ಘಜಿಯಾಬಾದ್ನಲ್ಲಿ ಇಂದು ಪ್ರಿಯಾಂಕಾ ಗಾಂಧಿ ರೋಡ್ ಶೋ

ಕಾಂಗ್ರೆಸ್ ಸ್ಟಾರ್ ಪ್ರಚಾರಕರಾದ ಪ್ರಿಯಾಂಕ ಗಾಂಧಿ ಘಜಿಯಾಬಾದ್ನಲ್ಲಿಂದು ಚುನಾವಣಾ ಪ್ರಚಾರ ನಡೆಸಲಿದ್ದಾರೆ. 

Last Updated : Apr 5, 2019, 11:18 AM IST
ಘಜಿಯಾಬಾದ್ನಲ್ಲಿ ಇಂದು ಪ್ರಿಯಾಂಕಾ ಗಾಂಧಿ ರೋಡ್ ಶೋ title=
File Image

ಘಜಿಯಾಬಾದ್: ಎಪ್ರಿಲ್ 11ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಜಯಕ್ಕಾಗಿ ಪಣತೊಟ್ಟಿದ್ದಾರೆ. ಉತ್ತರ ಪ್ರದೇಶದ ಘಜಿಯಾಬಾದ್ ಕ್ಷೇತ್ರದಿಂದ ಡಾಲಿ ಶರ್ಮಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಏಪ್ರಿಲ್ 5 ರಂದು ಶುಕ್ರವಾರ ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸಿ ಅವರ ಪರ ಮತ ಯಾಚಿಸಲಿದ್ದಾರೆ. 

ಮಾಹಿತಿ ಪ್ರಕಾರ ಘಂತಾಘರ್ ಪ್ರದೇಶದಲ್ಲಿರುವ ಭಗತ್ ಸಿಂಗ್ ಪ್ರತಿಮೆಗೆ ಪುಷ್ಪಾರ್ಪಣೆ ಸಲ್ಲಿಸಿದ ನಂತರ ಜಿಟಿ ರಸ್ತೆಯಲ್ಲಿರುವ ರಾಮ್ಟೆ ರಾಮ್ ನಿಂದ ರೋಡ್ ಶೋ ಪ್ರಾರಂಭವಾಗಲಿದ್ದು, ಅಲ್ಲಿಂದ ದಾಸ್ನಾ ಗೇಟ್, ಜಟ್ವಾಡಾದ ಮೂಲಕ ಮೊಲಿವಾಡಾ ಚೌಕ್ನಲ್ಲಿ ರೋಡ್ ಶೋ ಕೊನೆಗೊಳ್ಳಲಿದೆ. ಪೊಲೀಸ್ ಮತ್ತು ಎಸ್ಪಿಜಿ ಭದ್ರತಾ ಕಾರಣಗಳಿಗಾಗಿ ರೋಡ್ ಶೋ ಮಾರ್ಗವನ್ನು ಕಡಿಮೆ ಮಾಡಿದೆ ಎನ್ನಲಾಗಿದೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರಾದ ಪ್ರಿಯಾಂಕ ಗಾಂಧಿ ಘಜಿಯಾಬಾದ್ನಲ್ಲಿಂದು ಚುನಾವಣಾ ಪ್ರಚಾರಕ್ಕಾಗಿ ಬರುತ್ತಿರುವುದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ.

ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಾಲಿ ಶರ್ಮಾ:
ಘಾಜಿಯಾಬಾದ್ ಸಂಸದೀಯ ಕ್ಷೇತ್ರದಿಂದ ಕಾಂಗ್ರೆಸ್ ಡಾಲಿ ಶರ್ಮಾಗೆ ಪಕ್ಷದ ಟಿಕೆಟ್ ನೀಡಿದೆ. 2017 ರಲ್ಲಿ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು, ಬಿಜೆಪಿ ಅಭ್ಯರ್ಥಿ ಮತ್ತು ಪ್ರಸ್ತುತ ಮೇಯರ್ ಆಶಾ ಶರ್ಮಾ  ಅವರ ವಿರುದ್ಧ ಪರಾಭವಗೊಂಡಿದ್ದರು. ಮೇಯರ್ ಚುನಾವಣೆಯಲ್ಲಿ, ಡಾಲಿ ಶರ್ಮಾ 1,20,000 ಮತಗಳನ್ನು ಪಡೆದರು ಮತ್ತು ಎರಡನೇ ಸ್ಥಾನದಲ್ಲಿದ್ದರು. ಅವರ ತಂದೆ ನರೇಂದ್ರ ಭಾರದ್ವಾಜ್ ಅವರು ಕಾಂಗ್ರೆಸ್ನ ಜಿಲ್ಲಾ ಅಧ್ಯಕ್ಷರಾಗಿದ್ದಾರೆ ಮತ್ತು ಅವರ ಅಜ್ಜ ಕೂಡ ಕಾಂಗ್ರೆಸ್ನವರು.

Trending News