ಆ.15ರಂದು ಬಿಜೆಪಿ ಹಠಾವೋ ಮೆಗಾ ರ್ಯಾಲಿ: ಮಮತಾ ಬ್ಯಾನರ್ಜಿ

ಆಗಸ್ಟ್ 15 ರಂದು ಬಿಜೆಪಿ ಹಠಾವೋ, ದೇಶ್‌ ಬಚಾವೋ ರ್ಯಾಲಿ ಹಮ್ಮಿಕೊಳ್ಳಲಿದೆ.

Last Updated : Jul 22, 2018, 12:48 PM IST
ಆ.15ರಂದು ಬಿಜೆಪಿ ಹಠಾವೋ ಮೆಗಾ ರ್ಯಾಲಿ: ಮಮತಾ ಬ್ಯಾನರ್ಜಿ title=

ಕೋಲ್ಕತಾ: ದೇಶದ ಜನರಲ್ಲಿ ಕ್ರೌರ್ಯ ಬಿತ್ತುತ್ತಿರುವ ಬಿಜೆಪಿ ನಿರ್ನಾಮಕ್ಕೆ ಮುಂದಾಗಿರುವ ಟಿಎಂಸಿ ಆಗಸ್ಟ್ 15ರಂದು ಬಿಜೆಪಿ ಹಠಾವೋ, ದೇಶ್‌ ಬಚಾವೋ ರ್ಯಾಲಿ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ. 

ಶನಿವಾರ ನಡೆದ ತೃಣಮೂಲ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವು ಆಗಸ್ಟ್ 15 ರಂದು ಬಿಜೆಪಿ ಹಠಾವೋ, ದೇಶ್‌ ಬಚಾವೋ ರ್ಯಾಲಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಬಿಜೆಪಿಯನ್ನು ತೊಲಗಿಅಳು ತಾವು ಏಕಾಂಗಿ ಹೋರಾಟ ನಡೆಸುವುದಾಗಿ ಹೇಲಿದ ಮಮತಾ ಬ್ಯಾನರ್ಜಿ, "2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸುವುದಿಲ್ಲ. ನನಗೆ ಸಿಪಿಎಂ ಅಥವಾ ಕಾಂಗ್ರೆಸ್'ನ ಸಹಕಾರದ ಅಗತ್ಯವಿಲ್ಲ" ಎಂದು ಹೇಳಿದರು. 

ಮುಂದುವರೆದು ಮಾತಾನಾಡಿದ ಅವರು, "ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಲಿದೆ. ಲೋಕಸಭೆಯಲ್ಲಿ ಅವಿಶ್ವಾಸ ಮತದಾನದಲ್ಲಿ ಅವರು (ಎನ್ಡಿಎ) 325 ಮತಗಳನ್ನು ಪಡೆದರು, ಆದರೆ 2019 ಲೋಕಸಭಾ ಚುನಾವಣೆಯಲ್ಲಿ ಅವರ ಸಾಮರ್ಥ್ಯ ಕೇವಲ 100 ಸ್ಥಾನಗಳಿಗೆ ಸೀಮಿತವಾಗಲಿದೆ" ಎಂದು ನುಡಿದರು.
 

Trending News