ಲಂಡನ್ನಿನ ರವೀಂದ್ರನಾಥ ಠಾಕೂರ್ ಮನೆ ಖರೀದಿಸಲು ಇಚ್ಛೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

1913 ರಲ್ಲಿ ಠಾಕೂರ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತ್ತು.

Last Updated : Nov 13, 2017, 03:18 PM IST
ಲಂಡನ್ನಿನ ರವೀಂದ್ರನಾಥ ಠಾಕೂರ್ ಮನೆ ಖರೀದಿಸಲು ಇಚ್ಛೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ  title=

ಕೊಲ್ಕತ್ತಾ: ನೊಬೆಲ್ ಪ್ರಶಸ್ತಿ ಪುರಸ್ಕೃತ, ಕವಿ ರವೀಂದ್ರನಾಥ್ ಠಾಕೂರ್ ಅವರ ಲಂಡನ್ನಿನ ಮನೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಠಾಕೂರ್ 1912ರಲ್ಲಿ ಲಂಡನ್ನಿನ ಆ ಮನೆಯಲ್ಲಿ ಕೆಲ ಸಮಯ ಕಳೆದಿದ್ದರು. ಅವರ ಖ್ಯಾತ ಪುಸ್ತಕವದ ಗೀತಾಂಜಲಿಯನ್ನು ಅಲ್ಲಿಯೇ ತರ್ಜುಮೆ ಮಾಡಿದ್ದರು. ಈ ಪುಸ್ತಕವು 1913 ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಠಾಕೂರ್ ಕೆಲಸವನ್ನು ಪ್ರೀತಿಸುವವರಿಗೆ ಈ ಮನೆಯು ಮೆಕ್ಕಾಗಿಂತ ಹೆಚ್ಚೇ ಸರಿ ಎಂದು ಅವರು ಅಭಿಪ್ರಾಯ ಪಡುವವರ ಪಟ್ಟಿಗೆ ಈಗ ಮಮತಾ ಬ್ಯಾನರ್ಜಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. 

ವರದಿಯಂತೆ, ಉತ್ತರ ಲಂಡನ್ನ ಹ್ಯಾಮ್ಟೆಡ್ ಹೆತ್ನಲ್ಲಿರುವ ಹೀತ್ ವಿಲ್ಲಾಸ್ ಅನ್ನು ಖರೀದಿಸುವ ಅಭಿಲಾಷೆ ವ್ಯಕ್ತ ಪಡಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಈ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವುದಾಗಿ ತಿಳಿಸಿದ್ದಾರೆ.

 ಈ ಕುರಿತು ಚರ್ಚೆ  ನಡೆಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬ್ರಿಟನ್ನಿನ ಭಾರತದ ಹೈಕಮಿಷನರ್ ಆಗಿರುವ ದಿನೇಶ್ ಪಟ್ನಾಯಕ್ ಅವರನ್ನು ಲಂಡನ್ನಲ್ಲಿ ಒಂದು ಗಂಟೆಯ ಕಾಲ ಭೇಟಿ ಮಾಡಿ ಮನೆ ಖರೀದಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂದಾಜಿನಂತೆ ಮನೆ ಖರೀದಿಗೆ 2.7 ದಶಲಕ್ಷ ಪೌಂಡುಗಳಿಗಿಂತ ಹೆಚ್ಚಿನ ವೆಚ್ಚ ತಗುಲಲಿದೆ.  

ಏತನ್ಮಧ್ಯೆ, ಬ್ರಿಟನ್ನ ವಿಂಬಲ್ಡನ್ ನ ಸೋದರಿ ನಿವೇದಿತಾ ಅವರ ಮನೆಗೆ ಪರಂಪರೆಯನ್ನು ನೀಡಲಾಗಿದೆ. ಆ ಸಮಾರಂಭದಲ್ಲಿ ಭಾನುವಾರ ಬ್ಯಾನರ್ಜಿ ಪಾಲ್ಗೊಂಡಿದ್ದರು, ಮಾತ್ರವಲ್ಲದೇ, ಕಾರ್ಯಕ್ರಮದ ಮುಖ್ಯ ಅತಿಥಿಯೂ ಆಗಿದ್ದರು.

Trending News