತಂಡವು ಅವರ ಆರೋಗ್ಯ ತಪಾಸಣೆ ನಡೆಸಲಿದೆ. ಮಲ್ಯ ರಾತ್ರಿಯಲ್ಲಿ ಮುಂಬೈಗೆ ಇಳಿದರೆ, ಅವರು ನಗರದ ಸಿಬಿಐ ಕಚೇರಿಯಲ್ಲಿ ಸ್ವಲ್ಪ ಸಮಯ ಕಳೆಯಬೇಕಾಗುತ್ತದೆ. ಬಳಿಕ ಅವರನ್ನು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಒಂದೊಮ್ಮೆ ಮಲ್ಯ ಹಗಲಿನಲ್ಲಿ ಭಾರತವನ್ನು ತಲುಪಿದರೆ ಅವರನ್ನು ನೇರವಾಗಿ ವಿಮಾನ ನಿಲ್ದಾಣದಿಂದ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ. ಸಿಬಿಐ ಮತ್ತು ಇಡಿ ಏಜೆನ್ಸಿಗಳು ನ್ಯಾಯಾಲಯದಲ್ಲಿ ಆತನ ರಿಮಾಂಡ್ ಅನ್ನು ಕೋರುತ್ತವೆ ಎಂದು ಮೂಲಗಳು ತಿಳಿಸಿವೆ.

ವಿಶೇಷವೆಂದರೆ, ಆಗಸ್ಟ್ 2018 ರಲ್ಲಿ ಬ್ರಿಟಿಷ್ ನ್ಯಾಯಾಲಯವು ಮಲ್ಯ ಅವರ ಮನವಿಯನ್ನು ಆಲಿಸುತ್ತಿದ್ದಾಗ ಹಸ್ತಾಂತರದ ನಂತರ ಮಲ್ಯರನ್ನು ಎಲ್ಲಿ ಇರಿಸಲಾಗುವುದು ಎಂಬ ಜೈಲಿನ ವಿವರಗಳನ್ನು ಭಾರತೀಯ ತನಿಖಾ ಸಂಸ್ಥೆಗಳಿಗೆ ಕೇಳಿಕೊಂಡಿತ್ತು. ನಂತರ ಏಜೆನ್ಸಿಗಳು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಸೆಲ್ ವೀಡಿಯೊವನ್ನು ಯುಕೆ ನ್ಯಾಯಾಲಯಕ್ಕೆ ಸಲ್ಲಿಸಿದವು, ಮಲ್ಯರನ್ನು ಭಾರತಕ್ಕೆ ಕರೆತಂದ ನಂತರ ಅಲ್ಲಿ ಇಡಲು ಯೋಜಿಸಲಾಗಿದೆ. ಎರಡು ಅಂತಸ್ತಿನ ಆರ್ಥರ್ ರಸ್ತೆ ಜೈಲು ಸಂಕೀರ್ಣದೊಳಗೆ ಮಲ್ಯರನ್ನು ಅತ್ಯಂತ ಸುರಕ್ಷಿತ ಬ್ಯಾರಕ್‌ನಲ್ಲಿ ಇಡಲಾಗುವುದು ಎಂದು ಏಜೆನ್ಸಿಗಳು ಯುಕೆ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.

ಅಬು ಸೇಲಂ, ಛೋಟಾ ರಾಜನ್, ಮುಸ್ತಫಾ ದೋಸ ಸೇರಿದಂತೆ ಹಲವಾರು ಕುಖ್ಯಾತ ಅಪರಾಧಿಗಳನ್ನು ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ. ಮುಂಬೈ ದಾಳಿ ನಡೆಸಿದ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಬ್ ಅವರನ್ನು ಸಹ ಅದೇ ಜೈಲಿನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಇರಿಸಲಾಗಿತ್ತು. ಅದೇ ಸಮಯದಲ್ಲಿ ಶೀನ್ ಬೋರಾ ಕೊಲೆ ಪ್ರಕರಣದ ಆರೋಪಿ ಪೀಟರ್ ಮುಖರ್ಜಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ಗೆ 13,500 ಕೋಟಿ ರೂ.ಗೆ ವಂಚಿಸಿದ ವಿಪುಲ್ ಅಂಬಾನಿಯನ್ನೂ ಈ ಜೈಲಿನಲ್ಲಿ ಇರಿಸಲಾಗಿದೆ.

ಮಲ್ಯ ಅವರು ದೇಶದ 17 ಬ್ಯಾಂಕುಗಳಿಂದ ಒಂಬತ್ತು ಸಾವಿರ ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅವರು ಮಾರ್ಚ್ 2, 2016 ರಂದು ಭಾರತವನ್ನು ತೊರೆದು ಬ್ರಿಟನ್‌ಗೆ ಪಲಾಯನ ಮಾಡಿದರು. ಈ ಹಿನ್ನೆಲೆಯಲ್ಲಿ ಮಲ್ಯರನ್ನು ಹಸ್ತಾಂತರಿಸುವಂತೆ ಭಾರತೀಯ ಏಜೆನ್ಸಿಗಳು ಯುಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದವು ಮತ್ತು ಸುದೀರ್ಘ ಹೋರಾಟದ ನಂತರ ಯುಕೆ ನ್ಯಾಯಾಲಯವು ಮೇ 14 ರಂದು ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಮನವಿಯನ್ನು ಮೊಹರು ಮಾಡಿತು.

Trending News